ADVERTISEMENT

ಸಾರಿಗೆ ತೊಂದರೆ

ಎಚ್.ಎಸ್.ಮಂಜುನಾಥ
Published 22 ಫೆಬ್ರುವರಿ 2016, 19:58 IST
Last Updated 22 ಫೆಬ್ರುವರಿ 2016, 19:58 IST

ದಿನಾಂಕ 8–2–16ರಂದು ಯಲಹಂಕದ ಎನ್‌ಇಎಸ್‌ ಬಸ್‌ಸ್ಟಾಪ್‌ಗೆ ಮಧ್ಯಾಹ್ನ ಸುಮಾರು 2.10ಕ್ಕೆ ಬಂದೆ. 2.45ಕ್ಕೆ ಸಿ.ಬಿ.ಐ. ಬಳಿ ಒಬ್ಬರನ್ನು ಭೇಟಿಯಾಗಬೇಕಿತ್ತು. ಅಲ್ಲಿಂದ 402ಬಿ ಹತ್ತಿದೆ. (ಕೆಎ 5 ಎಫ್‌0085) ಕಂಡಕ್ಟರ್‌ ಆಗಾಗ ತನ್ನ ಸೀಟಿನಲ್ಲಿ ಕೂರುತ್ತಾ, ಮಧ್ಯೆ ಮಧ್ಯೆ ಎದ್ದು ಬಂದು ಟಿಕೆಟ್‌ ಕೊಡುತ್ತಿದ್ದರು.

ವಾಪಸು ಬರುವಾಗ ಸಂಜೆ 6.30. ಸಿಬಿಐನಿಂದ ಕೆಎ 50 ಎಫ್‌ಓ 12 ಬಸ್‌ ಹತ್ತಿ ‘ಶರಾವತಿ’ಗೆ ಟಿಕೆಟ್‌ ಕೇಳಿದರು ಕಂಡಕ್ಟರ್‌  ₹19 ಪಡೆದುಕೊಂಡು ಟಿಕೆಟ್‌ ಕೊಟ್ಟರು.  ಆ ಮೇಲೆ ಟಿಕೆಟ್‌ ನೋಡಿದರೆ ಮೇಖ್ರಿ ವೃತ್ತದಿಂದ ನ್ಯಾಯಾಂಗ ಬಡಾವಣೆ ಎಂದಿತ್ತು.

(ನಾನು ಹತ್ತಿದ್ದು ಸಿಬಿಐ, ಮೇಖ್ರಿ ಸರ್ಕಲ್‌ಗೆ ಹೋಗಿರಲೇ ಇಲ್ಲ) ನ್ಯಾಯಾಂಗ ಬಡಾವಣೆ ದಾಟಿ ಎನ್‌ಇಎಸ್‌, ಅದಾದ 2ನೇ ಸ್ಟಾಪ್‌ ಶರಾವತಿ. ಕೆಲವರಿಗೆ ಪ್ರಯಾಣಿಕರ ಬಗೆಗೆ ಸೌಜನ್ಯ ತೋರುವ ಸ್ವಭಾವ ಇಲ್ಲ, ಹತ್ತಿದ ಕೂಡಲೇ, ಪ್ರಯಾಣಿಕರ ಸಂಖ್ಯೆ ಕಡಿಮೆ ಇದ್ದಾಗ ಬೇಗ ಟಿಕೆಟ್‌ ಕೊಡಲು ಯತ್ನಿಸುವುದಿಲ್ಲ. ಯಾಂತ್ರೀಕರಣ ಆಗಿದ್ದರೂ ಟಿಕೆಟ್‌ ಸರಿಯಾಗಿ ಸಿದ್ಧಪಡಿಸುವುದಿಲ್ಲ. ಇಂಥ ಅಚಾತುರ್ಯಗಳಿಗೆ ಸರಿ ಹೋಗುವುದೆಂದು?
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.