ADVERTISEMENT

‘ಜನತೆಯ ಕನಸು ಸಾಕಾರವಾದಾಗ ನಿಜವಾದ ಸ್ವಾತಂತ್ರ್ಯ’

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2016, 6:27 IST
Last Updated 14 ಮಾರ್ಚ್ 2016, 6:27 IST

ಪಡುಬಿದ್ರಿ: ‘ಜನತೆಯ ಕನಸುಗಳು ಸಾಕಾರವಾದಾಗ ದೇಶಕ್ಕೆ ಸಿಕ್ಕಿರುವ ಸ್ವಾತಂತ್ರ್ಯಕ್ಕೆ ನಿಜವಾದ ಅರ್ಥ ಬರುತ್ತದೆ’ ಎಂದು ರಾಜ್ಯ ಸಭಾ ಸದಸ್ಯ ಆಸ್ಕರ್ ಫರ್ನಾಂಡಿಸ್‌ ಹೇಳಿದರು. ತೆಂಕ ಎರ್ಮಾಳಿನ ರಾಜೀವ್ ಗಾಂಧಿ ನ್ಯಾಷನಲ್ ಅಕಾಡೆಮಿ ಆಫ್ ಪೊಲಿಟಿ ಕಲ್ ಎಜ್ಯುಕೇಶನ್ ಸಂಸ್ಥೆಯು ಏರ್ಪಡಿಸಿ ರುವ ‘ಭಾರತವು ಅರಿಯಲು ಬಯಸಿದೆ' ಎಂಬ ಶೀರ್ಷಿಕೆಯಡಿ ದೇಶದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಮೊಬೈಲ್ ಮೂಲಕ ಚಿತ್ರೀಕರಿಸಿ ರಾಗ್ನ ಡಾಟ್‌ ಇನ್ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡ ಬೇಕಾದ ಮೂರು ನಿಮಿಷದ ಚಿತ್ರ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿ ದರು.

‘ಜನರ ಕನಸುಗಳು ಸಾಕಾರದ ಬಗ್ಗೆ ಕೇಂದ್ರದಲ್ಲಿ ಆಡಳಿತ ನಡೆಸಿದ್ದ ಯುಪಿಎ ಸರ್ಕಾರ, ಯುಪಿಎ ಮಿತ್ರ ಕೂಟದ ಅಧ್ಯಕ್ಷೆ ಸೋನಿಯಾ ಅರಿತಿ ದ್ದರು. ಅದಕ್ಕನುಗುಣ ವಾಗಿ ಎರಡು ಅವಧಿಗಳ ಆಡಳಿತದಲ್ಲಿ ಕಾರ್ಯರೂಪ ಕ್ಕಿಳಿಸಿರುವ ನಾಲ್ಕು ವಿವಿಧ ಯೋಜನೆಗ ಳಾದ ಆರ್‌ಟಿಐ, ಆರ್‌ಟಿಇ, ರಾಷ್ಟ್ರೀಯ ಆಹಾರ ಭದ್ರತಾ ಮಸೂದೆ 2011 ಹಾಗೂ ನರೇಗಾ ಯೋಜನೆಗಳು ಜನ ಸಾಮಾನ್ಯರನ್ನು ತಲುಪಿದೆ. ಆ ಮೂಲಕ ವಾಗಿ ರಾಜ್ಯದಲ್ಲಿ  ಸರ್ಕಾರ ಅನ್ನಭಾಗ್ಯ ದಂತಹ ಕಾರ್ಯಕ್ರಮ ಗಳನ್ನು ಜಾರಿಗೆ ತರಲು ಸಾಧ್ಯವಾಯಿತು’ ಎಂದರು.

ಸಚಿವರಾದ ವಿನಯಕುಮಾರ್ ಸೊರಕೆ, ರಮಾನಾಥ ರೈ ಹಾಗೂ ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್‌ ಚಂದ್ರ ಶೆಟ್ಟಿ, ಐವನ್ ಡಿಸೋಜ ಇದ್ದರು. ಕೆಪಿಸಿಸಿ ಕಾರ್ಯದರ್ಶಿ ಎಂ. ಎ. ಗಫೂರ್,  ನವೀನ್‌ ಚಂದ್ರ ಜೆ. ಶೆಟ್ಟಿ,  ಅಬ್ದುಲ್ ಅಜೀಜ್, ನಾಯಕರಾದ ಅಮೃತ್ ಶೆಣೈ, ದಿನೇಶ್ ಕಿಣಿ, ತೆಂಕ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅರುಣಾ ಕುಮಾರಿ, ಮೋಹನ್ ನಂಬಿಯಾರ್ ಮತ್ತಿತರರು ಉಪಸ್ಥಿತರಿದ್ದರು.

ರಾಜೀವ್ ಗಾಂಧಿ ನ್ಯಾಷನಲ್ ಅಕಾಡೆಮಿ ಆಫ್ ಪೊಲಿಟಿಕಲ್ ಎಜ್ಯು ಕೇಶನನ ನಿರ್ದೇಶಕ ಅಶೋಕ್‌ ಕುಮಾರ್ ಕೊಡವೂರು ಸ್ವಾಗತಿಸಿದರು. ಪ್ರಸನ್ನ ಜಾನ್ಸನ್ ನಿರ್ವಹಿಸಿದರು. ದೀಪಕ್‌ ಕುಮಾರ್ ವೈ ವಂದಿಸಿದರು. ರಾಷ್ಟ್ರ ಮಟ್ಟದ ಈ ಮೂರು ನಿಮಿಷಗಳ ಚಿತ್ರ ನಿರ್ಮಾಣ ಸ್ಪರ್ಧೆಯು ಮಾ. 13ರಿಂದ ಏ. 12ರವರೆಗೆ ಮುಂದುವರಿ ಯಲಿದೆ. ಕಾಲೇಜು ವಿದ್ಯಾರ್ಥಿಗಳು ಯುಪಿಎ ಸರ್ಕಾರ ಜಾರಿಗೆ ತಂದಿರುವ ಮೇಲಿನ ನಾಲ್ಕು ಯೋಜನೆಗಳ ಕುರಿ ತಾಗಿ ಚಿತ್ರವನ್ನು ನಿರ್ಮಿಸಿ ರಾಗ್ನ ಡಾಟ್‌ ಇನ್‌ ವೆಬ್‌ಸೈಟ್‌ಗೆ ಅಪ್ಲೋಡ್ ಮಾಡ ಬಹುದಾಗಿದೆ. ಹೆಚ್ಚಿನ ವಿವರಗಳಿಗಾಗಿ ಮೊ. ಸಂಖ್ಯೆ: 94481 09152ನ್ನು ಸಂಪರ್ಕಿಸಬಹುದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.