ADVERTISEMENT

ರೋಟರಿ ಕೋಟ ಸಿಟಿ–ಉಚಿತ ವೈದ್ಯಕೀಯ ಶಿಬಿರ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2016, 6:29 IST
Last Updated 14 ಮಾರ್ಚ್ 2016, 6:29 IST

ಬ್ರಹ್ಮಾವರ: ರೋಗಿಗಳು ವೈದ್ಯರನ್ನು ದೇವರೆಂಬ ಭಾವನೆಯಿಂದ ನೋಡು ತ್ತಾರೆ. ರೋಗಿಗಳ ಕಣ್ಣೊರೆಸುವ, ಸಾಂತ್ವನ ನೀಡುವ ಕೆಲಸ ವೈದ್ಯರಿಂದ ಆಗಬೇಕು ಎಂದು ರೋಟರಿ ವಲಯದ ಮಾಜಿ ಸಹಾಯಕ ಗವರ್ನರ್‌ ದಿನೇಶ್ ಹೆಗ್ಡೆ ಆತ್ರಾಡಿ ಹೇಳಿದರು.

ಸಾಸ್ತಾನ ಯಡಬೆಟ್ಟು ವಿದ್ಯೋದಯ  ಖಾಸಗಿ ಅನುದಾನಿತ ಹಿರಿಯ ಪ್ರಾಥ ಮಿಕ ಶಾಲೆಯಲ್ಲಿ ಇತ್ತೀಚೆಗೆ ಕೋಟ ಸಿಟಿ ರೋಟರಿ ಕ್ಲಬ್‌, ಮಣಿಪಾಲದ ಕಸ್ತೂರಿ ಬಾ ಆಸ್ಪತ್ರೆ ಮತ್ತು ಮೂಡಹಡು ಯಡ ಬೆಟ್ಟು ಕೇಸರಿ ಯುವಜನ ಸಂಘದ  ಸಹ ಯೋಗದಲ್ಲಿ ನಡೆದ ಉಚಿತ ವೈದ್ಯಕೀಯ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾಯಿಲೆ ಬಂದಾಗ ಔಷಧೋಪ ಚಾರ ನೀಡುವುದರ ಜತೆಗೆ ಕಾಯಿಲೆ ಬಾರದಂತೆ ಆರೋಗ್ಯ ರಕ್ಷಣೆಯ ಬಗ್ಗೆ ಜನರಿಗೆ ಮಾಹಿತಿಯನ್ನು, ತರಬೇತಿ ಯನ್ನು ನಿರಂತರವಾಗಿ ನೀಡಬೇಕು. ಸಮಾಜದ ಸ್ವಾಸ್ಥ್ಯ ರಕ್ಷಣೆಯ  ವಿಷಯ ಬಂದಾಗ ರೋಟರಿ ಸಂಸ್ಥೆಯು ಸದಾ ಮುಂಚೂಣಿಯಲ್ಲಿರುತ್ತದೆ ಎಂದು ಅವರು ಹೇಳಿದರು. ಕೋಟಿ ಸಿಟಿ ರೋಟರಿ ಕ್ಲಬ್‌ ಅಧ್ಯಕ್ಷ ಡಾ.ಗಣೇಶ್‌ ಯು ಅಧ್ಯಕ್ಷತೆ ವಹಿಸಿದ್ದರು.

ವಿದ್ಯೋದಯ ಖಾಸಗಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾ ಧ್ಯಾಯ ಕೆ.ಸುಬ್ರಹ್ಮಣ್ಯ ವಾಕುಡ, ರೋಟರಿ ಕ್ಲಬ್‌ ಕೋಟ ಸಿಟಿ ನಿಯೋಜಿತ ಅಧ್ಯಕ್ಷ ನಿತ್ಯಾನಂದ ನಾಯರಿ, ಕಸ್ತೂರ್ಬಾ ಆಸ್ಪತ್ರೆ ವೈದ್ಯರಾದ ಡಾ. ಮನ ಲಿಕಾ ಹಜಾರಿಕಾ, ಡಾ.ಶ್ರೀಚರಿತ್ ಶೆಟ್ಟಿ, ಡಾ.ಶ್ರೀಧರ್, ಡಾ.ನೇಹಾ ಅವರು ಕಣ್ಣು, ಚರ್ಮ, ಹೃದಯ ಮತ್ತು ಶ್ವಾಸಕೋಶ ಗಳ ರೋಗಗಳ ಬಗ್ಗೆ ಮಾಹಿತಿಯನ್ನು ನೀಡಿ ತಪಾಸಣೆ ಮಾಡಿದರು.

ರೋಟರಿ ಕೋಟ ಸಿಟಿ ಮಾಜಿ ಅಧ್ಯಕ್ಷ ಶಾನಾಡಿ ಉದಯ್‌ ಕುಮಾರ್ ಹೆಗ್ಡೆ, ಸದಸ್ಯರಾದ ಸುಭಾಶ್ಚಂದ್ರ ಶೆಟ್ಟಿ, ಪ್ರಭಾಕರ್ ಶೆಟ್ಟಿ, ಉದಯ್‌ಕೋಟ, ಶ್ರೀಕಾಂತ್ ವಡೇರ ಹೋಬಳಿ, ಕೇಸರಿ ಯುವಜನ ಸಂಘದ ಕಾರ್ಯದರ್ಶಿ ಲಕ್ಷ್ಮಣ ಶೆಟ್ಟಿಗಾರ್‌, ವಿಘ್ನೇಶ್ವರ ಕಾರಂತ, ರಘು ಪೂಜಾರಿ, ರಮೇಶ್ ಪೂಜಾರಿ, ಸತ್ಯನಾರಾಯಣ ಉಡುಪ, ರಾಮಕೃಷ್ಣ ಐತಾಳ, ಸೀತಾರಾಮ ಮಯ್ಯ ಮತ್ತಿತ ರರು ಉಪಸ್ಥಿತರಿದ್ದರು.

ಡಾ.ಗಣೇಶ್ ಯು ಸ್ವಾಗತಿಸಿದರು. ರೋಟರಿಯ ಕಾರ್ಯದರ್ಶಿ ರಾಧಾಕೃಷ್ಣ ವಂದಿಸಿದರು. ಕೇಸರಿ ಯುವಜನ  ಸಂಘದ ಅಧ್ಯಕ್ಷ  ಕೃಷ್ಣ ಪೂಜಾರಿ  ಪ್ರಾಸ್ತಾಕವಾಗಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.