ADVERTISEMENT

‘ಸ್ನೇಹಕ್ಕೆ ಮಿಗಿಲಾದ ಸಂಪತ್ತಿಲ್ಲ’

ಹೆಬ್ರಿ: ‘ಸ್ನೇಹ ಸೌರಭ’ ಗ್ರಂಥ ಲೋಕಾರ್ಪಣೆ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2016, 6:33 IST
Last Updated 14 ಮಾರ್ಚ್ 2016, 6:33 IST
ಹೆಬ್ರಿಯ ಅನಂತ ಪದ್ಮನಾಭ ಸನ್ನಿಧಿಯಲ್ಲಿ ಸಾಹಿತ್ಯ ಸಂಘಟಕ ಎಚ್.ಭಾಸ್ಕರ ಜೋಯಿಸ್ ಅವರು ಹೆಬ್ರಿ ಟಿ.ಜಿ.ಆಚಾರ್ಯ ಅಭಿನಂದನಾ ಗ್ರಂಥದ ಪರಿಷ್ಕೃತ ಆವೃತ್ತಿ 'ಸ್ನೇಹ ಸೌರಭ'ವನ್ನು ಲೋಕಾರ್ಪಣೆಗೊಳಿಸಿದರು.
ಹೆಬ್ರಿಯ ಅನಂತ ಪದ್ಮನಾಭ ಸನ್ನಿಧಿಯಲ್ಲಿ ಸಾಹಿತ್ಯ ಸಂಘಟಕ ಎಚ್.ಭಾಸ್ಕರ ಜೋಯಿಸ್ ಅವರು ಹೆಬ್ರಿ ಟಿ.ಜಿ.ಆಚಾರ್ಯ ಅಭಿನಂದನಾ ಗ್ರಂಥದ ಪರಿಷ್ಕೃತ ಆವೃತ್ತಿ 'ಸ್ನೇಹ ಸೌರಭ'ವನ್ನು ಲೋಕಾರ್ಪಣೆಗೊಳಿಸಿದರು.   

ಹೆಬ್ರಿ: ‘ಸ್ನೇಹಕ್ಕೆ ಮಿಗಿಲಾದ ಸಂಪತ್ತಿಲ್ಲ. ಹೆಬ್ರಿಯಲ್ಲಿ ಗುರುತಿಸುವ ಕಣ್ಣುಗಳು, ಗೌರವಿಸುವ ಹೃದಯಗಳಿರುವುದರಿಂದ ಮಾದರಿ ಕಾರ್ಯಕ್ರಮ ನಡೆಸಲು ಸಾಧ್ಯ ವಾಯಿತು’ ಎಂದು ಸಾಹಿತಿ ಅಂಬಾ ತನಯ ಮುದ್ರಾಡಿ ಅಭಿಪ್ರಾಯಪಟ್ಟರು. ಹೆಬ್ರಿಯ ಅನಂತ ಪದ್ಮನಾಭ ದೇವ ಸ್ಥಾನದ ಆವರಣದಲ್ಲಿ ಭಾನುವಾರ ನಡೆದ ಕೃತಜ್ಞತೆ ಸಮರ್ಪಣೆ ಮತ್ತು ಗ್ರಂಥ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಅಭಿನಂದನಾ ಗ್ರಂಥದ ಪರಿಷ್ಕೃತ ಆವೃತ್ತಿ ಅಚ್ಚುಕಟ್ಟಾಗಿ ಪ್ರಕಟಗೊಂಡಿದೆ. ಇದಕ್ಕೆ ಸಹಕರಿಸಿದ ಪ್ರತಿಯೊಬ್ಬರು ಅಭಿನಂದನಾರ್ಹರಾಗಿದ್ದಾರೆ. ಪ್ರಚಾರ ಕ್ಕಾಗಿ ಇಂತಹ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ ಎಂದು ಅನೇಕರು ಆರೋಪ ಮಾಡುತ್ತಾರೆ. ಆದರೆ, ನಾವು ಮಾಡುತ್ತಿರುವ ಕೆಲಸ ಜನರಿಗೆ ಗೊತ್ತಾಗ ಬೇಕೆಂದರೆ ಅದಕ್ಕೆ ಪ್ರಚಾರ ಬೇಕೇ ಬೇಕು. ಇಂತಹ ಕಾರ್ಯಕ್ರಮಗಳು ಬೇರೆಯವರಿಗೆ ಸ್ಫೂರ್ತಿಯಾಗುವ ಸಾಧ್ಯತೆ ಇರುವುದ ರಿಂದ ಪ್ರಚಾರ ಕೊಡಬೇಕು’ ಎಂದು ಹೇಳಿದರು.

