ಧಾರವಾಡ, ಕೋಲಾರ, ಗದಗ, ಬಳ್ಳಾರಿ, ಬೆಳಗಾವಿ, ರಾಯಚೂರು, ವಿಜಾಪುರ, ಗುಲ್ಬರ್ಗ, ಚಿತ್ರದುರ್ಗ, ತುಮಕೂರು, ಚಿಕ್ಕಮಗಳೂರು, ಮಂಡ್ಯ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಫ್ಲೋರೋಸಿಸ್ ಬಹಳ ಸಾಮಾನ್ಯ.

ಇದು ಮನುಷ್ಯರು ಮತ್ತು ಜಾನುವಾರುಗಳನ್ನು ಕಾಡುವ ಒಂದು ವಿಷಬಾಧೆ. ಮನುಷ್ಯನಲ್ಲಿ ಈ ರೋಗ ತಡೆಯಲು ಸಂಶೋಧನೆ, ಪ್ರಯತ್ನಗಳು ನಡೆಯುತ್ತಿವೆ. ಆದರೆ ಜಾನುವಾರುಗಳಲ್ಲಿ ಫ್ಲೋರೋಸಿಸ್ ಬಗ್ಗೆ ಸಂಶೋಧನೆ ನಿಖರವಾಗಿ ಆಗಿಲ್ಲ ಅಥವಾ ವರದಿಯಾಗಿಲ್ಲ.

ರಾಸಾಯನಿಕವಾಗಿ ಫ್ಲೋರಿನ್ ಅತ್ಯಂತ ಚುರುಕಾದ ವಸ್ತು. ಇದು ಅಲ್ಯುಮಿನಿಯಂ, ಕಬ್ಬಿಣ, ಕ್ಯಾಲ್ಸಿಯಂ, ಸಿಲಿಕೇಟ್ಸ್, ಫಾಸ್ಫೇಟ್‌ಗಳ ಸಂಯುಕ್ತ ರೂಪದಲ್ಲಿ ಇರುತ್ತದೆ. ಅಲ್ಲದೇ ವಿವಿಧ ಕೈಗಾರಿಕೆಗಳು ಫ್ಲೋರೈಡನ್ನು ತ್ಯಾಜ್ಯವಾಗಿ ಹೊರಸೂಸುತ್ತವೆ.

ಇದರಲ್ಲಿನ ಫ್ಲೋರಿನ್ ನೀರಿನಲ್ಲಿ ಬಹಳ ಸುಲಭವಾಗಿ ಕರಗುತ್ತದೆ. ಈ ನೀರು ಸೇವನೆ, ಇದನ್ನು ಬಳಸಿ ಬೆಳೆದ ಬೆಳೆ ಇತ್ಯಾದಿಗಳಿಂದ ಫ್ಲೋರೋಸಿಸ್ ಬರುತ್ತದೆ.

ಫ್ಲೋರೈಡ್ ವಿಷಬಾಧೆಯು ಜಾನುವಾರು ಎಷ್ಟು ಪ್ರಮಾಣದಲ್ಲಿ ಇದನ್ನು ತಿಂದಿದೆ ಎಂಬುದರ ಮೇಲೆ ಅವಲಂಬಿಸಿದೆ. ಸಾಮಾನ್ಯವಾಗಿ ಆಹಾರದಲ್ಲಿ ಫ್ಲೋರಿನ್ ಅಂಶ 100 ಪಿಪಿಎಂ ಮೀರಿದರೆ ವಿಷಬಾಧೆಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ತೊಂದರೆಯೇನು?
ಪಶು ಆಹಾರದಲ್ಲಿ ಡೈ ಕ್ಯಾಲ್ಸಿಯಂ ಫಾಸ್ಫೇಟ್ ಬದಲಾಗಿ ರಾಕ್ ಫಾಸ್ಫೇಟ್ ಉಪಯೋಗಿಸಿದರೆ ಫ್ಲೋರಿನ್ ಅಂಶ ಹೆಚ್ಚಾಗಬಹುದು. ನೀರಿನಲ್ಲಿ ಫ್ಲೋರಿನ್ ಅಂಶ 12-19 ಪಿಪಿಎಂಗಿಂತ ಜಾಸ್ತಿ ಇದ್ದಲ್ಲಿ ವಿಷಬಾಧೆ ಪ್ರಾರಂಭವಾಗುತ್ತದೆ. ನಿತ್ಯ 0.5-107 ಮಿಲಿಗ್ರಾಂ/ ಕಿಲೋ ಪ್ರಮಾಣದಲ್ಲಿ ಫ್ಲೋರಿನ್ ಅಂಶ ಆಹಾರದ ಮೂಲಕ ದೇಹಕ್ಕೆ ಹೋದರೆ ಹಲ್ಲಿನ ಹುಳುಕು ಪ್ರಾರಂಭವಾಗುತ್ತದೆ.

