ಬೆಂಗಳೂರು: ಹೊಸ ಬರಹಗಾರರನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ ‘ಸಂಚಯ’ ಸಾಹಿತ್ಯ ಪತ್ರಿಕೆ ಕವನ ಹಾಗೂ ಲೇಖನ ಸ್ಪರ್ಧೆ ಏರ್ಪಡಿಸಿದೆ. ಕವನ ಸ್ಪರ್ಧೆಗೆ ತಮ್ಮ ಸ್ವಂತ ರಚನೆಯ ಎರಡು ಕವಿತೆಗಳನ್ನು ಲೇಖಕರು ಕಳುಹಿಸಬೇಕು. ಅನುವಾದಿತ ಹಾಗೂ ಈಗಾಗಲೇ ಪ್ರಕಟವಾದ ಕವಿತೆಗಳಿಗೆ ಅವಕಾಶವಿಲ್ಲ.

ಲೇಖನ ಸ್ಪರ್ಧೆಗೆ ‘ಯಶವಂತ ಚಿತ್ತಾಲರ ಕಥೆಯೊಂದಕ್ಕೆ ಸೃಜನಶೀಲ ಸ್ಪಂದನ’, ‘ಪ್ರಜಾಪ್ರಭುತ್ವದ ಹಿನ್ನೆಲೆಯಲ್ಲಿ ಅನಂತಮೂರ್ತಿ
ಅವರ ವಿಚಾರ-ವಿವಾದಗಳು’, ‘ಸ್ವಚ್ಛಭಾರತ’–- ಒಂದು ಸಾಂಸ್ಕೃತಿಕ ವಿಮರ್ಶೆ’, ‘ಪುಸ್ತಕಗಳ ನಿಷೇಧ ಮತ್ತು ನಮ್ಮ ಸಂಸ್ಕೃತಿಯ ಆರೋಗ್ಯ’– ಈ ನಾಲ್ಕು ವಿಷಯಗಳಲ್ಲಿ ಯಾವುದಾದರೂ ಒಂದರ ಕುರಿತು ಲೇಖನವನ್ನು ಬರೆದು ಕಳುಹಿಸಬಹುದು. ಲೇಖನ ೧೫ ಪುಟಗಳನ್ನು ಮೀರಿರಬಾರದು.

ಲೇಖಕರು ತಮ್ಮ ಬರಹಗಳ ಜೊತೆ ತಮ್ಮ ಹೆಸರು, ವಿಳಾಸವನ್ನು ಬೇರೆ ಕಾಗದದಲ್ಲಿ ಬರೆದು ಲಗತ್ತಿಸಿರಬೇಕು. ಬರಹಗಳನ್ನು ಕಳುಹಿಸಲು ಕೊನೆಯ ದಿನಾಂಕ ನವೆಂಬರ್ ೩೦.
ವಿಳಾಸ: ‘ಸಂಚಯ’, ನಂ. ೧೦೦,
೨ನೇ ಮುಖ್ಯ ರಸ್ತೆ, ೩ನೇ ಬ್ಲಾಕ್,
೩ನೇ ಹಂತ, ೩ನೇ ಘಟ್ಟ, ಬನಶಂಕರಿ, ಬೆಂಗಳೂರು- ೫೬೦ ೦85. ದೂರವಾಣಿ:
98440 63514. ಇ–ಮೇಲ್: sanchaya.sahityapatrike@gmail.com

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.