ADVERTISEMENT

ಟರ್ಕಿ ಕಾರ್ ಬಾಂಬ್‌: 37 ಸಾವು

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2016, 19:43 IST
Last Updated 14 ಮಾರ್ಚ್ 2016, 19:43 IST

ಅಂಕಾರಾ (ಎಎಫ್‌ಪಿ): ಟರ್ಕಿ ರಾಜಧಾನಿ ಅಂಕಾರಾ ನಗರದ ಜನನಿಬಿಡ ಪ್ರದೇಶದಲ್ಲಿ ಸಂಭವಿಸಿದ ಆತ್ಮಾಹುತಿ ಕಾರ್‌ ಬಾಂಬ್‌ ದಾಳಿಯಲ್ಲಿ ಕನಿಷ್ಠ 37 ಜನರು ಮೃತಪಟ್ಟಿದ್ದು, 125 ಮಂದಿ ಗಾಯಗೊಂಡಿದ್ದಾರೆ.

‘ಕಿಜಿಲೆ ಚೌಕಕ್ಕೆ ಸಮೀಪದ ಬಸ್‌ ನಿಲ್ದಾಣದ ಸಮೀಪ  ಭಾನುವಾರ ಬೆಳಿಗ್ಗೆ 6.45ರ ಸುಮಾರಿಗೆ ಸ್ಫೋಟ ನಡೆಸಲಾಗಿದೆ. ದಾಳಿಯ ತೀವ್ರತೆಗೆ ಹಲವು ಬಸ್‌ಗಳು ಭಸ್ಮಗೊಂಡಿವೆ. ಅಂಗಡಿಗಳು ಸಹ ಹಾನಿಗೊಂಡಿವೆ’ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

‘ಕಳೆದ ಐದು ತಿಂಗಳಲ್ಲಿ ಅಂಕಾರಾದಲ್ಲಿ ನಡೆದ ಐದನೇ ದಾಳಿ ಇದಾಗಿದೆ. ಈ ಪ್ರದೇಶದ ಸಮೀಪದಲ್ಲೇ ಪ್ರಧಾನಿ ಅವರ ಕಚೇರಿ, ಸಂಸತ್ತು ಮತ್ತು ವಿವಿಧ ದೇಶಗಳ ರಾಯಭಾರ ಕಚೇರಿಗಳಿವೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ಇದುವರೆಗೆ ಯಾವುದೇ ಗುಂಪು ದಾಳಿಯ ಹೊಣೆ ವಹಿಸಿಕೊಂಡಿಲ್ಲ. ಆದರೆ ಪ್ರಧಾನಿ ಅಹ್ಮತ್ ದವುತೊಗ್ಲು, ‘ದಾಳಿಗೆ ಯಾವ ಗುಂಪು ಕಾರಣ ಎಂಬ ಮಾಹಿತಿ ಇದ್ದು,  ತನಿಖೆ ಪ್ರಗತಿಯಲ್ಲಿದೆ. ಶೀಘ್ರವೇ ಯಾರೆಂಬುದನ್ನು ಬಹಿರಂಗಪಡಿಸಲಾಗುವುದು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.