ಹಲ್ಲು ಮತ್ತು ಎಲುಬು ಸವೆಯುತ್ತವೆ. ಆದರೆ ಈ ಪ್ರಮಾಣದಲ್ಲಿ ಶರೀರದ ಬೆಳವಣಿಗೆಗೆ ಯಾವುದೇ ತೊಂದರೆಯಾಗುವುದಿಲ್ಲ. ಇದು ದ್ವಿಗುಣಗೊಂಡರೆ ಕಾಲಕ್ರಮೇಣ ವಿಷಬಾಧೆಯ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ವಿಷಬಾಧೆಗೆ ಅತ್ಯಂತ ಸಾಮಾನ್ಯ ಕಾರಣ ಕುಡಿಯುವ ನೀರಿನಲ್ಲಿ ಫ್ಲೋರಿನ್ ಅಂಶ ಜಾಸ್ತಿ ಇರುವುದು. ಇದು ಸಾಮಾನ್ಯವಾಗಿ ಆಳವಾದ ಬಾವಿಗಳು, ಕೊಳವೆ ಬಾವಿಗಳು, ಕಾರ್ಖಾನೆಗಳು ಬಿಡುವ ತ್ಯಾಜ್ಯಗಳು, ಇವುಗಳಿಂದ ಕಲುಷಿತಗೊಂಡ ನೀರು, ಗಿಡಗಳು, ಹುಲ್ಲುಗಾವಲುಗಳಿಂದ ಬರುತ್ತದೆ. ಪ್ರಾಣಿಗಳಲ್ಲಿ ರಂಜಕದ ಕೊರತೆ ಇದ್ದರೆ ಬೇಗ ಫ್ಲೋರಿನ್ ವಿಷಬಾಧೆಗೆ ತುತ್ತಾಗುತ್ತವೆ.

ಸಾಮಾನ್ಯವಾಗಿ ಜಾನುವಾರು ರಕ್ತದಲ್ಲಿ 100 ಎಂಎಲ್‌ಗೆ 0.2 ಮಿಲಿಗ್ರಾಂ ಮತ್ತು ಮೂತ್ರದಲ್ಲಿ 0.2 ಪಿಪಿಎಂ ಫ್ಲೋರಿನ್ ಇರುತ್ತದೆ. ಇದರಿಂದ ಯಾವುದೇ ಅಪಾಯವಿಲ್ಲ.

ಫ್ಲೋರಿನ್ ಪ್ರಮಾಣ ಇದಕ್ಕಿಂತ ಜಾಸ್ತಿಯಾದಲ್ಲಿ ರಂಜಕದೊಂದಿಗೆ ಮಿಶ್ರಗೊಂಡು ಎಲುಬು ಮತ್ತು ಹಲ್ಲುಗಳಲ್ಲಿ ಶೇಖರಗೊಳ್ಳುತ್ತದೆ. ಈ ಕ್ರಿಯೆ ಶರೀರದ ಉದ್ದವಾದ ಎಲುಬುಗಳಲ್ಲಿ ಜಾಸ್ತಿ. ಹೆಚ್ಚಿನ ಪ್ರಮಾಣದ ಫ್ಲೋರಿನ್ ಅಂಶ ಶೇಖರಗೊಂಡಂತೆ ಕ್ಯಾಲ್ಸಿಯಂ ಮತ್ತು ರಂಜಕಗಳು ಹೊರದೂಡಲ್ಪಟ್ಟು ಎಲುಬು ಠೊಳ್ಳಾಗುತ್ತದೆ. ಇದರಿಂದ ಕುಂಟುತನ, ಕಾಲು ಗಂಟು ಊದುವಿಕೆ, ಎಲುಬಿನ ನೋವು, ನಡೆದಾಡಲು ತೊಂದರೆ ಮತ್ತು ಏಳಲು ತೊಂದರೆಯಾಗುತ್ತದೆ.

