ಜೈಪುರ: ಸಾವಿರಾರು ಪುಸ್ತಕಗಳನ್ನು ನಾನು ಹೋದ ಕಡೆಯಲ್ಲೆಲ್ಲ ತೆಗೆದುಕೊಂಡು ಹೋಗುವ ಪರಿಕಲ್ಪನೆಯೇ ಖುಷಿ ಕೊಡುವಂತಿದೆ!
‘ನೀವು ಕಿಂಡಲ್ ಖರೀದಿಸಿದ್ದು ಏಕೆ?’ ಎನ್ನುವ ಪ್ರಶ್ನೆಗೆ ಜೈಪುರದ ಹಿರಿಯ ನಾಗರಿಕರೊಬ್ಬರು ಪ್ರತಿಕ್ರಿಯಿಸಿದ್ದು ಹೀಗೆ.

ಕಿಂಡಲ್‌ನ ಉಪಯೋಗಗಳು ಮತ್ತು ಅದನ್ನು ಬಳಸುವ ಬಗ್ಗೆ ‘ಅಮೆಜಾನ್.ಇನ್’ ಮಳಿಗೆಯ ಸಿಬ್ಬಂದಿಯೊಂದಿಗೆ ಸಾಕಷ್ಟು ಕಾಲ ಚರ್ಚಿಸಿದ ನಂತರ ಅವರು ಕಿಂಡಲ್ ಕೊಂಡರು. ಮಗುವೊಂದು ಆಟಿಕೆಯೊಂದನ್ನು ಮುಟ್ಟಿ ಮುಟ್ಟಿ ಸುಖಿಸಿದಂತೆ ಕಿಂಡಲ್ ಪರದೆಯನ್ನು ಅವರು ಸ್ಪರ್ಶಿಸಿದರು. ಕಿಂಡಲ್ ಖರೀದಿಸಿದ ಮತ್ತೊಬ್ಬ ಮಹಿಳೆಯೊಬ್ಬರಿಗೆ, ಮಕ್ಕಳಿಗೆ ಓದಿನ ರುಚಿ ಹತ್ತಿಸಲು ಈ ವಿದ್ಯುನ್ಮಾನ ಉಪಕರಣವನ್ನು ಆಟಿಕೆಯ ರೀತಿ ಬಳಸಬಹುದು ಎನ್ನಿಸಿದೆ.

ಯುವಜನರ ನಡುವೆ ಜನಪ್ರಿಯವಾಗುತ್ತಿರುವ ‘ಇ–ಪುಸ್ತಕಗಳ ಲೈಬ್ರರಿ’ ಕಿಂಡಲ್‌ಗಳತ್ತ ಹಿರಿಯರೂ ಕುತೂಹಲ ವ್ಯಕ್ತಪಡಿಸುತ್ತಿರುವ ವಿದ್ಯಮಾನಕ್ಕೆ ‘ಜೈಪುರ ಸಾಹಿತ್ಯ ಉತ್ಸವ’ ಸಾಕ್ಷಿಯಾಗಿದೆ. ‘ಸಾಂಪ್ರದಾಯಿಕ ಪುಸ್ತಕಗಳ ಸ್ಥಾನವನ್ನು ಇ–ಪುಸ್ತಕಗಳು ಆಕ್ರಮಿಸಿಕೊಳ್ಳುತ್ತಿವೆಯೇ?’ ಎನ್ನುವ ಪುಸ್ತಕಲೋಕವನ್ನು ಕಾಡುತ್ತಿರುವ ಜಿಜ್ಞಾಸೆ ಉತ್ಸವದಲ್ಲೂ ಕಾಣಿಸಿಕೊಂಡಿದೆ. ಪುಸ್ತಕಗಳ ಮಾರಾಟದ ಭರಾಟೆಯ ಜೊತೆಗೇ ‘ಕಿಂಡಲ್’ಗಳ ಮಾರಾಟವೂ ನಡೆಯುತ್ತಿರುವುದು ಈ ಜಿಜ್ಞಾಸೆಯ ಅಭಿವ್ಯಕ್ತರೂಪದಂತಿತ್ತು.

