ಬ್ರಹ್ಮಾವರ: ನಮ್ಮ ದೇಶದಲ್ಲಿ ಉತ್ತಮ ಸಾಹಿತಿಗಳಿದ್ದಾರೆ. ಅವರು ಬರೆದ ಉತ್ತಮ ಸಾಹಿತ್ಯ ಕೃತಿಗಳಿವೆ. ಆದರೆ, ಉತ್ತಮ ಸಾಹಿತ್ಯಗಳು ವಿಮರ್ಶೆಗೆ ಸಿಕ್ಕದೆ, ಭಾಷಾಂತರವಾಗದೇ ಇರುವುದರಿಂದ ಸಾಹಿತಿಗಳು ಮತ್ತು ಅವರ ಸಾಹಿತ್ಯಗಳು ಮೂಲೆಗುಂಪಾಗುತ್ತಿವೆ ಎಂದು ಸಂಶೋಧಕ ಡಾ.ಯು.ಪಿ.ಉಪಾಧ್ಯ ಅಭಿಪ್ರಾಯಪಟ್ಟರು.

ಸಾಸ್ತಾನ ಪಾಂಡೇಶ್ವರ ಚಡಗರ ಅಗ್ರಹಾರದಲ್ಲಿ ಇತ್ತೀಚೆಗೆ ಶಿವರಾಮ ಕಾರಂತ ವೇದಿಕೆ, ಬ್ರಹ್ಮಾವರ ಬಾರ್ಕೂರು ಲಯನ್ಸ್ ಕ್ಲಬ್ ಮತ್ತು ರೋಟರಿ ಕ್ಲಬ್ ಹಂಗಾರಕಟ್ಟೆ ಸಾಸ್ತಾನ ಆಯೋಜಿಸಿದ್ದ ಡಾ.ನಾ ಮೊಗಸಾಲೆ ಅವರ ಉಲ್ಲಂಘನೆ ಕೃತಿಯ ಕುರಿತ ವಿಚಾರ ಸಂಕಿರಣ ಹಾಗೂ ಮೊಗಸಾಲೆ ಅವರಿಗೆ ಅಭಿನಂದನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶಿವರಾಮ ಕಾರಂತ ವೇದಿಕೆಯ ಪಾ.ಚಂದ್ರಶೇಖರ ಚಡಗ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಡಾ.ವಸಂತ ಕುಮಾರ ನಿಯೋಜಿತ ಭಾಷಣ ಮಾಡಿದರು. ಕ.ಸಾ.ಪದ ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ನಾ.ಮೊಗಸಾಲೆ ಅವರ ಉಲ್ಲಂಘನೆ ಕುರಿತು ಅವಲೋಕನ ನಡೆಸಿದರು.

ಡಾ.ನಾ.ಮೊಗಸಾಲೆ, ಬ್ರಹ್ಮಾವರ ಬಾರ್ಕೂರು ಲಯನ್ಸ್ ಕ್ಲಬ್‌ನ ಅಧ್ಯಕ್ಷ ಬಿ.ಎಸ್.ಪ್ರತಾಪ ಶೆಟ್ಟಿ, ಶಿವರಾಮ ಕಾರಂತ ವೇದಿಕೆ ಸಾಸ್ತಾನ ಶಾಖೆಯ ಕಾರ್ಯದರ್ಶಿ ನಾರಾಯಣ ಕೆ.ಶೆಟ್ಟಿ, ಹಂಗಾರಕಟ್ಟೆ ಸಾಸ್ತಾನ ರೋಟರಿ ಕ್ಲಬ್ ಅಧ್ಯಕ್ಷ ಶ್ರೀಪತಿ ಅಧಿಕಾರಿ ಮತ್ತಿತರರು ಉಪಸ್ಥಿತರಿದ್ದರು.

ಶಿವರಾಮ ಕಾರಂತ ವೇದಿಕೆ ಸಾಸ್ತಾನ ಶಾಖೆಯ ಅಧ್ಯಕ್ಷ ಎಚ್.ಗೋಪಾಲಕೃಷ್ಣ ಶೆಟ್ಟಿ ಸ್ವಾಗತಿಸಿದರು. ಪ್ರಶಾಂತ ಶೆಟ್ಟಿ ಸಾಸ್ತಾನ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.

ಕಾರಂತರಂತಹ ಶ್ರೇಷ್ಠ ಸಾಹಿತಿಗಳ ಕೃತಿ ಬೇರೆ ಭಾಷೆಗಳಿಗೆ ಅನುವಾದವಾಗಿದ್ದರೆ ಇನ್ನಷ್ಟು ಉತ್ತಮ ಪ್ರತಿಕ್ರಿಯೆ ಸಿಗುತ್ತಿತ್ತು. ಕಾರಂತರು ಟಾಗೋರರಂತೆ ವಿಶ್ವಮಾನ್ಯತೆ ಪಡೆಯುತ್ತಿದ್ದರು.
- ಡಾ.ಯು.ಪಿ.ಉಪಾಧ್ಯ,
ಸಂಶೋಧಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.