ಬೆಂಗಳೂರು: ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ ಸಹ– ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಯಲ್ಲಿ ಹಲವಾರು ಪವಾಡಗಳು ನಡೆದಿವೆ. ಒಂದೇ ವರ್ಷ ಸಂಬಂಧಪಟ್ಟ ವಿಷಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ಪಿಎಚ್.ಡಿ ಮಾಡಿರುವುದಾಗಿ ಪ್ರಮಾಣ ಪತ್ರ ಸಲ್ಲಿಸಿದವರಿಗೂ ಇಲ್ಲಿ ಕೆಲಸ ಸಿಕ್ಕಿದೆ.

ಇನ್ನೂ ಅಚ್ಚರಿ ಎಂದರೆ, ಸ್ನಾತಕೋತ್ತರ ಪದವಿ ಪಡೆಯುವುದಕ್ಕೆ ಮೊದಲೇ ಪಿಎಚ್.ಡಿ ಪಡೆದವರಿಗೂ ಉದ್ಯೋಗ ನೀಡಲಾಗಿದೆ. ಹೀಗಂತ ರಾಜ್ಯಪಾಲರಿಗೆ ಸಲ್ಲಿಕೆಯಾದ ದೂರಿನಲ್ಲಿ ದಾಖಲೆ ಸಹಿತ ವಿವರಿಸಲಾಗಿದೆ. ‘ಸಹ ಪ್ರಾಧ್ಯಾಪಕರಾಗಿ ಆಯ್ಕೆಯಾಗಿರುವ ಬಿ.ವಿ. ವೆಂಕಟರಮಣ ಅವರು, ತಾವು 2009ರಲ್ಲಿ ತಿರುಪತಿಯ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಪೀಠದಿಂದ ದ್ವೈತ ವೇದಾಂತದಲ್ಲಿ ಪಿಎಚ್.ಡಿ ಪಡೆದಿರುವುದಾಗಿ ಅರ್ಜಿಯಲ್ಲಿ ತಿಳಿಸಿದ್ದಾರೆ. 2008–09ರಲ್ಲಿ ಇದೇ ವಿದ್ಯಾಪೀಠದಲ್ಲಿ ತಾವು ನ್ಯಾಯಶಾಸ್ತ್ರದಲ್ಲಿ ಎಂ.ಎ ಪದವಿ ಪಡೆದಿರುವುದಾಗಿಯೂ ಅವರು ಪ್ರಮಾಣ ಪತ್ರ ಸಲ್ಲಿಸಿದ್ದಾರೆ.

ಪಿಎಚ್.ಡಿ ಅಧ್ಯಯನ ಸಂದರ್ಭದಲ್ಲಿ ಬೇರೆ ಯಾವುದೇ ಪದವಿ ಅಧ್ಯಯನ ನಡೆಸಬಾರದು ಎನ್ನುವ ನಿಯಮವಿದೆ. ಇದು ಎಲ್ಲ ವಿಶ್ವವಿದ್ಯಾಲಯಗಳಿಗೂ ಅನ್ವಯವಾಗುತ್ತದೆ. ಆದರೂ ಇವರು ಒಂದೇ ವಿಶ್ವವಿದ್ಯಾಲಯದಲ್ಲಿ ಏಕಕಾಲದಲ್ಲಿ ಪಿಎಚ್.ಡಿ ಮತ್ತು ಸ್ನಾತಕೋತ್ತರ ಪದವಿಗಳನ್ನು ಒಂದೇ ಬಾರಿಗೆ ಪಡೆದಿದ್ದಾರೆ. ಅರ್ಜಿಯ ಜೊತೆಗೆ ಇವರು ಸಂಬಂಧಿಸಿದ ಪದವಿಗಳ ಅಂಕಪಟ್ಟಿಯನ್ನು ನೀಡಿಲ್ಲ. ಅರ್ಜಿಗಳ ಪರಿಶೀಲನೆ ಹಂತದಲ್ಲಿ ಈ ಅರ್ಜಿಯನ್ನು ತಿರಸ್ಕರಿಸಬೇಕಾಗಿದ್ದರೂ ಇವರಿಗೆ ಸಂದರ್ಶನಕ್ಕೆ ಅರ್ಹತೆ ನೀಡಿದ್ದೇ ಅಲ್ಲದೆ ಅವರನ್ನೇ ನೇಮಕ ಮಾಡಲಾಗಿದೆ.’

