ADVERTISEMENT

ಜಮ್ಮು: ಸರ್ಕಾರಿ ನೌಕರನ ಹತ್ಯೆ; ವಿದೇಶಿ ಉಗ್ರನ ಕೈವಾಡ,ಸುಳಿವಿಗೆ ₹10 ಲಕ್ಷ ಇನಾಮು

ಪಿಟಿಐ
Published 24 ಏಪ್ರಿಲ್ 2024, 3:07 IST
Last Updated 24 ಏಪ್ರಿಲ್ 2024, 3:07 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಜಮ್ಮು: ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಸರ್ಕಾರಿ ನೌಕರನ ಹತ್ಯೆಯಲ್ಲಿ ನಿಷೇಧಿತ ಲಷ್ಕರ್‌–ಎ–ತಯಬಾ ಸಂಘಟನೆಯ ಅಬು ಹಮ್ಜಾ ಎಂಬ ಸಂಕೇತನಾಮದ ವಿದೇಶಿ ಉಗ್ರನ ಕೈವಾಡ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಲ್ಲದೆ ಉಗ್ರನ ಬಗ್ಗೆ ಸುಳಿವು ನೀಡಿದವರಿಗೆ ₹10 ಲಕ್ಷ ಇನಾಮು ಘೋಷಿಸಿದೆ.

ADVERTISEMENT

ಸಮಾಜ ಕಲ್ಯಾಣ ಇಲಾಖೆಯಲ್ಲಿ ಕರ್ತವ್ಯದಲ್ಲಿದ್ದ ಮೊಹಮ್ಮದ್ ರಜಾಕ್ (40) ಅವರನ್ನು ಥಾನಮಂಡಿ ಪ್ರದೇಶದ ತಪ್ಪಲಿನ ಕುಂದಾ ಗ್ರಾಮದಲ್ಲಿ ಸೋಮವಾರ ಹತ್ಯೆಗೈಯಲಾಗಿತ್ತು. ರಜಾಕ್ ಅವರ ಅಂತ್ಯಕ್ರಿಯೆಯನ್ನು ಮಂಗಳವಾರ ನೆರವೇರಿಸಲಾಯಿತು.

ಇಬ್ಬರು ಉಗ್ರರು ಕೃತ್ಯದಲ್ಲಿ ಭಾಗಿಯಾಗಿದ್ದಾರೆ. ರಜಾಕ್ ಅವರ ಸಹೋದರ ಮೊಹಮ್ಮದ್ ತಾಹೀರ್ ಚೌಧರಿ ಯೋಧರಾಗಿದ್ದು, ದಾಳಿಯಿಂದ ಪಾರಾಗಿದ್ದಾರೆ ಎಂದು ಪೊಲೀಸ್ ವಕ್ತಾರ ತಿಳಿಸಿದ್ದಾರೆ.

ಥಾನಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.