ಕಿಸೆಯಲ್ಲಿ ಗ್ರಂಥಾಲಯ: ಕಿಂಡಲ್‌ಗಳತ್ತ ಯುವಜನತೆ ಹೆಚ್ಚು ಆಸಕ್ತರಾಗುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ‘ಅಮೆಜಾನ್.ಇನ್’ನ ಅಧಿಕಾರಿ ರಾಜೀವ್ ಮೆಹ್ತಾ, ‘ವಿಶ್ವದ ಯಾವುದೇ ಭಾಷೆಯ ಪುಸ್ತಕ ಕಿಂಡಲ್‌ಗಳಲ್ಲಿ ದೊರೆಯುವ ದಿನ ದೂರವಿಲ್ಲ’ ಎನ್ನುವ ಆಶಾಭಾವ ವ್ಯಕ್ತಪಡಿಸಿದರು. ಸಾಂಪ್ರದಾಯಿಕ ಪುಸ್ತಕಗಳಿಗೆ ಹೋಲಿಸಿದರೆ ಇ–ಪುಸ್ತಕಗಳ ತಯಾರಿ ಹಾಗೂ ವಿತರಣೆ ಅತ್ಯಂತ ಸುಲಭ ಹಾಗೂ ಕಡಿಮೆ ಖರ್ಚಿನದು. ಹೆಚ್ಚು ಅನುಕೂಲಗಳುಳ್ಳ ಹಾಗೂ ಸರಳವಾದ ಓದಿನ ಸಾಮಗ್ರಿಗಳನ್ನು ಓದುಗರು ಬಯಸುತ್ತಾರೆ. ಈ ಗುಣ ಕಿಂಡಲ್‌ಗಳಲ್ಲಿದೆ ಎನ್ನುವುದು ಅವರ ಅನಿಸಿಕೆ.

‘ಭಾರತ ಇಂಗ್ಲಿಷ್ ಪುಸ್ತಕಗಳ ಮಾರಾಟದಲ್ಲಿ ವಿಶ್ವದ ಮೂರನೇ ದೊಡ್ಡ ಮಾರುಕಟ್ಟೆ. ಮಧ್ಯಮ ವರ್ಗದ ಆದಾಯದ ಜೊತೆಗೆ ಇಂಟರ್ನೆಟ್ ಬಳಕೆದಾರರೂ ಹೆಚ್ಚುತ್ತಿರುವುದರಿಂದ ಭಾರತದಲ್ಲಿ ಇ–ಪುಸ್ತಕಗಳ ಮಾರುಕಟ್ಟೆ ತ್ವರಿತಗತಿಯಲ್ಲಿ ಬೆಳವಣಿಗೆ ಕಾಣಲಿದೆ’ ಎನ್ನುವ ಲೆಕ್ಕಾಚಾರ ಮೆಹ್ತಾ ಅವರದು.

ವರ್ಚುಯಲ್ ಸೆಕ್ಸ್ ಅನುಭವ: ಇ–ಪುಸ್ತಕಗಳಲ್ಲಿ ಓದುವುದು ವಿಭಿನ್ನ ಸುಖ ನೀಡುತ್ತದೆ. ಅದೊಂದು ರೀತಿ ವರ್ಚುಯಲ್ ಸೆಕ್ಸ್ ಇದ್ದಂತೆ ಎನ್ನುವುದು ‘ಜೆಎಲ್‌ಎಫ್’ನಲ್ಲಿ ಪಾಲ್ಗೊಂಡಿರುವ ಅರ್ಜೆಂಟೀನಾದ ಪ್ರಸಿದ್ಧ ಕಾದಂಬರಿಕಾರ ಆಲ್ಬರ್ಟೊ ಮ್ಯಾನುಯಲ್ ಅನಿಸಿಕೆ,
ಲೇಖಕ ಏನು ಬರೆಯುವನೋ ಅದು ಸಾಹಿತ್ಯ ಎನ್ನುವುದು ಒಂದು ಪರಿಕಲ್ಪನೆ. ಆದರೆ, ಓದುಗ ತನಗೆ ಬೇಕಾದ ಸಾಹಿತ್ಯ ಯಾವುದೆನ್ನುವುದನ್ನು ಪ್ರಸ್ತುತ ನಿರ್ಧರಿಸುತ್ತಿದ್ದಾನೆ. ಹಾಗಾಗಿ ಸಾಹಿತ್ಯ ಚರಿತ್ರೆ ಎನ್ನುವುದು ಬರಹಗಾರರಿಗೆ ಸಂಬಂಧಿಸಿದ್ದಷ್ಟೇ ಅಲ್ಲ, ಅದು ಓದುಗರ ಚರಿತ್ರೆಯೂ ಹೌದು. ಈ ಬದಲಾವಣೆಯ ಸಂದರ್ಭದಲ್ಲಿ, ಸಾಂಪ್ರದಾಯಿಕ ಗ್ರಂಥಾಲಯಗಳ ಸ್ಥಳಗಳನ್ನು ‘ಮಲ್ಟಿಮೀಡಿಯ ಲೈಬ್ರರಿ’ಗಳು ಆಕ್ರಮಿಸಿಕೊಳ್ಳುತ್ತಿವೆ. ಹಳೆಯ ಕಾಲದ ಗ್ರಂಥಾಲಯಗಳು ಈಗ ಪವಿತ್ರ ಸ್ಥಳಗಳಂತೆ ಕಾಣಿಸುತ್ತಿವೆ ಎನ್ನುವುದು ಅವರ ವಿಶ್ಲೇಷಣೆ.

