ADVERTISEMENT

IPL 2024; ಆರ್‌ಸಿಬಿ ವಿರುದ್ಧ 7 ವಿಕೆಟ್‌ಗಳ ಗೆಲುವು ದಾಖಲಿಸಿದ ಕೆಕೆಆರ್

ಪಿಟಿಐ
Published 29 ಮಾರ್ಚ್ 2024, 13:34 IST
Last Updated 29 ಮಾರ್ಚ್ 2024, 13:34 IST
<div class="paragraphs"><p>ಪಿಟಿಐ ಚಿತ್ರ</p></div>
   

ಪಿಟಿಐ ಚಿತ್ರ

ಬೆಂಗಳೂರು: ಇಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧದ ಐಪಿಎಲ್ ಕ್ರಿಕೆಟ್ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ತಂಡ 7 ವಿಕೆಟ್‌ಗಳ ಜಯ ದಾಖಲಿಸಿದೆ.

ಆರ್‌ಸಿಬಿ ನೀಡಿದ್ದ 182 ರನ್‌ಗಳ ಗುರಿ ಬೆನ್ನತ್ತಿದ ಕೋಲ್ಕತ್ತ ತಂಡ 16.5 ಒವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 186 ರನ್ ಗಳಿಸುವ ಮೂಲಕ ಗೆಲುವಿನ ನಗೆ ಬೀರಿತು.

ADVERTISEMENT

ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಆರ್‌ಸಿಬಿ, ವಿರಾಟ್ ಕೊಹ್ಲಿ ಅವರ 83 ರನ್ ನೆರವಿನಿಂದ 182 ರನ್ ಕಲೆಹಾಕಿತು. ಕೆಮರೂನ್ ಗ್ರೀನ್ 33, ಮ್ಯಾಕ್ಸ್‌ವೆಲ್ 28 ರನ್ ಗಳಿಸಿ ತಂಡದ ಉತ್ತಮ ಮೊತ್ತಕ್ಕೆ ನೆರವಾದರು.

ಸ್ಪರ್ಧಾತ್ಮಕ ಮೊತ್ತ ಬೆನ್ನತ್ತಿದ ಕೆಕೆಆರ್ ಆರಂಭದಿಂದಲೇ ಹಿಡಿತ ಸಾಧಿಸಿತು. 22 ಎಸೆತಗಳಲ್ಲಿ 47 ರನ್ ಸಿಡಿಸಿದ ಸುನಿಲ್ ನರೈನ್ ಆರ್‌ಸಿಬಿಯಿಂದ ಗೆಲುವನ್ನು ಕಸಿದುಕೊಂಡರು. ಫಿಲ್ ಸಾಲ್ಟ್ 30, ವೆಂಕಟೇಶ್ ಅಯ್ಯರ್ 50, ಶ್ರೇಯಸ್ ಅಯ್ಯರ್ 39 ರನ್ ಗಳಿಸುವ ಮೂಲಕ ತಂಡವನ್ನು ಸರಾಗವಾಗಿ ಗೆಲುವಿನ ದಡ ಸೇರಿಸಿದರು.

ಸ್ಕೋರ್ ಕಾರ್ಡ್

ರಾಯಲ್ ಚಾಲೆಂಜರ್ಸ್‌ ಬೆಂಗಳೂರು: 6ಕ್ಕೆ182 (20 ಓವರುಗಳಲ್ಲಿ)

ವಿರಾಟ್ ಕೊಹ್ಲಿ ಔಟಾಗದೇ 83 (59ಎ, 4x4, 6x4)

ಫಫ್‌ ಡುಪ್ಲೆಸಿ ಸಿ ಸ್ಟಾರ್ಕ್ ಬಿ ಹರ್ಷಿತ್ 8 (6ಎ, 6x1)

ಗ್ರೀನ್ ಬಿ ರಸೆಲ್‌ 33 (21ಎ, 4x4, 6x2)

ಮ್ಯಾಕ್ಸ್‌ವೆಲ್‌ ಸಿ ಸಿಂಗ್ ಬಿ ನಾರಾಯಣ್ 28 (19ಎ, 4x3, 6x1)