ಸಾಹಿತ್ಯ ಸಂಘಟಕ ಎಚ್.ಭಾಸ್ಕರ ಜೋಯಿಸ್ ಅವರು ಅಭಿನಂದಾ ಗ್ರಂಥದ ಪರಿಷ್ಕೃತ ಆವೃತ್ತಿಯನ್ನು ಬಿಡು ಗಡೆಗೊಳಿಸಿ ಮಾತನಾಡಿ, ‘ಹೆಬ್ರಿ ಟಿ.ಜಿ. ಆಚಾರ್ಯ ಅವರಿಗೆ ಅಭಿನಂದನೆ ಸಲ್ಲಿಸಿ ರುವುದು ಹೆಬ್ರಿಗೆ ಸಿಕ್ಕ ಆದರ್ಶ ದಾಖಲೆ ಯಾಗಿದೆ. ಕಾರ್ಯಕ್ರಮವನ್ನು ಅಚ್ಚುಕ ಟ್ಟಾಗಿ ಆಯೋಜಿಸುವ ಮೂಲಕ ಮಾದರಿ ಕಾರ್ಯಕ್ರಮವನ್ನು ಸಂಘಟಿಸಿ ದಂತಾಗಿದೆ’ ಎಂದು ಅಭಿಪ್ರಾಯ ಪಟ್ಟರು.  ಹೆಬ್ರಿ ಟಿ.ಜಿ. ಆಚಾರ್ಯ ಅವರು ಯಶಸ್ಸಿಗೆ ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸಿದರು. ಹೆಬ್ರಿ ಜೇಸಿಐ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಎಚ್. ಯೋಗೀಶ್ ಭಟ್ ಮಾತನಾಡಿ, ’ಟಿ.ಜಿ. ಸ್ನೇಹದ ನಂಟು ಬೆಸೆಯುವ ಅಪೂರ್ವ ಅತ್ಮೀಯತೆ, ಸರಳತೆಯ ಅತ್ಯುತ್ತಮ ಕಾರ್ಯಕ್ರಮ’ ಎಂದು ಬಣ್ಣಿಸಿದರು.

ಸ್ನೇಹಲತಾ ಟಿ.ಜಿ.ಶ್ರೇಯಸ್,  ಟಿ.ಜಿ. ಸಮಿತಿಯ ಅಧ್ಯಕ್ಷ ಎಚ್.ದಿನಕರ ಪ್ರಭು, ಸಮಿತಿಯ ಪ್ರಮುಖರಾದ ಡಾ.ಎಚ್.ಎ. ಗಣಪತಿ, ಎಚ್.ರಮೇಶ ಆಚಾರ್ಯ, ಕೆ. ಜಿ.ಸುಧಾಕರ್, ಗ್ರಂಥಸಂಪಾದಕರಾದ ಎ.ನರಸಿಂಹ, ಪ್ರಮುಖರಾದ ಎಚ್. ಯೋಗೀಶ್ ಭಟ್, ಕೃಷ್ಣಮೂರ್ತಿ ರಾವ್, ಎಚ್.ಜನಾರ್ದನ್, ರವೀಂದ್ರ ನಾಥ ಶೆಟ್ಟಿ,ಸುಧಾಕರ ಆಚಾರ್ಯ, ಚಂದ್ರ ಶೇಖರಾಚಾರ್ಯ, ರಾಜೇಶಾರ್ಯ,ಶಿರಂ ಗೂರು ಸುಧಾಕರ ಶೆಟ್ಟಿ, ಕಬ್ಬಿನಾಲೆ ಮೋಹನ ಹೆಬ್ಬಾರ್, ಸೀತಾ ರಾಮ ಹೆಬ್ಬಾರ್, ಜಗದೀಶ ನಾಯಕ್, ಎಚ್.ಕೆ. ನಾರಾಯಣ ನಾಯ್ಕ್, ಅರುಣ್ ಕುಮಾರ್ ಹೆಗ್ಡೆ, ರಘುವೀರ್ ಆಚಾರ್ಯ, ಪ್ರಶಾಂತ ಆಚಾರ್ಯ, ನರೇಂದ್ರ ನಾಯಕ್, ಶ್ರೀಧರ ಆಚಾರ್ಯ, ಬಿ.ಎಂ. ಶೇಖರ ಆಚಾರ್ಯ, ತುಳಸಿ ಹರೀಶ್  ಉಪಸ್ಥಿತರಿದ್ದರು.ಎಚ್.ದಿನಕರ ಪ್ರಭು ಸ್ವಾಗತಿಸಿ ದರು. ಉಪನ್ಯಾಸಕ ಶಶಿಧರ ಶೆಟ್ಟಿ ನಿರೂಪಿ ಸಿದರು. ಕೆ.ಜಿ.ಸುಧಾಕರ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.