ಸಾವಿನ ಚಿತ್ರಕಥೆ ಬರೆದ ಮಹಾತ್ಮ!: ‘ಒಬ್ಬ ವ್ಯಕ್ತಿಯಿಂದ ಅಥವಾ ಒಂದು ಸಮುದಾಯದ ಚಿಂತನೆಯಿಂದ ಗಾಂಧೀಜಿ ಅವರ ಕೊಲೆ ನಡೆಯಿತು ಎನ್ನುವುದು ತೀರಾ ಸರಳ ಗ್ರಹಿಕೆ. ಭಾರತ–ಪಾಕಿಸ್ತಾನ ವಿಭಜನೆಯಿಂದ ಭುಗಿಲೆದ್ದ ಹಿಂಸಾಚಾರದಿಂದ ನೊಂದಿದ್ದ ಗಾಂಧೀಜಿ ತಮ್ಮ ಸಾವಿನ ಚಿತ್ರಕಥೆಯನ್ನು ತಾವೇ ರಚಿಸಿಕೊಂಡಿದ್ದರು. ತಮ್ಮ ಕೊನೆಯ 133 ದಿನಗಳಲ್ಲಿ ಸಾವಿನ ಬಗ್ಗೆ ಅವರು ಅನೇಕ ಸಲ ಮಾತನಾಡಿದ್ದರು. ಗಾಂಧೀಜಿ ಸಾವಿನಲ್ಲಿ ನಾವೆಲ್ಲರೂ ಒಂದಲ್ಲಾ ಒಂದು ರೀತಿ ಭಾಗಿಯಾಗಿದ್ದೇವೆ’. ಇದು ಲೇಖಕ ಮಕರಂದ ಪರಾಂಜಪೆ ವಿಶ್ಲೇಷಣೆ.

‘ದಿ ಮ್ಯಾನ್ ಅಂಡ್ ದಿ ಮಹಾತ್ಮ’ ಗೋಷ್ಠಿಯಲ್ಲಿ ಮಾತನಾಡಿದ ಅವರು, ಬದುಕಿದ್ದ ಕಾಲಕ್ಕಿಂತಲೂ ಮರಣಾನಂತರದ ಗಾಂಧೀಜಿ ಬದುಕೇ ಹೆಚ್ಚು ಮಹತ್ವದ್ದಾಗಿದೆ. ಈ ಪ್ರಸ್ತುತತೆಯೇ ಅವರನ್ನು ಮಹಾತ್ಮರನ್ನಾಗಿಸಿದೆ ಎಂದರು.

ಡಿ.ಆರ್.ನೆನಪು
‘ಜೆಎಲ್‌ಎಫ್’ನ ಕಳೆದ ಮೂರು ದಿನಗಳ ಒಂದಲ್ಲಾ ಒಂದು ಗೋಷ್ಠಿಯಲ್ಲಿ ಕನ್ನಡ ವಿಮರ್ಶಕ ಡಿ.ಆರ್. ನಾಗರಾಜ್ ಹೆಸರು ಪ್ರಸ್ತಾಪವಾಗಿದೆ. ಶನಿವಾರ ಕೂಡ ‘ದಿ ಮ್ಯಾನ್ ಅಂಡ್ ದಿ ಮಹಾತ್ಮ’ ಗೋಷ್ಠಿಯಲ್ಲಿ, ಗಾಂಧಿ ಮತ್ತು ಅಂಬೇಡ್ಕರ್ ಅವರನ್ನು ಅರ್ಥೈಸಲಿಕ್ಕೆ ಡಿ.ಆರ್. ಅವರ ಮಾತುಗಳು ಉಲ್ಲೇಖಗೊಂಡವು.

ಗೋಷ್ಠಿಗಳಲ್ಲಿ ಕನ್ನಡಿಗರು!
ಗಿರೀಶ ಕಾರ್ನಾಡ್, ರಘು ಕಾರ್ನಾಡ್ ಹಾಗೂ ಸುಧಾ ಮೂರ್ತಿ ಅವರು ಶನಿವಾರ ‘ಜೆಎಲ್‌ಎಫ್’ ವಿವಿಧ ಗೋಷ್ಠಿಗಳಲ್ಲಿ ಭಾಗವಹಿಸಿದ್ದು ವಿಶೇಷ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.