ಬಸವಕಲ್ಯಾಣ (ಬೀದರ್ ಜಿಲ್ಲೆ): ‘ಗುಲ್ಬರ್ಗ ವಿಶ್ವವಿದ್ಯಾಲಯಕ್ಕೆ ಬಸವಣ್ಣನವರ ಹೆಸರು ಮತ್ತು ಇತರ ವಿಶ್ವವಿದ್ಯಾಲಯಗಳಿಗೆ ಶರಣರ ಹೆಸರು ಇಡಲು ಮುಖ್ಯಮಂತ್ರಿಗಳ ಜತೆ ಚರ್ಚಿಸುತ್ತೇನೆ’ ಎಂದು ಸಮಾಜ ಕಲ್ಯಾಣ ಸಚಿವ ಎಚ್. ಆಂಜನೇಯ ಭರವಸೆ ನೀಡಿದರು.

ಇಲ್ಲಿನ ಬಸವ ಮಹಾಮನೆ ಆವರಣದಲ್ಲಿ ಹಮ್ಮಿಕೊಂಡಿರುವ ಕಲ್ಯಾಣಪರ್ವದ ಎರಡನೇ ದಿನದ ಗೋಷ್ಠಿಯಲ್ಲಿ ಮಾತನಾಡಿದರು.

‘ಬಸವ ಮಹಾಮನೆ ಆವರಣ ದಲ್ಲಿನ 108 ಅಡಿ ಎತ್ತರದ ಬಸವಣ್ಣ ನವರ ಪ್ರತಿಮೆ ಎದುರಲ್ಲಿ ದಲಿತ ಶರಣರಾದ ಡೋಹರ ಕಕ್ಕಯ್ಯ, ಸಮಗಾರ ಹರಳಯ್ಯ, ಮಾದಾರ ಚನ್ನಯ್ಯನವರ ಭವನ ಹಾಗೂ ಇತರ ಸ್ಮಾರಕ ನಿರ್ಮಿಸಲು ಹಣ ಮಂಜೂರು ಮಾಡಲಾಗುವುದು.
ಬಸವಣ್ಣನವರು ಅಸ್ಪೃಶ್ಯತೆ ತೊಲಗಿ ಸುವಲ್ಲಿ ಮಹತ್ವದ ಕಾರ್ಯ ಮಾಡಿ ದ್ದಾರೆ. ಅವರ ಪ್ರಯತ್ನದಿಂದಾಗಿಯೇ ಅಂದಿನ ದಲಿತರೂ ಶರಣರಾದರು. ದಲಿತ ವರ್ಗದ ಮತ್ತು ಬಸವ ತತ್ವವನ್ನು ಆಚರಿಸುತ್ತಿರುವ 50 ಕ್ಕೂ ಹೆಚ್ಚಿನ ಸಣ್ಣ ಮಠಗಳ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಲಾಗಿದೆ’ ಎಂದು ತಿಳಿಸಿದರು.

ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಸಿ.ಎಂ. ಇಬ್ರಾಹಿಂ ಮಾತನಾಡಿ, ‘ಪರಿಸರ ಸ್ವಚ್ಛತೆಗಿಂತ ಎಲ್ಲರ ಅಂತರಂಗ ಶುದ್ಧಿ ಆಗ ಬೇಕಾಗಿದೆ.

ಅದಕ್ಕಾಗಿ ಬಸವತತ್ವದ ಆಚರಣೆ ಅವಶ್ಯ. ಬಸವ ಕಲ್ಯಾಣದಲ್ಲಿನ ಶರಣ ಸ್ಥಳಗಳ ಅಭಿವೃದ್ಧಿ ಬಗ್ಗೆ ಯೋಜನೆ ಸಿದ್ಧಪಡಿಸ ಲಾಗುವುದು.
ಪ್ರವಾಸಿಗರ ಅನು ಕೂಲಕ್ಕಾಗಿ ವಸತಿ ಕೋಣೆ ಹಾಗೂ ಇತರ ಸೌಲಭ್ಯ ಒದಗಿಸಲು ಪ್ರಯತ್ನಿಸಲಾಗುವುದು’ ಎಂದರು.

ಮಾಜಿ ಶಾಸಕ ಕೈಲಾಸನಾಥ ಪಾಟೀಲ, ಕೂಡಲ ಸಂಗಮ ಬಸವ ಧರ್ಮ ಪೀಠಾಧ್ಯಕ್ಷೆ ಮಾತೆ ಮಹಾ ದೇವಿ ಮಾತನಾಡಿದರು. ಶ್ರೀಶೈಲ ಸಾರಂಗ ಮಠದ ಸಾರಂಗಧರ ದೇಶಿಕೇಂದ್ರ ಸ್ವಾಮೀಜಿ, ಮಾತೆ ಗಂಗಾ ದೇವಿ, ಮಾಜಿ ಸಂಸದ ನರಸಿಂಗರಾವ ಸೂರ್ಯವಂಶಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.