ADVERTISEMENT

ಉದ್ಯಮಿ ಮಿತ್ರರ ₹16 ಲಕ್ಷ ಕೋಟಿ ಸಾಲ ಮನ್ನಾ ಮಾಡಿದ ಪ್ರಧಾನಿ: ರಾಹುಲ್ ಆರೋಪ

ಪಿಟಿಐ
Published 24 ಏಪ್ರಿಲ್ 2024, 7:23 IST
Last Updated 24 ಏಪ್ರಿಲ್ 2024, 7:23 IST
<div class="paragraphs"><p>ರಾಹುಲ್ ಗಾಂಧಿ</p></div>

ರಾಹುಲ್ ಗಾಂಧಿ

   

(ಪಿಟಿಐ ಚಿತ್ರ)

ನವದೆಹಲಿ: 'ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಬಿಲಿಯನೇರ್ ಉದ್ಯಮಿ ಮಿತ್ರರ ₹16 ಲಕ್ಷ ಕೋಟಿ ಸಾಲವನ್ನು ಮನ್ನಾ ಮಾಡಿದ್ದಾರೆ' ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಬುಧವಾರ ಆರೋಪಿಸಿದ್ದಾರೆ.

ADVERTISEMENT

'ಪ್ರಧಾನಿ ಮಾಡಿರುವ ಈ ಅಪರಾಧವನ್ನು ದೇಶದ ಜನತೆ ಎಂದಿಗೂ ಕ್ಷಮಿಸಲಾರರು' ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಸಾಮಾಜಿಕ ಮಾಧ್ಯಮ 'ಎಕ್ಸ್' ಈ ಕುರಿತು ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, ಭಾರತೀಯರ ಗಾಯಕ್ಕೆ ಮದ್ದು ಆಗಬಹುದಾಗಿದ್ದ ಈ ಹಣವನ್ನು 'ಅದಾನಿ'ಗಳ ಸಂಪಾದನೆಗಾಗಿ ವ್ಯಯ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.

'ಬಿಲಿಯನೇರ್ ಉದ್ಯಮಿ ಮಿತ್ರರ ₹16 ಲಕ್ಷ ಕೋಟಿ ಸಾಲವನ್ನು ಪ್ರಧಾನಿ ನರೇಂದ್ರ ಮೋದಿ ಮನ್ನಾ ಮಾಡಿದ್ದಾರೆ. ಈ ಹಣದಲ್ಲಿ 16 ಕೋಟಿ ಯುವಜನತೆಗೆ ವರ್ಷಕ್ಕೆ ₹1 ಲಕ್ಷ ಸಂಬಳದ ಉದ್ಯೋಗ ದೊರಕುತ್ತಿತ್ತು. 16 ಕೋಟಿ ಮಹಿಳೆಯರಿಗೆ ವರ್ಷಕ್ಕೆ ₹1 ಲಕ್ಷ ನೀಡಿ ಅವರ ಕುಟುಂಬಗಳ ಬದುಕನ್ನೇ ಬದಲಾಯಿಸಬಹುದಿತ್ತು. 10 ಕೋಟಿ ರೈತ ಕುಟುಂಬಗಳ ಸಾಲ ಮನ್ನಾ ಮಾಡಿ ಅಸಂಖ್ಯಾತ ಆತ್ಮಹತ್ಯೆಗಳನ್ನು ತಡೆಯಬಹುದಿತ್ತು. ಇಡೀ ದೇಶಕ್ಕೆ 20 ವರ್ಷಗಳ ಕಾಲ ಕೇವಲ ₹400ಕ್ಕೆ ಗ್ಯಾಸ್ ಸಿಲಿಂಡರ್ ನೀಡಬಹುದಿತ್ತು. ಭಾರತೀಯ ಸೇನೆಯ ಸಂಪೂರ್ಣ ವೆಚ್ಚವನ್ನು ಮೂರು ವರ್ಷಗಳವರೆಗೆ ಭರಿಸಬಹುದಿತ್ತು. ದಲಿತ, ಬುಡಕಟ್ಟು ಮತ್ತು ಹಿಂದುಳಿದ ವರ್ಗದವರಿಗೆ ಪದವಿವರೆಗೆ ಉಚಿತ ಶಿಕ್ಷಣ ನೀಡಬಹುದಿತ್ತು' ಎಂದು ಅವರು ಉಲ್ಲೇಖಿಸಿದ್ದಾರೆ.

'ಆದರೆ ಈಗ ಪರಿಸ್ಥಿತಿ ಬದಲಾಗಲಿದೆ. ದೇಶದ ಪ್ರತಿಯೊಬ್ಬ ಪ್ರಜೆಯ ಪ್ರಗತಿಗಾಗಿ ಕಾಂಗ್ರೆಸ್ ಸರ್ಕಾರ ನಡೆಸಲಿದೆ' ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.