ADVERTISEMENT

ನಾಲ್ಕನೇ ಸುತ್ತಿಗೆ ಸೆರೆನಾ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2016, 19:43 IST
Last Updated 14 ಮಾರ್ಚ್ 2016, 19:43 IST

ಇಂಡಿಯಾನ ವೆಲ್ಸ್‌, ಅಮೆರಿಕ (ರಾಯಿಟರ್ಸ್‌/ಎಎಫ್‌ಪಿ): ವಿಶ್ವದ ಅಗ್ರಮಾನ್ಯ ಆಟಗಾರ್ತಿ ಅಮೆರಿಕದ ಸೆರೆನಾ ವಿಲಿಯಮ್ಸ್‌ ಅವರ ಗೆಲುವಿನ ಓಟ ಮುಂದುವರಿದಿದೆ.  ಇಲ್ಲಿ ನಡೆಯುತ್ತಿರುವ ಇಂಡಿಯಾನ ವೆಲ್ಸ್‌ ಟೆನಿಸ್‌ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಸೆರೆನಾ ನಾಲ್ಕನೇ ಸುತ್ತು ಪ್ರವೇಶಿಸಿದ್ದಾರೆ.

ವಿಶ್ವದ ಅಗ್ರಮಾನ್ಯ ಆಟಗಾರ ಸರ್ಬಿಯಾದ ನೊವಾಕ್‌ ಜೊಕೊವಿಚ್‌ ಮತ್ತು ಸ್ಪೇನ್‌ನ ರಫೆಲ್‌ ನಡಾಲ್‌ ಅವರೂ  ಗೆಲುವಿನ ಸಿಹಿ ಸವಿದಿದ್ದಾರೆ. ಭಾನುವಾರ ರಾತ್ರಿ ನಡೆದ ಮೂರನೇ ಸುತ್ತಿನ ಹೋರಾಟದಲ್ಲಿ ಸೆರೆನಾ 7–6, 6–0 ರ ನೇರ ಸೆಟ್‌ಗಳಿಂದ  ಕಜಕಸ್ತಾನದ ಯೂಲಿಯ ಪುತಿನ್‌ತ್ಸೆವ ಅವರನ್ನು ಸೋಲಿಸಿದರು.

ವಿಶ್ವದ ಬಲಿಷ್ಠ ಆಟಗಾರ್ತಿ ಎನಿಸಿರುವ ಸೆರೆನಾಗೆ ಮೊದಲ ಸೆಟ್‌ನಲ್ಲಿ ಯೂಲಿಯ ಪ್ರಬಲ ಪೈಪೋಟಿ ಒಡ್ಡಿದರು. ಕಜಕಸ್ತಾನದ ಆಟಗಾರ್ತಿಯ ರ್‍ಯಾಕೆಟ್‌ನಿಂದ ಹೊರಹೊಮ್ಮುತ್ತಿದ್ದ ರಿಟರ್ನ್‌ಗಳಿಂದ ಸೆರೆನಾ ಅಕ್ಷರಶಃ ಕಂಗೆಟ್ಟಿದ್ದರು. ಈ ಹಂತದಲ್ಲಿ ಲಯ ಕಂಡುಕೊಂಡ ಅವರು ಸೊಗಸಾದ ರೀತಿಯಲ್ಲಿ ಎದುರಾಳಿಯ ಸವಾಲನ್ನು ಮೆಟ್ಟಿನಿಂತು ಅಭಿಮಾನಿಗಳಿಗೆ ಭರಪೂರ ಮನರಂಜನೆ ಒದಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.