ಕನ್ನಡದಲ್ಲಿ articlesಗೆ ಸಮಾನವಾದ ಪದಗಳಿಲ್ಲ. ಆದ್ದರಿಂದ ಇವುಗಳನ್ನು ನಾವು ಎಚ್ಚರಿಕೆಯಿಂದ ಬಳಸಬೇಕು. ಇಂಗ್ಲಿಷ್‌ನಲ್ಲಿ a, an, the ಎನ್ನುವ ಮೂರು adjectiveಗಳನ್ನು articles ಎಂದು ಕರೆಯುತ್ತೇವೆ. ಈ ಮೂರರಲ್ಲಿ a, an ಗಳನ್ನು indefinite articles ಎನ್ನುತ್ತೇವೆ ಹಾಗೂ the ಅನ್ನು definite article ಎಂದು ಕರೆಯುತ್ತೇವೆ. ಇಲ್ಲಿ definite ಎಂದರೆ ನಿರ್ದಿಷ್ಟ ಹಾಗೂ indefinite ಎಂದರೆ ನಿರ್ದಿಷ್ಟ ವಲ್ಲದುದು ಎಂದರ್ಥ. ನಮ್ಮ ಸಂಭಾಷಣೆಯಲ್ಲಿ ಯಾವುದಾದರೂ ವಸ್ತು/ವಿಷಯ/ವ್ಯಕ್ತಿಯ ಬಗ್ಗೆ ಮಾತನಾಡುವಾಗ ಅವುಗಳು ನಮಗೆ ನಿರ್ದಿಷ್ಟವಾಗಿ ತಿಳಿಯದೆ ಇದ್ದಾಗ a ಅಥವಾ an ಎನ್ನುವ indefinite articlesesಅನ್ನು ಬಳಸಬೇಕಾಗುತ್ತದೆ.

ಉದಾ: There is a letter for you.
An apple a day is good for health.
ಈ ಮೇಲಿನ ವಾಕ್ಯಗಳಲ್ಲಿ a letter, an apple ಎಂದರೆ ನಿರ್ದಿಷ್ಟವಲ್ಲದ ಯಾವುದೋ ಪತ್ರ ಹಾಗೂ ಯಾವುದಾದರೂ ಸೇಬು ಎಂದರ್ಥ.

ಹಾಗೆಯೇ, ನಾವು ಯಾರ ಬಗ್ಗೆ ಅಥವಾ ಯಾವುದರ ಬಗ್ಗೆ ಮಾತನಾಡುತ್ತಿದ್ದೇವೆ ಎನ್ನುವುದು ನಿರ್ದಿಷ್ಟವಾಗಿ ತಿಳಿದಿದ್ದಲ್ಲಿ, the ಎನ್ನುವ definite article ಅನ್ನು ಬಳಸಬೇಕಾಗುತ್ತದೆ.
ಉದಾ: I know the clinic - ಈ ವಾಕ್ಯದಲ್ಲಿ, the clinic ಎಂದರೆ ಒಂದು ನಿರ್ದಿಷ್ಟವಾದ clinic ಎಂದರ್ಥ.
Indefinite ಅನ್ನು ಬಳಸುವಾಗ ಎಲ್ಲಿ a ಹಾಗೂ ಎಲ್ಲಿ an ಬಳಸಬೇಕು ಎಂಬುದರ ಬಗ್ಗೆ ಗಮನಹರಿಸೋಣ. ಯಾವ ಪದಗಳು consonant sound ನಿಂದ ಪ್ರಾರಂಭವಾಗುತ್ತವೆಯೋ ಅವುಗಳ ಹಿಂದೆ a ಉಪಯೋಗಿಸಬೇಕು.
ಉದಾ:A boy, a girl...

ಆದರೆ, hour, honest, heir ಗಳಂತಹ ಪದಗಳನ್ನು ಬಳಸುವಾಗ a ಉಪಯೋಗಿಸದಂತೆ ಎಚ್ಚರವಹಿಸಬೇಕು. ಏಕೆಂದರೆ, ಈ ಪದಗಳಲ್ಲಿ h ಅನ್ನು ಉಚ್ಚರಿಸುವುದಿಲ್ಲ. ಹವರ್/ಹಾನೆಸ್ಟ್/ಹೇರ್ ಗೆ ಬದಲಾಗಿ ಅವರ್/ಆನೆಸ್ಟ್/ಏರ್ ಎಂದು ಉಚ್ಚರಿಸುತ್ತೇವೆ. ಹಾಗಾಗಿ, an hour, an honest man, an heir ಬಳಸಬೇಕಾಗುತ್ತದೆ.