‌ಪಾಟೀದಾರ್ ಸಿ ಸಿಂಗ್ ಬಿ ರಸೆಲ್ 3 (4ಎ)

ಅನುಜ್ ರಾವತ್‌ ಸಿ ಸಾಲ್ಟ್‌ ಬಿ ಹರ್ಷಿತ್ 3 (3ಎ)

ಕಾರ್ತಿಕ್ ರನೌಟ್‌ (ಸಾಲ್ಟ್‌) 20 (8ಎ, 6x3)

ಇತರೆ: 4 (ಬೈ 1, ವೈಡ್‌ 3)

ವಿಕೆಟ್ ಪತನ: 1–17 (ಫಫ್ ಡುಪ್ಲೆಸಿ, 1.6), 2–82 (ಕ್ಯಾಮರಾನ್ ಗ್ರೀನ್, 8.6), 3–124 (ಗ್ಲೆನ್ ಮ್ಯಾಕ್ಸ್‌ವೆಲ್‌, 14.1), 4–144 (ರಜತ್‌ ಪಾಟೀದಾರ್, 16.3), 5–151 (ಅನುಜ್ ರಾವತ್, 17.3), 6–182 (ದಿನೇಶ್ ಕಾರ್ತಿಕ್, 19.6).

ಬೌಲಿಂಗ್‌: ಮಿಚೆಲ್ ಸ್ಟಾರ್ಕ್ 4–0–47–0, ಹರ್ಷಿತ್‌ ರಾಣಾ 4–0–39–2, ಅನುಕೂಲ್‌ ರಾಐ್ 2–0–6–0; ಸುನಿಲ್ ನಾರಾಯಣ್ 4–0–40–0, ಆಂಡ್ರೆ ರಸೆಲ್‌ 4–0–29–2; ವರುಣ್ ಚಕ್ರವರ್ತಿ 2–0–20–0.

ಕೋಲ್ಕತ್ತ ನೈಟ್‌ ರೈಡರ್ಸ್‌

16.5 ಓವರ್‌ಗಳಲ್ಲಿ 3ಕ್ಕೆ 186

ಸಾಲ್ಟ್‌ ಸಿ ಗ್ರೀನ್‌ ಬಿ ವೈಶಾಖ 30 (20ಎ, 4x2, 6x2)

ಸುನಿಲ್‌ ಬಿ ಡಾಗರ್‌ 47 (22ಎ, 4x2, 6x5)

ವೆಂಕಟೇಶ್‌ ಸಿ ಕೊಹ್ಲಿ ಬಿ ಯಶ್‌ 50 (30ಎ, 4x3, 6x4)

ಶ್ರೇಯಸ್‌ ಅಯ್ಯರ್‌ ಔಟಾಗದೆ 39 (24ಎ, 4x2, 6x2)

ರಿಂಕು ಸಿಂಗ್‌ ಔಟಾಗದೆ 5 (5ಎ)

ಇತರೆ: 15 (ಲೆಗ್‌ಬೈ 7, ವೈಡ್‌ 8)

ವಿಕೆಟ್ ಪತನ: ವಿಕೆಟ್‌ ಪತನ: 1-86 (ಸುನಿಲ್; 6.3), 2-92 (ಫಿಲ್ ಸಾಲ್ಡ್‌; 7.5), 3-167 (ವೆಂಕಟೇಶ್ ಅಯ್ಯರ್; 15.1)

ಬೌಲಿಂಗ್‌: ಮೊಹಮ್ಮದ್‌ ಸಿರಾಜ್‌ 3–0–46–0, ಯಶ್‌ ದಯಾಳ್‌ 4–0–46–1, ಅಲ್ಜಾರಿ ಜೋಸೆಫ್ 2–0–34–0, ಮಯಂಕ್‌ ದಾಗರ್‌ 2.5–0–23–1, ವೈಶಾಖ ವಿಜಯಕುಮಾರ್‌ 4–0–23–1, ಕ್ಯಾಮರಾನ್ ಗ್ರೀನ್ 1–0–7–0

ಪಂದ್ಯದ ಆಟಗಾರ: ಸುನಿಲ್‌ ನಾರಾಯಣ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.