ADVERTISEMENT

ಐಟಿಐಗೆ ನ್ಯಾಯ ಸಿಗಲಿ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2016, 19:43 IST
Last Updated 14 ಮಾರ್ಚ್ 2016, 19:43 IST

7 ವರ್ಷ ಪೂರೈಸಿದ ರಾಜ್ಯದ ಖಾಸಗಿ ಕೈಗಾರಿಕಾ ತರಬೇತಿ ಸಂಸ್ಥೆಗಳನ್ನು (ಐಟಿಐ) ಸರ್ಕಾರ ಪ್ರಸಕ್ತ ಬಜೆಟ್‌ನಲ್ಲಿ ವೇತನ ಅನುದಾನಕ್ಕೆ ಒಳಪಡಿಸಬೇಕು. ಏಕೆಂದರೆ ಇದಕ್ಕಾಗಿ ಉದ್ಯೋಗ ಮತ್ತು ತರಬೇತಿ ಇಲಾಖೆಯು ಸರ್ಕಾರದ ಆದೇಶದಂತೆ ಕಳೆದ ವರ್ಷ ಅರ್ಹ ಐಟಿಐಗಳನ್ನು ಪ್ರಾಥಮಿಕವಾಗಿ ಪರಿವೀಕ್ಷಣೆ ನಡೆಸಿದೆ.    

ಇನ್ನು ರಾಜ್ಯದಲ್ಲಿ ಐಟಿಐ ಸಂಸ್ಥೆಗಳು ಕೌಶಲಾಧಾರಿತವಾದ ವಿವಿಧ ವೃತ್ತಿ ತರಬೇತಿಗಳನ್ನು ನೀಡುತ್ತಿದ್ದು, ನಿರುದ್ಯೋಗ ನಿವಾರಣೆಯಲ್ಲಿ ಪ್ರಮುಖ ಪಾತ್ರ  ವಹಿಸುತ್ತಿವೆ. ಈಗಾಗಲೇ ಇಲಾಖೆಯು 361 ಐಟಿಐಗಳ ಪಟ್ಟಿಸಿದ್ಧಪಡಿಸಿ,  ಅನುಮೋದನೆಗಾಗಿ ಸರ್ಕಾರಕ್ಕೆ ಸಲ್ಲಿಸಿದೆ. ಇದರಲ್ಲಿ 10– 15 ವರ್ಷದಿಂದ ತರಬೇತಿ ನೀಡಿದ ಸಂಸ್ಥೆಗಳಿದ್ದು, ಇವುಗಳಲ್ಲಿ ನೂರಾರು ತಾಂತ್ರಿಕ ಹಾಗೂ ತಾಂತ್ರಿಕೇತರ ಸಿಬ್ಬಂದಿ ಇದ್ದಾರೆ.

ವೇತನಾನುದಾನ ಸಿಗುತ್ತದೆಂದು ಬೇರೆ ಉದ್ಯೋಗಗಳನ್ನು ಕೈಬಿಟ್ಟು ಹತ್ತಾರು ವರ್ಷಗಳಿಂದ ಕೆಲಸ ಮಾಡುತ್ತಿರುವ ಸಿಬ್ಬಂದಿ ಅನುದಾನವಿಲ್ಲದೆ ಹತಾಶರಾಗಿದ್ದಾರೆ. ರಾಜ್ಯದಲ್ಲಿ ನಿಜವಾದ ಕೌಶಲ ಅಭಿವೃದ್ಧಿಯಾಗಬೇಕಾದರೆ ಅರ್ಹ ಐಟಿಐ ಸಿಬ್ಬಂದಿಗೆ ಅನುದಾನದಂಥ ಉತ್ತೇಜನ ಕ್ರಮವನ್ನು ಸರ್ಕಾರ ಕೈಗೊಳ್ಳಬೇಕು.
- ಎಸ್.ಎಂ.ನೆರಬೆಂಚಿ, ಮುದ್ದೇಬಿಹಾಳ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.