ADVERTISEMENT

ಮೋದಿ ಗ್ಯಾರಂಟಿ– ಕಾಂಗ್ರೆಸ್ ಗ್ಯಾರಂಟಿ ನಡುವಿನ ವ್ಯತ್ಯಾಸ ಪಟ್ಟಿ ಮಾಡಿದ ರಾಹುಲ್‌

ಪಿಟಿಐ
Published 25 ಏಪ್ರಿಲ್ 2024, 9:40 IST
Last Updated 25 ಏಪ್ರಿಲ್ 2024, 9:40 IST
<div class="paragraphs"><p>ರಾಹುಲ್‌ ಗಾಂಧಿ</p></div>

ರಾಹುಲ್‌ ಗಾಂಧಿ

   

ನವದೆಹಲಿ: ಮೋದಿ ಗ್ಯಾರಂಟಿ ಮತ್ತು ಕಾಂಗ್ರೆಸ್‌ ಗ್ಯಾರಂಟಿ ನಡುವಿನ ವ್ಯತ್ಯಾಸವನ್ನು ಪಟ್ಟಿ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಚುನಾವಣೆ ತಮ್ಮ ಕೈತಪ್ಪಿ ಹೋಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಖಚಿತವಾಗಿದೆ ಎಂದಿದ್ದಾರೆ.

ಈ ಕುರಿತಂತೆ ಎಕ್ಸ್‌ನಲ್ಲಿ ಬರೆದುಕೊಂಡಿರುವ ರಾಹುಲ್‌, ‘ಮೋದಿ ಗ್ಯಾರಂಟಿ ಮತ್ತು ಕಾಂಗ್ರೆಸ್ ಗ್ಯಾರಂಟಿ ನಡುವೆ ಸ್ಪಷ್ಟವಾದ ವ್ಯತ್ಯಾಸವಿದ್ದು, ‘ಭಾರತೀಯರ ಸರ್ಕಾರ’ ಎನ್ನುವುದು ಕಾಂಗ್ರೆಸ್‌ನ ಗ್ಯಾರಂಟಿಯಾದರೆ, ‘ಅದಾನಿ ಸರ್ಕಾರ’ ಬಿಜೆಪಿ ಗ್ಯಾರಂಟಿಯಾಗಿದೆ’ ಎಂದರು.

ADVERTISEMENT

‘ಮಹಿಳೆಯರಿಗೆ ಮಾಸಿಕ ₹8,500 ನೀಡುವುದು, 30 ಲಕ್ಷ ಖಾಲಿ ಹುದ್ದೆಗೆ ನೇಮಕಾತಿ ನಡೆಸುವುದು, ಯುವಕರಿಗೆ ಉದ್ಯೋಗ ನೀಡುವ ಮೂಲಕ ವಾರ್ಷಿಕ ₹1 ಲಕ್ಷ ವೇತನ ದೊರೆಯುವಂತೆ ಮಾಡುವುದು ಮತ್ತು ರೈತರ ಬೆಳೆಗೆ ಸೂಕ್ತ ಬೆಂಬಲ ಬೆಲೆ ಒದಗಿಸುವುದು ಕಾಂಗ್ರೆಸ್ ಗ್ಯಾರಂಟಿಯಾಗಿದೆ’ ಎಂದರು.

‘ಕೋಟ್ಯಧಿಪತಿಗಳ ಜೇಬಿನಲ್ಲಿ ದೇಶದ ಸಂಪತ್ತನ್ನು ಕ್ರೋಡೀಕರಿಸುವುದು, ಸುಲಿಗೆ ದಂಧೆ ಮೂಲಕ ದೇಣಿಗೆ ವ್ಯಾಪಾರ, ಸಂವಿಧಾನ ಮತ್ತು ಪ್ರಜಾಪ್ರಭುತ್ವವನ್ನು ಮುಗಿಸುವುದು, ರೈತರಿಗೆ ನೋವು ಕೊಡುವುದು ಇದು ಬಿಜೆಪಿ ಗ್ಯಾರಂಟಿಯಾಗಿದೆ’ ಎಂದು ತಿಳಿಸಿದರು.

‘₹16 ಲಕ್ಷ ಕೋಟಿ ಸಾಲ ಮನ್ನಾ ಮಾಡುವ ಮೂಲಕ 10 ವರ್ಷಗಳ ಮೋದಿ ಆಡಳಿತದಲ್ಲಿ ಕೇವಲ 22ರಿಂದ 25 ಮಂದಿ ಕೋಟ್ಯಾಧಿಪತಿಗಳಾದರು. ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಕೋಟಿಗಟ್ಟಲೆ ಜನರನ್ನು ಲಕ್ಷಾಧಿಕಪತಿಗಳನ್ನಾಗಿ ಮಾಡುತ್ತದೆ’ ಎಂದು ಅಮರಾವತಿಯಲ್ಲಿ ನಡೆದ ಚುನಾವಣಾ ರ್‍ಯಾಲಿಯಲ್ಲಿ ತಿಳಿಸಿದರು.

ಇದೇ ವೇಳೆ ‘ಸಂವಿಧಾನವನ್ನು ಬದಲಾಯಿಸಲು ಬಿಜೆಪಿ ಬಯಸುತ್ತಿದ್ದು, ಜಗತ್ತಿನ ಯಾವ ಶಕ್ತಿಯಿಂದಲೂ ಸಂವಿಧಾನ ಬದಲಿಸಲು ಸಾಧ್ಯವಿಲ್ಲ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.