ಶ್ರವಣಬೆಳಗೊಳ: ಪ್ರಸಿದ್ಧ ವ್ಯಂಗ್ಯಚಿತ್ರಕಾರ ಆರ್.ಕೆ. ಲಕ್ಷ್ಮಣ್ ಸ್ಮರಣಾರ್ಥ ಪುಸ್ತಕ ಮಳಿಗೆಯಲ್ಲಿ ಏರ್ಪಡಿಸಿರುವ ವ್ಯಂಗ್ಯಚಿತ್ರ ಪ್ರದರ್ಶನ ನೋಡುಗರ ಗಮನ ಸೆಳೆಯುತ್ತಿದೆ.

ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘದ ಆಶ್ರಯದಲ್ಲಿ ವ್ಯಂಗ್ಯಚಿತ್ರ ಪ್ರದರ್ಶನ ಆಯೋಜಿಸಲಾಗಿದೆ. ಪ್ರದರ್ಶನದಲ್ಲಿ 200ಕ್ಕೂ ಹೆಚ್ಚು ಚಿತ್ರಗಳಿವೆ. ಪ್ರಸಕ್ತ ರಾಜಕೀಯ ವಿದ್ಯಮಾನಗಳ ಚಿತ್ರಣ ಅವುಗಳ ವಿಡಂಬನೆ, ಸಾಮಾಜಿಕ, ಆರ್ಥಿಕ , ಧಾರ್ಮಿಕ, ಜಾಗತೀಕರಣ, ಉದಾರೀಕರಣ, ಖಾಸಗೀಕರಣ. ಹೀಗೆ ಹತ್ತು ಹಲವು ಬಗೆಯ ಚಿತ್ರಗಳು ರಾರಾಜಿಸುತ್ತಿವೆ.

ಸಮಾಜದಲ್ಲಿ ನಡೆಯುವ ಘಟನೆಗಳ ಸತ್ಯಾಂಶವನ್ನು ವ್ಯಂಗ್ಯಚಿತ್ರಗಳು ತಿಳಿಸುತ್ತವೆ. ನೂರುಪದಗಳಲ್ಲಿ ಹೇಳ ಬಹುದಾದದ್ದನ್ನು ಒಂದು ಚಿತ್ರ ಇಡೀ ಘಟನೆಯ ಚಿತ್ರಣ ನೀಡುವಂತಿದೆ. ಪ್ರದರ್ಶನದಲ್ಲಿ ಆರ್.ಕೆ. ಲಕ್ಷ್ಮಣ್, ವ್ಯಂಗ್ಯಚಿತ್ರಗಳು ಸೇರಿದಂತೆ ವ್ಯಂಗ್ಯಚಿತ್ರಕಾರರಾದ ಏಕನಾಥ ಬೊಂಗಾಳೆ, ವೆಂಕಟೇಶ್ ಇನಾಮದಾರ ಮತ್ತು ಎಂ.ವಿ. ಶಿವರಾಂ ಸೇರಿ 15ಕ್ಕೂ ಹೆಚ್ಚು ವ್ಯಂಗ್ಯಚಿತ್ರಕಾರರ ವ್ಯಂಗ್ಯಚಿತ್ರಗಳನ್ನು ಪ್ರದರ್ಶನಕ್ಕಿಡಲಾಗಿದೆ.

ವ್ಯವಸ್ಥೆಯಲ್ಲಿ ನಡೆಯುತ್ತಿರುವ ಘಟನೆಗಳನ್ನು ಹಾಸ್ಯ ಲೇಪನದ ಮೂಲಕ ವ್ಯಂಗ್ಯಚಿತ್ರ ಸತ್ಯದ ಸಾಕ್ಷಾತ್ಕಾರ ಮಾಡಿಸುತ್ತಿದೆ. ವ್ಯಂಗ್ಯಚಿತ್ರ ಪ್ರದರ್ಶನದಲ್ಲಿ ರಾಜಕೀಯ ಕೃತಿಗಳು ಮನಸಿಗೆ ಮುದ ನೀಡಿದವು ಎಂದು ಕೆ.ಆರ್. ನಗರದಿಂದ ಸಮ್ಮೇಳನಕ್ಕೆ ಆಗಮಿಸಿದ್ದ ಸಾಹಿತ್ಯಾಸಕ್ತ ಅರುಣ್ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.