A ಎನ್ನುವ article ಅನ್ನು ನಮ್ಮ ಸಂಭಾಷಣೆಯಲ್ಲಿ ಬಳಸುವಾಗ, ಅದರ ಉಚ್ಚಾರಣೆಯ ಕಡೆಗೂ ನಮ್ಮ ಗಮನವಿರಬೇಕು. ಅದನ್ನು ವಾಕ್ಯಗಳಲ್ಲಿ ಬಳಸುವಾಗ ಎ ಎನ್ನದೆ ಅ ಎಂದು ಉಚ್ಚರಿಸಬೇಕು.

ಉದಾ: I am a teacher - ಈ ವಾಕ್ಯವನ್ನು ಐಯಾಮ್ ಎ ಟೀಚರ್ ಎನ್ನದೆ ಐಯಾಮ್ ಅ ಟೀಚರ್ ಎಂದು ಉಚ್ಚರಿಸಬೇಕಾಗುತ್ತದೆ.
A, e, i, o, u ಎಂಬುವು vowels ಎಂಬುದು ಸಾಮಾನ್ಯ ತಿಳುವಳಿಕೆ. ಇದಕ್ಕೆ ಅಪವಾದಗಳೂ ಇವೆ ಎಂಬುದನ್ನು ಮುಂದೆ ನೋಡೋಣ. ಯಾವ ಪದಗಳು vowel sound ನಿಂದ ಪ್ರಾರಂಭವಾಗುತ್ತವೆಯೋ ಅವುಗಳ ಹಿಂದೆ an ಬಳಸಬೇಕು.
ಉದಾ: an orange, an umbrella...

ಆದರೆ, university, European, useful ಎನ್ನುವಂತಹ ಪದಗಳನ್ನು ಬಳಸುವಾಗ an ಉಪಯೋಗಿಸಬಾರದು. ಏಕೆಂದರೆ, ಈ ಪದಗಳ ಮೊದಲನೆಯ ಅಕ್ಷರ vowel ಆದರೂ ಸಹ ಇವುಗಳನ್ನು ಉಚ್ಚರಿಸಬೇಕಾದರೆ ‘yu’ (ಯು) ಎನ್ನುವ consonant sound ನಿಂದ ಪ್ರಾರಂಭವಾಗುತ್ತವೆ. ಹಾಗಾಗಿ a university, a European, a useful thing... ಎಂದು ಬಳಸಬೇಕಾಗುತ್ತದೆ.
Articles ನ ಸರಿಯಾದ ಬಳಕೆ ಬರಿ ಕಂಠಪಾಠದಿಂದ ದಕ್ಕುವಂತಹುದಲ್ಲ. ಕುಶಲ ಸಂಭಾಷಣಾಕಾರರ ಮಾತುಗಳನ್ನು ಗಮನವಿಟ್ಟು ಆಲಿಸಿ, ಈ articlesನ ಸೂಕ್ಷ್ಮಗಳನ್ನು ನಿಧಾನವಾಗಿ ಮನದಟ್ಟು ಮಾಡಿಕೊಳ್ಳಬೇಕು.

Definite articles ಉಪಯೋಗದ ಬಗ್ಗೆ ನೋಡೋಣ.
The ಎನ್ನುವ definite article ಅನ್ನು ಎಲ್ಲೆಲ್ಲಿ ಹಾಗೂ ಹೇಗೆ ಉಪಯೋಗಿಸಬಹುದು ಎಂಬುದನ್ನು ತಿಳಿದು ಕೊಳ್ಳೋಣ.
ನದಿ, ಸಮುದ್ರ, ದ್ವೀಪ ಅಥವಾ ಪರ್ವತಗಳನ್ನು ಕುರಿತು ಮಾತನಾಡುವಾಗ, ಅವುಗಳ ಹೆಸರಿನ ಹಿಂದೆ the ಬಳಸಬೇಕಾಗುತ್ತದೆ.

ಉದಾ: The Kaveri flows through the two states.
We can walk on some parts of the Arctic ocean, as it is frozen.
ಕೆಲವು ಪುಸ್ತಕಗಳ ಹೆಸರಿನ ಹಿಂದೆಯೂ the ಬಳುಸುತ್ತೇವೆ.

