ನವದೆಹಲಿ(ಪಿಟಿಐ): ರಾಷ್ಟ್ರೀಯ ನ್ಯಾಯಂಗ ನೇಮಕ ಆಯೋಗ(ಎನ್ಜೆಎಸಿ) ಜಾರಿಗೆ ಒತ್ತಾಯಿಸಿ ಕೇಂದ್ರ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿರುವ ಸುಪ್ರೀಂ ಕೋರ್ಟ್, ಎನ್ಜೆಎಸಿ ಜಾರಿ ಅಸಂವಿಧಾನಿಕ ಎಂದಿದ್ದು, ಕೊಲಿಜಿಯಂ ವಿಧಾನ ಮುಂದುವರೆಸುವಂತೆ ಸೂಚಿಸಿದೆ.

ನ್ಯಾಯಮೂರ್ತಿಗಳ ನೇಮಕದಲ್ಲಿ ಕೊಲಿಜಿಯಂ ವಿಧಾನದ ಬದಲಿಗೆ ಸರ್ಕಾರದ ದನಿಗೆ ಪ್ರಾಧಾನ್ಯ ಇರುವ ರಾಷ್ಟ್ರೀಯ ನ್ಯಾಯಾಂಗ ನೇಮಕ ಆಯೋಗ (ಎನ್ ಜೆಎಸಿ) ಜಾರಿಗೆ ಸರ್ಕಾರ ಮುಂದಾಗಿತ್ತು. ಈ ಆಯೋಗವನ್ನು ವಿರೋಧಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್, ಕೇಂದ್ರ ಸರ್ಕಾರದ ಅರ್ಜಿಯನ್ನು ಶುಕ್ರವಾರ ತಿರಸ್ಕರಿಸಿದೆ.

ನ್ಯಾಯಾಧೀಶರ ನೇಮಕದಲ್ಲಿ ಎರಡು ದಶಕ ಹಳೆಯ ಕೊಲಿಜಿಯಂ ವಿಧಾನಕ್ಕೆ ಬದಲಿಗೆ ಎನ್ಜೆಎಸಿ ಕಾಯ್ದೆ ಜಾರಿಗೆ ತರುವುದು ಅಸಂವಿಧಾನಿಕ ಎಂದು ನ್ಯಾಯಾಲಯ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.