ADVERTISEMENT

ಕಾಂಗ್ರೆಸ್‌ ಪ್ರಣಾಳಿಕೆಯಿಂದ ಬಿಜೆಪಿಯ ಶಕ್ತಿಗುಂದಿದೆ: ಮೆಹಬೂಬಾ ಮುಫ್ತಿ

ಪಿಟಿಐ
Published 24 ಏಪ್ರಿಲ್ 2024, 9:50 IST
Last Updated 24 ಏಪ್ರಿಲ್ 2024, 9:50 IST
<div class="paragraphs"><p>ಮೆಹಬೂಬಾ ಮುಫ್ತಿ</p></div>

ಮೆಹಬೂಬಾ ಮುಫ್ತಿ

   

ಕುಲ್ಗಾಮ್: ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಬಿಡುಗಡೆ ಮಾಡಿರುವ ಪ್ರಣಾಳಿಕೆಯು ಜನಪರವಾಗಿದೆ. ಇದು ಬಿಜೆಪಿಯ ಶಕ್ತಿಗುಂದಿಸಿದ್ದು, ಹೀಗಾಗಿ ಹತಾಶೆಗೊಂಡು ಕೋಮು ಉದ್ವಿಗ್ನತೆಯನ್ನು ಉಂಟುಮಾಡಲು ಪ್ರಯತ್ನಿಸುತ್ತಿದೆ ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಹೇಳಿದರು.

‘ಇಂಡಿಯಾ ಮೈತ್ರಿಕೂಟದ ಪ್ರಣಾಳಿಕೆಯಲ್ಲಿ, ಮಹಿಳೆಯರಿಗೆ ಶೇ 50 ಮೀಸಲಾತಿ, ರೈತರಿಗೆ ಕನಿಷ್ಠ ಬೆಂಬಲ ಬೆಲೆಯ ಪ್ರಸ್ತಾಪ ಇದೆ. ಇದು ಬಿಜೆಪಿಯ ಧೈರ್ಯಗೆಡಿಸಿದೆ. ಇಂಡಿಯಾ ಮೈತ್ರಿಕೂಟ ಒಳ್ಳೆಯ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು.

ADVERTISEMENT

‘70 ವರ್ಷಗಳಲ್ಲಿ ಇದೆ ಮೊದಲ ಬಾರಿಗೆ ಇಂಥ ಅದ್ಭುತ, ಜನಪರವಾದ ಪ್ರಣಾಳಿಕೆ ಬಂದಿದೆ. ಬಡವರ ಪರವಾಗಿ, ನಿರುದ್ಯೋಗಿ ಯುವಕರ ಪರವಾಗಿ ಹಾಗೂ ರೈತರ ಪರವಾಗಿ ಪ್ರಣಾಳಿಕೆ ಮಾತನಾಡುತ್ತಿದೆ. ಇದು ಬಿಜೆಪಿಗೆ ಭಯ ಉಂಟುಮಾಡಿದೆ. ಹೀಗಾಗಿ ಹಿಂದೂ–ಮುಸ್ಲಿಮರ ನಡುವೆ ಉದ್ವಿಗ್ನತೆ ಸೃಷ್ಠಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದು ಅವರ ಹತಾಶೆಯ ಪ್ರತಿಬಿಂಬ’ ಎಂದು ಅವರು ಹೇಳಿದರು.

ಮೆಹಬೂಬಾ ಅವರು ಅನಂತ್‌ನಾಗ್‌–ರಜೌರಿ ಕ್ಷೇತ್ರದಿಂದ ಲೋಕಸಭೆಗೆ ಸ್ಪರ್ಧಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.