ದಾಂಡೇಲಿ: ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲ್ಲೂಕಿನ ಬಹುತೇಕ ಗ್ರಾಮಗಳಲ್ಲಿ ರಸ್ತೆಯೇ ಇಲ್ಲ. ರಸ್ತೆಗಳಿದ್ದರೂ ವಾಹನ ಸಂಚಾರಕ್ಕೆ ಯೋಗ್ಯವಾಗಿಲ್ಲ. ಇದು ತಾಲ್ಲೂಕಿನಲ್ಲಿ ಸರ್ಕಾರದ ಮಹತ್ವಪೂರ್ಣ ಯೋಜನೆಯಾದ ‘ನಗು ಮಗು’ ಯೋಜನೆ ಜಾರಿಗೆ ತೊಡಕಾಗಿದೆ.

ರಸ್ತೆಗಳಿಲ್ಲದ ಕಾರಣ ಜನರು ತಾಲ್ಲೂಕು ಕೇಂದ್ರಕ್ಕೆ 10 ರಿಂದ 50 ಕಿ.ಮೀ ದೂರವನ್ನು ಕಾಲ್ನಡಿಗೆಯಲ್ಲಿಯೇ ಕ್ರಮಿಸಬೇಕು. ರೋಗಿಗಳು ಮತ್ತು ಗರ್ಭಿಣಿಯರನ್ನು ಆಸ್ಪತ್ರೆಗೆ ಕಂಬಳಿ ಜೋಳಿಗೆಯಲ್ಲಿ ಹೊತ್ತುಕೊಂಡೇ ಹೋಗಬೇಕು.

ತಾಲ್ಲೂಕಿನ ಕುಂಬಾರವಾಡಾ, ಉಳವಿ, ಜಗಲಪೇಟ, ರಾಮನಗರ, ಕ್ಯಾಸಲ್‌ರಾಕ್ ಹಾಗೂ ಡಿಗ್ಗಿಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಿದ್ದರೂ ಕಾಯಂ ವೈದ್ಯರ ನೇಮಕವಾಗಿಲ್ಲ. ತಾಲ್ಲೂಕು ಕೇಂದ್ರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಏಳು ಹುದ್ದೆಗಳು ಮಂಜೂರಾಗಿವೆ. ಸಿಬ್ಬಂದಿ ಕೊರತೆಯಿಂದಾಗಿ ಜನರು ಹೆರಿಗೆಗೆ ಕಾರವಾರ ಜಿಲ್ಲಾ ಆಸ್ಪತ್ರೆ, ಬೆಳಗಾವಿ, ಖಾನಾಪುರ, ದಾಂಡೇಲಿ ಅಥವಾ ಧಾರವಾಡಕ್ಕೆ ಹೋಗಬೇಕಾಗಿದೆ.

ಡಿಗ್ಗಿ, ಬೊಂಡೇಲಿ, ಕಣ್ಣೆ, ಮಾಯರೆ ಮುಂತಾದ ಗಡಿ ಭಾಗದ ಗ್ರಾಮಸ್ಥರು ನೆರೆಯ ಗೋವಾ ರಾಜ್ಯದ ಪ್ರಸೂತಿ ಕೇಂದ್ರಗಳಿಗೆ ಹೋಗಬೇಕಾದ ಪರಿಸ್ಥಿತಿ ಇದೆ ಎನ್ನುತ್ತಾರೆ ಜೊಯಿಡಾ ತಾಲ್ಲೂಕು ಕುಣಬಿ ಹೋರಾಟ ಸಮಿತಿ ಅಧ್ಯಕ್ಷ ತುಕಾರಾಮ ವೇಲಿಪ ಮತ್ತು ತಾಲ್ಲೂಕು ಕುಣಬಿ ಅಭಿವೃದ್ಧಿ ಸಮಾಜದ ಅಧ್ಯಕ್ಷ ದೇವಿದಾಸ ವೇಲಿಪ.

‘ಜೊಯಿಡಾ ತಾಲ್ಲೂಕಿಗೆ ಅಗತ್ಯವಾದ ಈ ಯೋಜನೆ ಜಾರಿಯಾಗದಿರುವುದು ನೋವಿನ ಸಂಗತಿ. ಇಲ್ಲಿನ ಸಮಸ್ಯೆ ಹಾಗೂ ಜನಜೀವನ
ವನ್ನು ಅರಿತು ಶೀಘ್ರವೇ ‘ನಗು ಮಗು’ ಯೋಜನೆಯನ್ನು ಜಾರಿ ಮಾಡಬೇಕು. ಇಲ್ಲವಾದಲ್ಲಿ ಹೋರಾಟ ಮಾಡುವುದು ಅನಿವಾರ್ಯ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಶುಭಾಂಗಿ ಗಾವಡಾ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಯೋಜನೆಯನ್ನು ತಾಲ್ಲೂಕಿನಲ್ಲಿ ಜಾರಿ ಮಾಡಲು ತಕ್ಷಣ ಕ್ರಮ ತೆಗೆದುಕೊಳ್ಳದಿದ್ದರೆ ಹೋರಾಟ ಕೈಗೊಳ್ಳಬೇಕಾಗುತ್ತದೆ’ ಎಂದು ಜಿಲ್ಲಾ ಬುಡಕಟ್ಟು ಅಭಿವ್ಯಕ್ತಿ ವೇದಿಕೆ ಅಧ್ಯಕ್ಷ ಸುಭಾಷ ಗಾವಡಾ ಎಚ್ಚರಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.