ರಾಮನಗರ: `ನಾನು ಸತ್ತ ಮೇಲೆ ನನ್ನ ತಿಥಿ ಮಾಡಬೇಡಿ, ಬದಲಿಗೆ ಸಸಿ ನೆಡಿ'. ಇದು ಸರ್ಕಾರ ಅಥವಾ ಸ್ವಯಂ ಸೇವಾ ಸಂಸ್ಥೆಗಳು ಜನರನ್ನು ಪುಸಲಾಯಿಸಿ ಹೇಳಿಸುವ ಘೋಷಣೆಯಲ್ಲ. ಬದಲಿಗೆ ಸಾಮಾನ್ಯ ರೈತರೊಬ್ಬರ ಕೊನೆಯಾಸೆ.

ಇತ್ತೀಚೆಗೆ ಕೊನೆಯುಸಿರೆಳೆದ ಚನ್ನಪಟ್ಟಣ ತಾಲ್ಲೂಕಿನ ಅರಳಾಳುಸಂದ್ರದ ರೈತ ಮುಖಂಡ ಮಾದೇಗೌಡ (70) ಅವರು ಸಾವಿಗೂ ಮುನ್ನ ತಮ್ಮ ಡೈರಿಯಲ್ಲಿ ಈ ವಿಷಯ ಕುರಿತು ಮೂರು ಪುಟಗಳಷ್ಟು ಸುದೀರ್ಘ ವಿವರ ದಾಖಲಿಸಿದ್ದಾರೆ.

`ನಾನು ಸತ್ತಮೇಲೆ ನನ್ನ ತಿಥಿ ಮಾಡಬೇಡಿ. ಹಾರ, ಹಣ್ಣು, ಎಳನೀರು ಇತ್ಯಾದಿಗಳನ್ನು ತಂದು, ದುಂದು ವೆಚ್ಚ ಮಾಡಬೇಡಿ. ಮೃತದೇಹ ಹೂಳುವ ಸ್ಥಳದ ಬಳಿ ತೆಂಗಿನ ಸಸಿ ನೆಟ್ಟು ನೀರೆರೆದರೆ ಸಾಕು. ಇದುವೇ ನನ್ನ ಕೊನೆಯ ಬೇಡಿಕೆ' ಎಂದು ಅವರು ಡೈರಿಯಲ್ಲಿ ಬರೆದಿದ್ದಾರೆ.

`ರೈತ ಮುಖಂಡರಾದ ಪಚ್ಚೆ ಮತ್ತು ಚುಕ್ಕಿ ನಂಜುಂಡಸ್ವಾಮಿ, ಜಿಲ್ಲಾ ಮತ್ತು ರಾಜ್ಯ ರೈತ ಮುಖಂಡರು, ಸಂಬಂಧಿಕರು, ಸ್ನೇಹಿತರು, ಮಾಧ್ಯಮದವರು ನನ್ನ ಈ ಬೇಡಿಕೆ ಈಡೇರುವಂತೆ ನೋಡಿಕೊಳ್ಳಬೇಕು' ಎಂದೂ ಅವರು ಮನವಿ ಮಾಡಿದ್ದಾರೆ.

ಸ್ನೇಹಿತರ ಹೆಗಲಿಗೆ ಜವಾಬ್ದಾರಿ: `ಸಸಿ ನೆಡುವ ಜವಾಬ್ದಾರಿ ಕೆಲಸವನ್ನು ಸ್ನೇಹಿತರಾದ ರಾಮು, ಮಲ್ಲೇಗೌಡ, ತಿಮ್ಮೇಗೌಡ, ಕೃಷ್ಣಪ್ಪ, ಕೃಷ್ಣೇಗೌಡ, ಸಿದ್ದೇಗೌಡ, ಸಿಂ.ಲಿಂ.ನಾಗರಾಜು, ಸು.ತ, ರಾಮೇಗೌಡ, ರಾಜು, ನಾಗೇಶ್, ಶಿವಮಲ್ಲಯ್ಯ, ಕೆ.ಬಿ.ನಾಗರಾಜು, ನರಸರಾಜು, ರಮೇಶ್ಗೌಡ ತೆಗೆದುಕೊಳ್ಳಬೇಕು. ಆಡಂಬರ ಮತ್ತು ದುಂದುವೆಚ್ಚದಿಂದ ತಿಥಿ ಮಾಡದೇ ಸರಳವಾಗಿ ಸಸಿ ನೆಡುವ ಕಾರ್ಯವನ್ನು ಪೂರೈಸಬೇಕು. ಎಂಬುದು ಮಾದೇಗೌಡರ ಸೂಚನೆಯಾಗಿದೆ.

`ಪತ್ನಿ ತೀರಿದಾಗಲೂ ಹಾಗೆ ಮಾಡಿದ್ದೆ': `1983-84ರಲ್ಲಿ ಪತ್ನಿ ಗೌರಮ್ಮ ಅಗಲಿದಾಗಲೂ ನಾನು ತಿಥಿ ಮಾಡಲಿಲ್ಲ. ಆಕೆ ಸತ್ತ 13ನೇ ದಿನಕ್ಕೆ ತೆಂಗಿನ ಸಸಿ ನೆಟ್ಟು, ಬಂದಿದ್ದ ಬಂಧುಗಳಿಂದ ಅದಕ್ಕೆ ನೀರೆರೆಸಿ, ಸಸಿಗೆ ನಮಿಸುವಂತೆ ಮಾಡಿದ್ದೆ. ಈಗ ಆ ಸಸಿ 30 ಅಡಿ ಎತ್ತರ ಬೆಳೆದಿದ್ದು, ಫಲ ನೀಡುತ್ತಿದೆ. ನನ್ನ ಸಾವಿನ ನಂತರವೂ ಇದೇ ರೀತಿ ಮಾಡಬೇಕು. ಪತ್ನಿ ಸಮಾಧಿ ಬಳಿಯಲ್ಲೇ ನನ್ನ ಅಂತ್ಯಕ್ರಿಯೆಯನ್ನೂ ನೆರವೇರಿಸಿ' ಎಂದು ಉಲ್ಲೇಖಿಸಿದ್ದಾರೆ.

ಸರಳ-ಸಜ್ಜನ ವ್ಯಕ್ತಿತ್ವ: ಸರಳ ಮತ್ತು ಸಜ್ಜನ ವ್ಯಕ್ತಿತ್ವ ಹೊಂದಿದ್ದ ಮಾದೇಗೌಡರು, ಯುವಕರಾಗಿದ್ದಾಗಲೇ ರೈತ ಸಂಘದ ವಿಚಾರಧಾರೆಗಳಿಂದ ಸಾಕಷ್ಟು ಆಕರ್ಷಿತರಾಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.