‘ಸಹ ಪ್ರಾಧ್ಯಾಪಕ ಹುದ್ದೆಗೆ ಅಗತ್ಯವಾದ ಸೇವಾ ಪ್ರಮಾಣ ಪತ್ರವನ್ನು ಅರ್ಜಿಯೊಂದಿಗೆ ನೀಡುವುದು ಕಡ್ಡಾಯ. ಆದರೆ ಇವರು ತಮ್ಮ ಅರ್ಜಿಯ ಜೊತೆಗೆ ಸೇವಾ ಅನುಭವ ಪ್ರಮಾಣ ಪತ್ರವನ್ನೂ ಸಲ್ಲಿಸಿಲ್ಲ. ಆದರೂ ನೇಮಕಗೊಂಡಿದ್ದಾರೆ. ಸಕ್ಷಮ ಪ್ರಾಧಿಕಾರದ ಮೂಲಕ ಅರ್ಜಿ ಸಲ್ಲಿಸಿಲ್ಲ. ತಾವು ಈ ಹಿಂದೆ ಸೇವೆ ಸಲ್ಲಿಸುತ್ತಿದ್ದ ಸಂಸ್ಥೆಯಿಂದ ನಿರಾಕ್ಷೇಪಣಾ ಪತ್ರ ಸಲ್ಲಿಸುವುದು ಕಡ್ಡಾಯ. ಅದನ್ನೂ ಸಲ್ಲಿಸಿಲ್ಲ’ ಎಂದು ರಾಜ್ಯಪಾಲರಿಗೆ ಸಲ್ಲಿಸಲಾದ ದೂರಿನಲ್ಲಿ ಆರೋಪಿಸಲಾಗಿದೆ.

ಪದವಿ ಪವಾಡ: ‘ವೆಂಕಟರಮಣ ಅವರು ಏಕಕಾಲಕ್ಕೆ ಪಿಎಚ್.ಡಿ ಮತ್ತು ಎಂ.ಎ ಪದವಿಯನ್ನು ಒಟ್ಟಿಗೇ ತೆಗೆದುಕೊಂಡಿದ್ದರೆ, ವೇದಾಂತ ನಿಕಾಯದ ಸಹ ಪ್ರಾಧ್ಯಾಪಕರಾಗಿ ಆಯ್ಕೆಯಾಗಿರುವ ವೀರನಾರಾಯಣ ಪಾಂಡುರಂಗಿ ಅವರು ಎಂ.ಎ. ಪದವಿ ಪಡೆಯುವುದಕ್ಕೆ ಮೊದಲೇ ಪಿಎಚ್ಡಿ ಪಡೆದುಕೊಂಡಿದ್ದಾರೆ’. ‘ವೇದಾಂತ ಸಹ ಪ್ರಾಧ್ಯಾಪಕರ ಹುದ್ದೆಗೆ ಅರ್ಜಿ ಹಾಕುವ ಅಭ್ಯರ್ಥಿಗಳು ವೇದಾಂತ ವಿಷಯದಲ್ಲಿ ಮೊದಲು ಎಂಎ ಮಾಡಿ ನಂತರ ಅದೇ ವಿಷಯದಲ್ಲಿ ಪಿಎಚ್.ಡಿ ಮಾಡಿರಬೇಕು ಎಂದು ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಲಾಗಿತ್ತು’.

‘ಆದರೆ ವೀರನಾರಾಯಣ ಪಾಂಡುರಂಗಿ ಅವರು ದ್ವೈತ ವೇದಾಂತದಲ್ಲಿ ಎಂ.ಎ ಪಡೆಯುವುದಕ್ಕಿಂತ ಮೊದಲೇ ಪಿಎಚ್.ಡಿ ಪಡೆದಿದ್ದಾರೆ. ಇದಕ್ಕೆ ಸಂಬಂಧಿಸಿದ ಪ್ರಮಾಣ ಪತ್ರಗಳನ್ನು ಅರ್ಜಿಯೊಂದಿಗೆ ಸಲ್ಲಿಸಿದ್ದಾರೆ. ಇವರೂ ಕೂಡ ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದಲ್ಲಿ ದ್ವೈತ ವೇದಾಂತದಲ್ಲಿ ಪಿಎಚ್.ಡಿ ಪಡೆಯುವಾಗಲೇ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯಲ್ಲಿ ವಿದ್ವದುತ್ತಮಾ (ಎಂ.ಎ) ಪದವಿಯನ್ನೂ ಪಡೆದುಕೊಂಡಿದ್ದಾರೆ. ಇವರೂ ಕೂಡ ಸೇವಾ ಪ್ರಮಾಣ ಪತ್ರ ಸಲ್ಲಿಸಿಲ್ಲ. ಎಲ್ಲ ಹುದ್ದೆಗೂ ಒಂದೇ ಅರ್ಜಿ ಸಲ್ಲಿಸಿದ್ದಾರೆ. ಸಕ್ಷಮ ಪ್ರಾಧಿಕಾರದ ಮೂಲಕ ಅರ್ಜಿ ಸಲ್ಲಿಸಿಲ್ಲ’.