ಉದಾ: Valmiki wrote the Ramayana.
The Mahabharatha is a massive epic.
ನಮ್ಮ ಸಂಭಾಷಣೆಯಲ್ಲಿ, ಭೂಮಿ, ಆಕಾಶ, ಸೂರ್ಯ, ಚಂದ್ರ, ದಿಕ್ಕುಗಳು ಮುಂತಾದ ಅನನ್ಯ ಮತ್ತು ಏಕಮಾತ್ರ ವಾದವುಗಳ ಬಗ್ಗೆ ಮಾತನಾಡುವಾಗ, ಅವುಗಳ ಹಿಂದೆ the ಉಪಯೋಗಿಸುತ್ತೇವೆ.

ಉದಾ: The sun rises in the east.
The sky has grown very dark.
ವಾದ್ಯಗಳ ಹೆಸರಿನ ಹಿಂದೆಯೂ the ಬಳಸಬೇಕು.

ಉದಾ: He plays the guitar very effectively.
ಕ್ರಮಸೂಚಕಗಳ (first, second, third, ....) ಹಿಂದೆ the ಉಪಯೋಗಿಸುತ್ತೇವೆ.

ಉದಾ: I would be the first to admit my mistakes.
My child has secured the first rank.
ಇಲ್ಲಿ ಗಮನಿಸಬೇಕಾದ ವಿಷಯವೆಂದರೆ, ಕ್ರಮಸೂಚಕಗಳು noun ಅಥವಾ adjective ಆಗಿದ್ದ ಸಂದರ್ಭದಲ್ಲಿ ಮಾತ್ರ ಅವುಗಳ ಹಿಂದೆ the ಬಳಸುತ್ತೇವೆ. ಆದರೆ, ಅದೇ ಕ್ರಮಸೂಚಕಗಳು (ordinals) adverb ಆಗಿದ್ದರೆ, ಅವುಗಳ ಹಿಂದೆ the ಬಳಸಬಾರದು.

ಉದಾ: My child stood first in the class.
Tallest, strongest, most beautiful, most intelligent ಮುಂತಾದ ssuperlative degree adjective ಗಳ ಹಿಂದೆ the ಉಪಯೋಗಿಸಬೇಕು.

ಉದಾ: She is the cutest girl in the family.
He is the most intelligent boy in the class.
Proper nounಗಳ ಹಿಂದೆ the ಬಳಸಬಾರದು. ಹಾಗಾಗಿ, ಈ ಕೆಳಗೆ ಸೂಚಿಸಿರುವ ಸಾಮಾನ್ಯ ತಪ್ಪುಗಳಿಂದ ದೂರವಿರಿ:
1. The Bangalore is a place of opportunities (ತಪ್ಪು).
Bangalore is a place of opprotunities (ಸರಿ).
2. I am learning the English (ತಪ್ಪು).
II am learning English (ಸರಿ).

The ನ ಸರಿಯಾದ ಬಳಕೆಯ ಜೊತೆಗೆ, ಅದರ ಸರಿಯಾದ ಉಚ್ಚಾರಣೆಯೂ ನಮಗೆ ತಿಳಿದಿರಬೇಕು. Consonant sound ಇಂದ ಪ್ರಾರಂಭವಾಗುವ ಪದದ ಹಿಂದೆ the ಬಂದರೆ, ಅದನ್ನು ‘ದ’ ಎಂದೂ ಹಾಗೂ vowel sound ಇಂದ ಪ್ರಾರಂಭವಾಗುವ ಪದದ ಹಿಂದೆ the ಬಂದರೆ, ಅದನ್ನು ‘ದಿ’ ಎಂದು ಉಚ್ಚರಿಸಬೇಕು.

ಉದಾ: The end of the film is fascinating. ಈ ವಾಕ್ಯವನ್ನು ಓದುವ ರೀತಿ ಹೀಗಿದೆ:
ದಿ ಎಂಡ್ ಆಫ್ ದ ಫಿಲ್ಮ್ ಈಸ್‌ಫ್ಯಾಸಿನೇಟಿಂಗ್.
the ಎನ್ನುವ ಪದ ಇಂಗ್ಲಿಷ್ ಭಾಷೆಯಲ್ಲಿಯೇ ಅತಿ ಹೆಚ್ಚು ಉಪಯೋಗಸಲಾಗುವ ಪದ. ಅದರ ಸರಿಯಾದ ಬಳಕೆಯನ್ನು ಗಮನವಿಟ್ಟು ಕಲಿಯಬೇಕು.
ಮಾಹಿತಿಗೆ: 98452 13417 n

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.