ADVERTISEMENT

ಶೋಭೆ ತರದು

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2016, 19:43 IST
Last Updated 14 ಮಾರ್ಚ್ 2016, 19:43 IST

ಎಸ್‌.ಎಲ್‌.ಭೈರಪ್ಪ ಅವರು ಕಾದಂಬರಿ ಹೆಸರಿನಲ್ಲಿ ಕಚಡಾವನ್ನೆಲ್ಲ ಬರೆದಿದ್ದಾರೆ ಎಂದಿರುವ ವಿಚಾರವಾದಿ ಪ್ರೊ.ಜಿ.ರಾಮಕೃಷ್ಣ ಅವರ ಆರೋಪ (ಪ್ರ.ವಾ., ಮಾರ್ಚ್‌ 14) ಶೋಭೆ ತರುವಂಥದ್ದಲ್ಲ.

ಹಿರಿಯ ಸಾಹಿತಿಯಾಗಿ, ವಿದ್ವಾಂಸರಾಗಿ ತಮ್ಮ ಸಮಕಾಲೀನ ಹಿರಿಯ ಸಾಹಿತಿಯ ಕೃತಿಗಳು ಇನ್ನೂ ಏನನ್ನು ಒಳಗೊಳ್ಳಬೇಕು, ಅದರಲ್ಲಿ ಯಾವುದರ ಕೊರತೆಯಿದೆ ಎಂಬುದನ್ನು ತಿಳಿಸಬೇಕೇ ಹೊರತು ರಾಜಕಾರಣಿಯಂತೆ, ದಾಯಾದಿಗಳಂತೆ ಆರೋಪಿಸಿರುವುದು ಪೂರ್ವಗ್ರಹಪೀಡಿತವಾಗಿದೆ.

ಇಂಥ ವಿಚಾರಗಳು ಸಾಹಿತ್ಯ ಮತ್ತು ಸಾಂಸ್ಕೃತಿಕ ವಲಯದಲ್ಲಿ ಗೊಂದಲಗಳನ್ನು ಸೃಷ್ಟಿಸಿ ಅನಾರೋಗ್ಯಕರ ವಾತಾವರಣಕ್ಕೆ ನಾಂದಿಯಾಗುತ್ತವೆ.
- ರಾಘವೇಂದ್ರ ಹಾರಣಗೇರಾ, ಶಹಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.