‘ಹಿಂದೆ ತಾವು ಸೇವೆ ಸಲ್ಲಿಸುತ್ತಿದ್ದ ಸಂಸ್ಥೆಯಿಂದ ನಿರಾಕ್ಷೇಪಣ ಪತ್ರ ಪಡೆಯದಿದ್ದರೂ ಈ ಹಿಂದೆ ಅವರು ಪಡೆಯುತ್ತಿದ್ದ ವೇತನಕ್ಕೆ ಸಮಾನವಾದ ವೇತನವನ್ನು ಸಂಸ್ಕೃತ ವಿಶ್ವವಿದ್ಯಾಲಯ ನೀಡಿದೆ. ಸಹ ಪ್ರಾಧ್ಯಾಪಕರ ಹುದ್ದೆಗೆ ₨ 37,400 ಮೂಲ ವೇತನ ನಿಗದಿ ಮಾಡಲಾಗಿತ್ತು. ಆದರೆ ವೀರನಾರಾಯಣ ಅವರು ಈ ಹಿಂದೆ ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಮೂಲ ವೇತನ ₨ 53 ಸಾವಿರ ಪಡೆಯುತ್ತಿದ್ದರು ಎಂದು ಅಷ್ಟೇ ಮೂಲ ವೇತನ ಮತ್ತು ಇತರ ಭತ್ಯೆಗಳನ್ನು ನೀಡಲಾಗಿದೆ. ಇದಕ್ಕೆ ಸಿಂಡಿಕೇಟ್ ಸಭೆಯಲ್ಲಿ ಘಟನೋತ್ತರ ಅನುಮೋದನೆ ನೀಡಲಾಗಿದೆ.’

‘ಈ ಇಬ್ಬರ ನೇಮಕಾತಿ ಸಂದರ್ಭದಲ್ಲಿ ಈಗಿನ ಹಂಗಾಮಿ ಕುಲಪತಿ ಶ್ರೀನಿವಾಸ ವರಖೇಡಿ ಅವರು ಅಭ್ಯರ್ಥಿಗಳ ಅರ್ಜಿ ಪರಿಶೀಲನಾ ಸಮಿತಿ ಅಧ್ಯಕ್ಷರಾಗಿದ್ದರು, ಆಯ್ಕೆ ಸಮಿತಿ ಸದಸ್ಯರಾಗಿದ್ದರು ಹಾಗೂ ನೇಮಕಾತಿಗಳಿಗೆ ಅನುಮೋದನೆ ನೀಡುವ ಸಿಂಡಿಕೇಟ್ ಸದಸ್ಯರೂ ಆಗಿದ್ದರು’ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಹೀಗೆ ಆಯ್ಕೆಯಾದ ಇಬ್ಬರೂ ಬ್ರಾಹ್ಮಣ ಸಮುದಾಯದ ಒಂದೇ ಉಪ ಪಂಗಡಕ್ಕೆ ಸೇರಿದವರು. ಇದೇ ಉಪ ಪಂಗಡಕ್ಕೆ ಸೇರಿದ ಇನ್ನೊಬ್ಬರನ್ನು ಆಯ್ಕೆ ಸಮಿತಿ ಆಯ್ಕೆ ಮಾಡಿತ್ತು. ಆದರೆ ಒಂದೇ ಉಪ ಪಂಗಡಕ್ಕೆ ಸೇರಿದ ಮೂವರನ್ನು ತೆಗೆದುಕೊಂಡರೆ ಆಕ್ಷೇಪ ವ್ಯಕ್ತವಾಗಬಹುದು ಎಂಬ ಕಾರಣದಿಂದ ಅವರ ನೇಮಕ ಮಾಡಿಕೊಳ್ಳಲಿಲ್ಲ. ಈ ನೇಮಕಾತಿಗಳನ್ನೂ ಕೆಲವರು ಹೈಕೋರ್ಟ್ ನಲ್ಲಿ ಪ್ರಶ್ನೆ ಮಾಡಿದ್ದಾರೆ.’ ಎಂದೂ ರಾಜ್ಯಪಾಲರಿಗೆ ಸಲ್ಲಿಸಲಾದ ದೂರಿನಲ್ಲಿ ತಿಳಿಸಲಾಗಿದೆ.
(ಮುಂದುವರಿಯುವುದು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.