ಉದ್ದ ಎಲುಬುಗಳು ಠೊಳ್ಳಾಗುವುದರಿಂದ ಬಾಗಿ ಮುರಿಯುತ್ತವೆ. ಅಲ್ಲದೇ ಮೂತ್ರಜನಕಾಂಗ, ಪಿತ್ತಜನಕಾಂಗ, ಅಡ್ರಿನಲ್ ಗ್ರಂಥಿ, ಹೃದಯದ ಮಾಂಸಖಂಡಗಳು ಮತ್ತು ಕೇಂದ್ರ ನರಮಂಡಲದಲ್ಲಿ ಉರಿಯೂತ, ರಕ್ತಸ್ರಾವ ಕಾಣಿಸಿಕೊಳ್ಳಬಹುದು.

ವಿಷಬಾಧೆಯ ಲಕ್ಷಣಗಳು

ತೀವ್ರತರವಾದ ವಿಷಬಾಧೆಯಿಂದ ನಾಲ್ಕು ಹೊಟ್ಟೆಯ (ರುಮಿನಂಟ್ಸ್ ಅಥವಾ ಮೆಲುಕು ಹಾಕುವ ಪ್ರಾಣಿಗಳಾದ ಆಡು, ಕುರಿ, ಎಮ್ಮೆ, ದನ) ಜಾನುವಾರುಗಳಲ್ಲಿ ಹೊಟ್ಟೆಯ ಚಲನೆ ನಿಲ್ಲುವುದು, ಮಲಬದ್ಧತೆ, ಹೈಡ್ರೋಫ್ಲೂರಿಕ್ ಆಮ್ಲದ ಉತ್ಪಾದನೆಯಿಂದ ಹೊಟ್ಟೆಯಲ್ಲಿ ಉರಿಯುಂಟಾಗಿ ಭೇದಿ, ರಕ್ತಹೀನತೆ ಆಗಬಹುದು. ನರಮಂಡಲದ ಮೇಲೆ ದುಷ್ಪರಿಣಾಮ, ಮಾಂಸಖಂಡಗಳ ಅದುರುವಿಕೆ, ನಿಶ್ಯಕ್ತಿ, ಕಣ್ಣಿನ ಪಾಪೆ ಅಗಲಗೊಳ್ಳುವುದು, ಉದ್ವೇಗ ಮತ್ತು ನಿರಂತರ ಹಲ್ಲು ಕಡಿತ ಇತ್ಯಾದಿಗಳು ಕಂಡುಬರಬಹುದು.

ಆದರೆ ಮುಖ್ಯವಾದ ಪರಿಣಾಮ ಹಲ್ಲುಗಳ ಮೇಲೆ ಆಗುತ್ತದೆ. ಜಾನುವಾರುಗಳಲ್ಲಿ ಕೋರೆಹಲ್ಲುಗಳು ಮೊದಲು ಬಾಧೆಗೆ ಒಳಗಾಗುತ್ತವೆ. ಮೊದಲ ಚಿಹ್ನೆಗಳೆಂದರೆ ತಿಳಿ ಹಳದಿ, ಹಳದಿ, ಹಸಿರು, ಕಂದು ಅಥವಾ ಕಪ್ಪು ಚುಕ್ಕೆಗಳು ಹಲ್ಲಿನ ಮೇಲೆ ಸಮಾನಾಂತರ ದೂರದಲ್ಲಿ ಕಾಣಿಸಿಕೊಳ್ಳುತ್ತವೆ.

ಇದರಿಂದ ಹಲ್ಲುಗಳು ಸವೆದು ಆಹಾರ ಜೀರ್ಣವಾಗದೇ ಜಾನುವಾರು ನಿಶ್ಯಕ್ತಿಯಿಂದ ಬಳಲುತ್ತದೆ. ರಕ್ತ ಹೀನತೆ, ಪ್ರೋಟೀನ್ ಕೊರತೆ ಮತ್ತು ಹಾಲಿನ ಇಳುವರಿಯಲ್ಲಿ ತೀವ್ರ ಇಳಿಮುಖ ಕಂಡು ಬರುತ್ತದೆ. ಅದು ಬಂಜೆತನದಿಂದ ಬಳಲಬಹುದು. ಫ್ಲೋರಿನ್ ವಿಷಬಾಧೆಯ ಜಾನುವಾರುಗಳಲ್ಲಿ ಕೋರೆಹಲ್ಲಿನ ಸಮಸ್ಯೆ ಬಹಳ ಸಾಮಾನ್ಯ.

