ವಾಷಿಂಗ್ಟನ್: ಕರ್ನಾಟಕದಲ್ಲಿಯೇ ಕನ್ನಡ ಶಾಲೆಗಳು ಉಳಿವಿಗೆ ಏದುಸಿರು ಬಿಡುವ ಈ ಸಂದರ್ಭದಲ್ಲಿ ದೂರದ ಅಮೆರಿಕದ ಕನೆಕ್ಟಿಕಟ್‌ನ ಸೌತ್ ವಿಂಡ್ಸರ್ ಅಮೆರಿಕನ್ನಡ ಶಾಲೆ ಯಶಸ್ವಿಯಾಗಿ 4 ವರ್ಷ ಪೂರೈಸಿದ್ದು, 2013ನೇ ವರ್ಷದ ಘಟಿಕೋತ್ಸವ ಆಯೋಜಿಸಿತ್ತು.

ಮಕ್ಕಳು, ಪೋಷಕರಲ್ಲದೆ ಕನೆಕ್ಟಿಕಟ್ ಹೊಯ್ಸಳ ಕನ್ನಡ ಕೂಟದ ಪದಾಧಿಕಾರಿಗಳು ಇದರಲ್ಲಿ ಸಂಭ್ರಮದಿಂದ ಭಾಗವಹಿಸಿದ್ದರು. ಅನಿತಾ ಜೋಯಿಸ್, ಪ್ರತೀ ವಾರ ಒಂದೊಂದು ಉತ್ತಮ ಕನ್ನಡ ನೀತಿಕಥೆ ಹೇಳಿ ಮಕ್ಕಳನ್ನು ರಂಜಿಸುತ್ತಿದ್ದ ರಘು ಸೋಸಲೆ, ಕನ್ನಡ ಕೂಟ ಅಧ್ಯಕ್ಷ ದಿನೇಶ್ ಹರ್ಯಾಡಿ ಮಾತನಾಡಿದರು. ವಿದ್ಯಾರ್ಥಿಗಳೆಲ್ಲ ಸೊಗಸಾದ ಕನ್ನಡದಲ್ಲಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಕು. ಸಾನ್ವಿ ಪ್ರಾರ್ಥನೆ ಹಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.