ನವದೆಹಲಿ (ಪಿಟಿಐ): ಬಂಗಾರ ಖರೀದಿಸಬೇಕೆಂದವರಿಗೆ ಶುಭಸುದ್ಧಿ. ಚಿನ್ನದ ಧಾರಣೆ ಎರಡು ವರ್ಷಗಳಲ್ಲೇ ಕನಿಷ್ಠ ಮಟ್ಟಕ್ಕೆ ಇಳಿಕೆ ಕಂಡಿದೆ. ಮಂಗಳವಾರ ನವದೆಹಲಿಯಲ್ಲಿ ಸ್ಟಾಂಡರ್ಡ್ ಚಿನ್ನದ ಧಾರಣೆ 10 ಗ್ರಾಂಗಳಿಗೆ ₹300 ಕುಸಿದಿದ್ದು, ₹ 25,700ಕ್ಕೆ ಇಳಿಕೆ ಕಂಡಿದೆ. ಇದು ಕಳೆದ 24 ತಿಂಗಳಲ್ಲೇ ಕನಿಷ್ಠ ಬೆಲೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಧಾರಣೆ ಕಳೆದ ಒಂದು ವಾರದಿಂದ ಸತತ ಕುಸಿಯುತ್ತಿದ್ದು, 5 ವರ್ಷಗಳ ಹಿಂದಿನ ಮಟ್ಟಕ್ಕೆ ತಗ್ಗಿದೆ. ಜಾಗತಿಕ ಷೇರುಪೇಟೆಗಳು ಚೇತರಿಸಿಕೊಂಡಿರುವುದರಿಂದ ಚಿನ್ನದ ಮೇಲಿನ ಹೂಡಿಕೆಯೂ ತಗ್ಗಿದೆ. ಈ ಎಲ್ಲ ಕಾರಣಗಳಿಂದ ದೇಶೀಯ ಮಾರುಕಟ್ಟೆಯಲ್ಲೂ ಚಿನ್ನದ ಬೆಲೆ ₹ 25 ಸಾವಿರದ ಆಸುಪಾಸಿಗೆ ಬಂದಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ಬೆಲೆ ಇನ್ನಷ್ಟು ಇಳಿಯುವ ನಿರೀಕ್ಷೆ ಇರುವುದರಿಂದ ಚಿನ್ನಾಭರಣ ವರ್ತಕರಿಂದ ಕೂಡ ಹೊಸ ಚಿನ್ನದ ಖರೀದಿ ತಗ್ಗಿದೆ.
ಇನ್ನೊಂದೆಡೆ ಬೆಳ್ಳಿ ಬೆಲೆಯೂ ಮತ್ತೆ ಕೆ.ಜಿಗೆ ₹150 ಇಳಿಕೆ ಕಂಡಿದ್ದು ₹ 34,200ಕ್ಕೆ ಇಳಿದಿದೆ. ಇದು ಕಳೆದ 5 ವರ್ಷಗಳಲ್ಲೇ ಕನಿಷ್ಠ ಧಾರಣೆ.

ನವದೆಹಲಿ ಧಾರಣೆ: ಸ್ಟಾಂಡರ್ಡ್ ಚಿನ್ನ 10ಗ್ರಾಂಗೆ ₹ 25,700, ಶುದ್ದ ಬೆಳ್ಳಿ ಕೆ.ಜಿಗೆ ₹ 34,200.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.