ಚಿಕಿತ್ಸೆ, ನಿಯಂತ್ರಣ
ಈಗಾಗಲೇ ತಿಳಿಸಿದಂತೆ ಸಾಮಾನ್ಯವಾಗಿ ಪ್ರಾಣಿಯ ಶರೀರದಲ್ಲಿ 1200 ಪಿಪಿಎಂ ಫ್ಲೋರಿನ್ ಅಂಶವಿರುತ್ತದೆ. ಅದರೆ ಇದು 3000 ಪಿಪಿಎಂಗಿಂತ ಜಾಸ್ತಿಯಾದಲ್ಲಿ ಅಪಾಯ. ಫ್ಲೋರಿನ್ ಅಂಶವನ್ನು ಆಹಾರ, ನೀರು, ರಕ್ತ, ಮೂತ್ರ ಮತ್ತು ಎಲುಬುಗಳಲ್ಲಿ ಪತ್ತೆ ಮಾಡಿ ವಿಷಬಾಧೆಯನ್ನು ಖಚಿತಪಡಿಸಿಕೊಳ್ಳಬಹುದು.

- ಈ ವಿಷಬಾಧೆಗೆ ನಿಖರ ಚಿಕಿತ್ಸೆ, ಪ್ರತ್ಯ್‌ಷಧ ಇಲ್ಲ.

-ಫ್ಲೋರಿನ್ ಅಂಶ ಇರುವ ಆಹಾರ, ನೀರು ಮತ್ತು ಇತರ ವಸ್ತುಗಳು ಜಾನುವಾರುಗಳಿಗೆ ದೊರೆಯದಂತೆ ನೋಡಿಕೊಳ್ಳುವುದು ಮತ್ತು ಗೊತ್ತಾದ ಕೂಡಲೇ ಅದನ್ನು ನಿಲ್ಲಿಸುವುದು.

-ಹೊಟ್ಟೆಯನ್ನು ಸೂಕ್ತ ದ್ರಾವಣಗಳಿಂದ ತೊಳೆಯುವುದು (ಇದಕ್ಕೆ ವೈದ್ಯರನ್ನು ಸಂಪರ್ಕಿಸಬೇಕು).

-ಕ್ಯಾಲ್ಸಿಯಂ ಚುಚ್ಚುಮದ್ದುಗಳನ್ನು ರಕ್ತನಾಳಕ್ಕೆ ನೀಡಬೇಕು. ಏಕೆಂದರೆ ಬಾಯಿ ಮೂಲಕ ನೀಡುವ ಕ್ಯಾಲ್ಸಿಯಂ ಈ ವಿಷಬಾಧೆಯಲ್ಲಿ ಪರಿಣಾಮಕಾರಿ ಅಲ್ಲ.

-ಆಹಾರ ಮತ್ತು ನೀರನ್ನು ಆಗಾಗ ಫ್ಲೋರಿನ್ ಪರೀಕ್ಷೆಗೆ ಒಳಪಡಿಸಿ, ಜಾಸ್ತಿ ಇದ್ದಲ್ಲಿ ಸೂಕ್ತ ರಾಸಾಯನಿಕ ಚಿಕಿತ್ಸೆ ಮಾಡಿಸಬೇಕು.

-ಅಲ್ಯುಮಿನಿಯಂ ಸಲ್ಫೇಟ್ ಲವಣವನ್ನು ಪ್ರತಿಯೊಂದು ದನಕ್ಕೆ ನಿತ್ಯ 30 ಗ್ರಾಂ ಪ್ರಮಾಣದಲ್ಲಿ ನೀಡುವುದರಿಂದ ದೀರ್ಘಕಾಲಿಕ ವಿಷಬಾಧೆ ತಡೆಯಬಹುದು.

(ಲೇಖಕರು ಹೆಬ್ಬಾಳ ಪಶುವೈದ್ಯ ಕಾಲೇಜಿನ ಸಹ ಪ್ರಾಧ್ಯಾಪಕರು. ಮೊಬೈಲ್ 94480 59777)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.