ADVERTISEMENT

ವಾಟ್ಸ್‌ಆ್ಯಪ್‌, ಇನ್‌ಸ್ಟಾಗ್ರಾಮ್‌ ಸ್ಥಗಿತ: ಕೆಲ ಗಂಟೆಗಳ ಬಳಿಕ ಮರುಸ್ಥಾಪನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 4 ಏಪ್ರಿಲ್ 2024, 2:25 IST
Last Updated 4 ಏಪ್ರಿಲ್ 2024, 2:25 IST
   

ಬೆಂಗಳೂರು: ಮೆಟಾ ಒಡೆತನದ ವಾಟ್ಸ್‌ಆ್ಯಪ್‌ ಮತ್ತು ಇನ್‌ಸ್ಟಾಗ್ರಾಮ್‌ ಕಾರ್ಯಾಚರಣೆಯು ಬುಧವಾರ ರಾತ್ರಿ ಜಗತ್ತಿನ ಕೆಲವೆಡೆ ಸ್ಥಗಿತಗೊಂಡಿದ್ದು, ಕೆಲ ಗಂಟೆಗಳ ನಂತರ ಮರುಸ್ಥಾಪಿಸಲಾಗಿದೆ.

ಆ್ಯಪ್‌ಗಳಿಗೆ ಲಾಗ್ ಇನ್ ಮಾಡಲು ಸಾಧ್ಯವಾಗದೆ, ಸಂದೇಶಗಳನ್ನು ಕಳುಹಿಸಲು, ಆಡಿಯೊ ಮತ್ತು ವಿಡಿಯೊ ಕರೆಗಳಂತಹ ಸೇವೆಗಳನ್ನು ಬಳಸಲು ಸಾಧ್ಯವಾಗದೆ ಬಳಕೆದಾರರು ಪರದಾಡುವಂತಾಗಿತ್ತು.

17,000 ಕ್ಕೂ ಹೆಚ್ಚು ಬಳಕೆದಾರರು ಸಂದೇಶ ಕಳುಹಿಸುವ ಸಮಸ್ಯೆ ಎದುರಿಸುತ್ತಿರುವುದಾಗಿ ದೂರಿದ್ದಾರೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ವರದಿ ಮಾಡಿದೆ. ‌

ADVERTISEMENT

ರಾಯಿಟರ್ಸ್ ಪ್ರಕಾರ, ಭಾರತದಲ್ಲಿ 30,000 ಕ್ಕೂ ಹೆಚ್ಚು ಬಳಕೆದಾರರು, ಬ್ರಿಟನ್‌ನಲ್ಲಿ 67,000 ಕ್ಕೂ ಹೆಚ್ಚು ಮತ್ತು ಬ್ರೆಜಿಲ್‌ನಲ್ಲಿ 95,000 ಬಳಕೆದಾರರು ಆ್ಯಪ್‌ಗಳ ಬಳಕೆಯಲ್ಲಿ ಸಮಸ್ಯೆಯಾದ ಬಗ್ಗೆ ವರದಿ ಮಾಡಿದ್ದಾರೆ.

ಆ್ಯಪ್‌ಗಳ ಬಳಕೆಯಲ್ಲಿ ಸಮಸ್ಯೆಯಾದ ಕುರಿತು ಅರಿತ ಸಂಸ್ಥೆ ‘ಕೆಲವು ಬಳಕೆದಾರರು ಲಾಗಿನ್‌ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆಂದು ನಮಗೆ ತಿಳಿದಿದೆ, ಸಾಧ್ಯವಾದಷ್ಟು ಬೇಗ ಸಮಸ್ಯೆ ಬಗೆಹರಿಸುತ್ತೇವೆ’ ಎಂದು ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.