ಧಾರವಾಡ: ಅತಿ ಎತ್ತರ ಪಾಪಸ್‌ಕಳ್ಳಿ ಬೆಳೆಸಿ, ಗಿನ್ನಿಸ್ ದಾಖಲೆ ಮಾಡಿದ್ದ ಇಲ್ಲಿನ ಎಸ್‌ಡಿಎಂ ದಂತ ವೈದ್ಯಕೀಯ ಕಾಲೇಜು, ಇದೀಗ ತನ್ನದೇ ದಾಖಲೆ ಮುರಿಯುವ ಮತ್ತೊಂದು ಪ್ರಯತ್ನ ನಡೆಸಿದೆ.

ಇಲ್ಲಿನ ಸತ್ತೂರಿನಲ್ಲಿರುವ ಎಸ್‌ಡಿಎಂ ಕಾಲೇಜಿನ ಉದ್ಯಾನದಲ್ಲಿರುವ ‘ಸೆರಿಯುಸ್ ಪೆರುವಿಯೆನ್ಸ್’ ಎಂಬ ಪ್ರಭೇದಕ್ಕೆ ಸೇರಿದ ಪಾಪಸ್‌ಕಳ್ಳಿಯು ಈಗ 105.8 ಅಡಿ ಎತ್ತರ ಬೆಳೆದು ನಿಂತಿದೆ. 2002ರ ಆಗಸ್ಟ್ 15ರಂದು ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ವನಮಹೋತ್ಸವ ಕಾರ್ಯಕ್ರಮದ ಸಂದರ್ಭದಲ್ಲಿ ಈ ಸಸಿ ನೆಡಲಾಗಿತ್ತು. ಪ್ರತಿ ವರ್ಷ 3ರಿಂದ 4 ಅಡಿ ಎತ್ತರ ಬೆಳೆಯುವ ಈ ಪಾಪಸ್‌ಕಳ್ಳಿಯು 2009ರಲ್ಲಿ 78.8 ಅಡಿ ಬೆಳೆದು ನಿಂತಿತ್ತು. ಆಗ ಈ ಗಿಡ ಗಿನ್ನಿಸ್ ದಾಖಲೆ ಸೇರಿತ್ತು. ಇದಾದ ನಂತರ ಮುಂದಿನ ಆರು ವರ್ಷಗಳಲ್ಲಿ 27 ಅಡಿಗಳಷ್ಟು ಎತ್ತರಕ್ಕೆ ಬೆಳೆದಿದೆ!

‘ನಾಲ್ಕು ಅಂತಸ್ತಿನ ಕಟ್ಟಡ ಹಾಗೂ ಅದರ ಮೇಲೆ ಸ್ಥಾಪಿಸಲಾದ ಗೋಪುರದ ಎತ್ತರವನ್ನೂ ಮೀರಿ ಗಿಡ ಬೆಳೆದು ನಿಂತಿದೆ. ಗಿಡದ ಬೆಳವಣಿಗೆಗೆ ಪೂರಕವಾಗಿ ಆಯಾ ಹಂತದಲ್ಲಿ ತಂತಿಯ ಆಸರೆ ನೀಡಲಾಗಿದೆ. ಗಿಡದ ಎತ್ತರ ಅರಿಯಲು ಅದಕ್ಕೆ ಅಳತೆ ಟೇಪ್ ಹಚ್ಚಲಾಗಿದೆ. ಈ ಗಿಡ ಮಾರ್ಚ್‌ನಿಂದ ಅಕ್ಟೋಬರ್ ತಿಂಗಳ ಅಂತರದಲ್ಲಿ ಹೂವು ಹಾಗೂ ಹಣ್ಣು ಬಿಡುತ್ತಿದ್ದು, ಹಣ್ಣು ರುಚಿಯಾಗಿರುತ್ತದೆ’ ಎಂದು ಸಂಸ್ಥೆಯ ಕಾರ್ಯದರ್ಶಿ ಡಾ.ಜಿನೇಂದ್ರ ಪ್ರಸಾದ್ ತಿಳಿಸಿದರು.

‘ದಾಖಲೆ ನಿರ್ಮಿಸುವ ಸಲುವಾಗಿಯೇ ದಕ್ಷಿಣ ಆಫ್ರಿಕಾದ ಈ ಸಸ್ಯವನ್ನು ತಂದು ಇಲ್ಲಿ ನೆಡಲಾಗಿತ್ತು. ಗಿಡ ಬೆಳೆದಂತೆ ಕೊಂಬೆಗಳು ಬರುತ್ತವೆ. ಅವುಗಳನ್ನು ಆಗಾಗ ಕತ್ತರಿಸುತ್ತೇವೆ. ಉಳಿದಂತೆ 3ರಿಂದ 4 ದಿನಗಳಿಗೊಮ್ಮೆ ನೀರು, ಪ್ರತಿ ಎರಡು ತಿಂಗಳಿಗೊಮ್ಮೆ ಸಗಣಿ ಗೊಬ್ಬರ ನೀಡುತ್ತಾ ಆರೈಕೆ ಮಾಡಿಕೊಂಡು ಬರುತ್ತಿದ್ದೇವೆ. ಕಟ್ಟಡದ ಎತ್ತರವನ್ನು ಮತ್ತಷ್ಟು ಹೆಚ್ಚಿಸಲು ಸಾಧ್ಯವಾಗದಿರುವುದರಿಂದ ಈ ಗಿಡವನ್ನು ಇನ್ನಷ್ಟು ಎತ್ತರಕ್ಕೆ ಬೆಳೆಸುವುದು ತುಸು ಕಷ್ಟ’ ಎಂದು ಇಲ್ಲಿನ ಉದ್ಯಾನದ ನಿರ್ವಹಣೆಯ ಹೊಣೆ ಹೊತ್ತ ಈರಣ್ಣ ಹಾಗೂ ಸುರೇಂದ್ರ ಶೇಲಾರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.