ADVERTISEMENT

ದೇಶದ ಭವಿಷ್ಯಕ್ಕೆ ಮಹತ್ವದ ಚುನಾವಣೆ: ದತ್ತಾತ್ರೇಯ ಹೊಸಬಾಳೆ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2024, 14:36 IST
Last Updated 26 ಏಪ್ರಿಲ್ 2024, 14:36 IST
<div class="paragraphs"><p>ದತ್ತಾತ್ರೇಯ ಹೊಸಬಾಳೆ</p></div>

ದತ್ತಾತ್ರೇಯ ಹೊಸಬಾಳೆ

   

ಬೆಂಗಳೂರು: ‘ದೇಶದ ಭವಿಷ್ಯದ ದೃಷ್ಟಿಯಿಂದ ಈ ಬಾರಿಯ ಲೋಕಸಭಾ ಚುನಾವಣೆ ಹಿಂದೆಂದಿಗಿಂತಲೂ ಹೆಚ್ಚು ಮಹತ್ವದ್ದು’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅಭಿಪ್ರಾಯಪಟ್ಟರು.

ಶೇಷಾದ್ರಿಪುರ ಮತಗಟ್ಟೆಯಲ್ಲಿ ಶುಕ್ರವಾರ ಮತದಾನ ಮಾಡಿದ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.

ADVERTISEMENT

‘ದೇಶದ ಅಭಿವೃದ್ಧಿಗೆ, ವಿಶ್ವದಲ್ಲಿ ಭಾರತದ ಗೌರವಕ್ಕೆ, ಈ ದೇಶದ ಕೋಟ್ಯಂತರ ಜನರ ಜೀವನ ಹಸನಾಗಲು, ಸುಖ– ಸಮೃದ್ಧಿ ಹೊಂದಲು ಈ ಚುನಾವಣೆಯ ಫಲಿತಾಂಶ ಮಹತ್ತರವಾದ ಭೂಮಿಕೆ ವಹಿಸಲಿದೆ’ ಎಂದು ಅವರು ಹೇಳಿದರು.

‘ನಮ್ಮ ದೇಶದಲ್ಲಿ ಸಂವಿಧಾನಕ್ಕೆ ಅನುಗುಣವಾಗಿಯೇ ಎಲ್ಲ ಹಂತಗಳಲ್ಲೂ ಚುನಾವಣೆಗಳು ನಡೆಯುತ್ತವೆ. ಸಮಾಜದ ಎಲ್ಲರೂ ಅಂದರೆ ನೂರಕ್ಕೆ ನೂರರಷ್ಟು ಜನ ಮತದಾನ ಮಾಡಬೇಕೆಂದು ಸಂಘದ ಕಾರ್ಯಕರ್ತರು ಕೆಲಸ ಮಾಡುತ್ತಿದ್ದಾರೆ. ಪ್ರಜಾತಂತ್ರವನ್ನು ಗೆಲ್ಲಿಸಿ; ಭಾರತವನ್ನು ಉಳಿಸಿ ಭಾರತವನ್ನು ಸಮೃದ್ಧಪಡಿಸಿ ಎಂಬ ಉದ್ದೇಶದಿಂದ ಅಭಿಯಾನ ನಡೆಸಲಾಗುತ್ತಿದೆ’ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.