ADVERTISEMENT

ರಸಸ್ವಾದ: ರಂಜಾನ್‌ಗೆ ಹಲೀಂ, ಚಿಕನ್‌ ರೋಲ್‌

ಪ್ರಜಾವಾಣಿ ವಿಶೇಷ
Published 30 ಮಾರ್ಚ್ 2024, 0:11 IST
Last Updated 30 ಮಾರ್ಚ್ 2024, 0:11 IST
   

ಹಲೀಂ

ಬೇಕಾಗುವ ಸಾಮಗ್ರಿ: ಗೋಧಿ ಕಾಲು ಕೆ.ಜಿ, ಕಾಲು ಕೆಜಿ ಅಕ್ಕಿ, ಕಾಲು ಕೆ.ಜಿ ಕಡ್ಲೆಬೇಳೆ, ಕಾಲು ಕೆ.ಜಿ ಹೆಸರುಬೇಳೆ, ಕಾಲು ಕೆ.ಜಿ ತೊಗರಿ ಬೇಳೆ, ಕಾಲು ಕೆ.ಜಿ ಉದ್ದಿನಬೇಳೆ, 1 ಕೆ.ಜಿ. ಬೋನ್‌ಲೆಸ್‌ ಮಟನ್‌, ಕಾಲು ಕೆ.ಜಿ ಈರುಳ್ಳಿ. 50 ಗ್ರಾಂ ಶುಂಠಿ ಬೆಳ್ಳುಳ್ಳಿ ಪೇಸ್ಟ್‌. ಮೇಲೆ ತಿಳಿಸಿದ ಬೇಳೆಗಳನ್ನು ಎರಡು ಗಂಟೆ ನೀರಿನಲ್ಲಿ ನೆನಸಿಡಬೇಕು. ನೆನಸಿದ ಬೇಳೆಗಳನ್ನು ಮಿಕ್ಸಿಯಲ್ಲಿ ರುಬ್ಬಿಕೊಳ್ಳಬೇಕು (ನೆನೆಸಿದ ಬೇಳೆ, ಅಕ್ಕಿಯನ್ನು ಹಾಗೆಯೂ ಹಾಕಿ ಬೇಯಿಸಿಕೊಳ್ಳಬಹುದು).

ಮಾಡುವ ವಿಧಾನ: ಕುಕ್ಕರ್‌ಗೆ ಎಣ್ಣೆ ಹಾಕಿ ನಾಲ್ಕು ಹೆಚ್ಚಿದ ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್‌, ಒಂದು ಚಮಚ ಅರಿಶಿಣ ಪುಡಿ, ಗರಂ ಮಸಲಾಪುಡಿ, ಅಚ್ಚ ಖಾರದಪುಡಿ, ಸಣ್ಣ ಕಟ್ಟು ಕೊತ್ತಂಬರಿ ಮೆಂತ್ಯೆ ಸೊಪ್ಪು, ಪುದೀನ, ನಾಲ್ಕು ಹಸಿರು ಮೆಣಸಿನ ಕಾಯಿಯನ್ನು ಹಾಕಬೇಕು. ಜೊತೆಗೆ ಮೂಳೆ ರಹಿತ ಮಾಂಸವನ್ನು ಹಾಕಬೇಕು. ರುಬ್ಬಿಕೊಂಡ ಬೇಳೆ ಪೇಸ್ಟ್‌ ಸೇರಿಸಿ. ಅಕ್ಕಿಗೆ ಹಾಕುವಂತೆ ಒಂದುವರೆಯಷ್ಟು ನೀರು ಸೇರಿಸಬೇಕು. ರುಚಿಗೆ ತಕ್ಕಷ್ಟು ಉಪ್ಪು ಹಾಕಬೇಕು. ಆರು ವಿಷಲ್‌ ಕೂಗಿಸಬೇಕು, ನಂತರ ಪೇಸ್ಟ್‌ ತರ ಆಗಿರುತ್ತದೆ. ಅದನ್ನು ಚೆನ್ನಾಗಿ ತಿರುವಿಕೊಂಡು ನಾಲ್ಕು ಚಮಚ ತುಪ್ಪ ಹಾಕಬೇಕು. ಈಗ ಹಲೀಂ ಸಿದ್ಧವಾಗುತ್ತದೆ.

ಹೆಚ್ಚಿದ ಈರುಳ್ಳಿಯನ್ನು ಕಂದು ಬಣ್ಣ ಬರುವಂತೆ ಫ್ರೈ ಮಾಡಿಕೊಳ್ಳಬೇಕು. ಗೋಡಂಬಿ, ಬಾದಾಮಿ ಪಿಸ್ತವನ್ನು ತಪ್ಪದಲ್ಲಿ ರೋಸ್ಟ್‌ ಮಾಡಿಕೊಳ್ಳಬೇಕು. ಎರಡನ್ನೂ ಸೇರಿಸಿ ಹಲೀಂ ಮೇಲೆ ಉದುರಿಸಿ ಸರ್ವ್‌ ಮಾಡಬೇಕು.

ADVERTISEMENT

ಚಿಕನ್‌ ರೋಲ್‌

ಬೇಕಾಗುವ ಸಾಮಗ್ರಿ: ಬೋನ್‌ಲೆಸ್‌ ಚಿಕನ್‌ ಅರ್ಧ ಕೆ.ಜಿ, ಗೋಧಿ ಹಿಟ್ಟು ಒಂದು ಕೆ.ಜಿ., ಅರ್ಧ ಚಮಚ ಗರಂ ಮಸಾಲ, ಅರ್ಧ ಚಮಚ ಧನಿಯಾ ಪುಡಿ, ಬೆಣ್ಣೆ, ರುಚಿಗೆ ತಕ್ಕಷ್ಟು ಉಪ್ಪು. ಕಾಲು ಕೆ.ಜಿ. ಈರುಳ್ಳಿ, ಕಾಲು ಕೆ.ಜಿ ಬಟಾಣಿ, ಅರ್ಧ ಚಮಚ ಅರಿಶಿಣ ಪುಡಿ.

ತಯಾರಿಸುವ ವಿಧಾನ: ಚಪಾತಿಗೆ ಹಿಟ್ಟು ಸಿದ್ಧಪಡಿಸಿಕೊಳ್ಳಿ, ಕೋಳಿಮಾಂಸವನ್ನು ಉಪ್ಪು, ಅರಿಶಿಣ ಹಾಕಿ ಬೇಯಿಸಿಕೊಳ್ಳಿ, ಬಣೆಲೆಗೆ ಈರುಳ್ಳಿ, ಅರಿಶಿಣ ಪುಡಿ, ಧನಿಯಾ, ಗರಂಮಸಾಲ, ಎರಡು ಮ್ಯಾಗಿ ಚಿಕನ್‌ ಕ್ಯೂಬ್‌, ಬಟಾಣಿ ಹಾಕಿ ಬಿಸಿ ಮಾಡಿ ಸ್ಟಫ್‌ ಸಿದ್ಧಪಡಿಸಿಕೊಳ್ಳಿ, ಜೊತೆಗೆ ಫ್ರೆಂಚ್‌ ಫ್ರೈಸ್‌, ಸಲಾಡ್‌ ಮಯೋನಿಸ್ ಸಾಸ್‌ ಸೇರಿಸಿಕೊಂಡು ರೋಲ್‌ ಮಾಡಿಕೊಳ್ಳಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.