ಬುಧವಾರ, 25 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕನ್ನಡ ಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ: ಸರ್ಕಾರಕ್ಕೆ ಹಿನ್ನಡೆ

Published : 6 ಮೇ 2014, 13:00 IST
ಫಾಲೋ ಮಾಡಿ
Comments

ನವದೆಹಲಿ (ಪಿಟಿಐ): ಪ್ರಾಥಮಿಕ ಶಿಕ್ಷಣ ನೀಡುವಲ್ಲಿ ಭಾಷಾ ಅಲ್ಪ ಸಂಖ್ಯಾತರ ಮೇಲೆ ಸರ್ಕಾರವು ಪ್ರಾದೇಶಿಕ ಭಾಷೆಯನ್ನು ಹೇರುವಂತಿಲ್ಲ ಎಂದು ಸುಪ್ರಿಂಕೋರ್ಟ್ ಮಂಗಳವಾರ ತೀರ್ಪು ನೀಡಿತು.

'ಪ್ರಾಥಮಿಕ ಶಿಕ್ಷಣ ಪಡೆಯುವಲ್ಲಿ ಪ್ರಾದೇಶಿಕ ಭಾಷೆಯನ್ನು ಭಾಷಾ ಅಲ್ಪ ಸಂಖ್ಯಾತರ ಮೇಲೆ ಕಡ್ಡಾಯವಾಗಿ ಹೇರುವ ಅಧಿಕಾರ ಸರ್ಕಾರಕ್ಕೆ ಇಲ್ಲ' ಎಂದು ಮುಖ್ಯ ನ್ಯಾಯಮೂರ್ತಿ ಆರ್. ಎಂ. ಲೋಧಾ ನೇತೃತ್ವದ ಪಂಚ ಸದಸ್ಯ ಸಂವಿಧಾನ ಪೀಠ ಹೇಳಿತು.

ಒಂದರಿಂದ 4ನೇ ತರಗತಿವರೆಗಿನ ಮಕ್ಕಳಿಗೆ ಪ್ರಾಥಮಿಕ ಶಿಕ್ಷಣ ನೀಡಲು ಪ್ರಾದೇಶಿಕ ಭಾಷೆ ಅಥವಾ ಮಾತೃಭಾಷೆಯನ್ನು ಕಡ್ಡಾಯಗೊಳಿಸಿ 1994ರಲ್ಲಿ ಕರ್ನಾಟಕ ಸರ್ಕಾರವು ಹೊರಡಿಸಿದ್ದ ಎರಡು ಆದೇಶಗಳನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳ ಮೇಲಿನ ವಿಚಾರಣೆ ಬಳಿಕ ನ್ಯಾಯಮೂರ್ತಿಗಳಾದ ಎ.ಕೆ. ಪಟ್ನಾಯಕ್, ಎಸ್. ಜೆ. ಮುಖ್ಯೋಪಾಧ್ಯಾಯ, ದೀಪಕ್ ಮಿಶ್ರಾ ಮತ್ತು ಎಫ್ ಎಂ ಐ ಕಲೀಫುಲ್ಲಾ ಅವರನ್ನೂ ಒಳಗೊಂಡ ಪೀಠವು ಈ ತೀರ್ಪು ನೀಡಿತು.

ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆಯನ್ನು ಕಲಿಕಾ ಮಾಧ್ಯಮವಾಗಿ ಸರ್ಕಾರವು ಹೇರಬಹುದೇ ಎಂಬ ವಿಚಾರವನ್ನು ಸಂವಿಧಾನ ಪೀಠವು ಪರಿಶೀಲಿಸುವುದು ಎಂಬುದಾಗಿ ಕಳೆದ ವರ್ಷ ಜುಲೈ ತಿಂಗಳಲ್ಲಿ ಸುಪ್ರೀಂಕೋರ್ಟಿನ ದ್ವಿಸದಸ್ಯ ಪೀಠವು ಹೇಳಿತ್ತು.

ಪ್ರಾಥಮಿಕ ಶಿಕ್ಷಣದ ಹಂತದ ಕಲಿಕೆ ದೀರ್ಘಕಾಲೀನ ಪರಿಣಾಮ ಬೀರುವುದರಿಂದ ವಿಶಾಲ ಪೀಠವು ಇದನ್ನು ಪರಿಶೀಲಿಸಬೇಕು ಎಂದು ದ್ವಿಸದಸ್ಯ ಪೀಠ ಹೇಳಿತ್ತು.

ವಿಷಯವು ಹಾಲಿ ತಲೆಮಾರು ಮಾತ್ರವೇ ಅಲ್ಲ ಇನ್ನೂ ಜನಿಸದೇ ಇರುವ ಮಕ್ಕಳ ತಲೆಮಾರಿನ ಮೂಲಭೂತ ಹಕ್ಕಿನ ವಿಚಾರವನ್ನೂ ಒಳಗೊಂಡಿದೆ ಎಂದು ವಿಶಾಲಪೀಠವು ಹೇಳಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT