ಕಲೆಯನ್ನೇ ತಮ್ಮ ಅಭಿವ್ಯಕ್ತಿ ಮಾಧ್ಯಮವಾಗಿಸಿಕೊಂಡು ತಮ್ಮ ಭಾವಗಳನ್ನು ಅನಾವರಣಗೊಳಿಸುವ ಕಲ್ಪನಾ ಜೀವಿಗಳ ಆಲೋಚನೆಯೇ ವಿಭಿನ್ನ. ಇನ್ನು ವಿದೇಶಿ ಕಲಾವಿದರ ಕಲೆಗಳಿಗೂ, ಅಪ್ಪಟ ದೇಸಿ ಸಂಸ್ಕೃತಿಯನ್ನು ಬಿಂಬಿಸುವ ಭಾರತೀಯರ ಚಿತ್ರಗಳಿಗೂ ಅಗಾಧ ವ್ಯತ್ಯಾಸಗಳಿವೆ. ಇವೆರಡೂ ಒಂದೆಡೆ ಸೇರಿದರೆ ಕಲಾ ರಸಿಕರಿಗೆ ಹಬ್ಬವೇ ಸರಿ.

ಕನ್ನಿಂಗ್ಹ್ಯಾಂ ರಸ್ತೆಯ ಅಬ್ಸಟ್ಯೆಾಕ್ಟ್ ಆರ್ಟ್ ಗ್ಯಾಲರಿಯಲ್ಲಿ, ತುಮಕೂರು ಮೂಲದ ಕಲಾವಿದೆ ರೇಣುಕಾ ಕೆಸರಮಡು ಆಯೋಜಿಸಿರುವ ಚಿತ್ರಕಲಾ ಪ್ರದರ್ಶನ ದೇಸಿ, ವಿದೇಶಿ ಕಲಾವಿದರ ಕಲಾಕೃತಿಗಳ ಸಂಗಮ. ಅವರ ಕುಂಚದಲ್ಲಿ ಅರಳಿದ ಚಿತ್ರಗಳು ಇಲ್ಲಿ ರಾರಾಜಿಸುತ್ತಿವೆ.

ರೇಣುಕಾ ಅವರು ರಚಿಸಿರುವ, ವಿವಾಹಿತೆಯೊಬ್ಬಳು ನೆರೆ ಮನೆಯಾಕೆಯೊಂದಿಗೆ ಚರ್ಚಿಸುತ್ತಿರುವ ಚಿತ್ರ ಗಮನ ಸೆಳೆಯುತ್ತಿದೆ. ಅಮೆರಿಕದ ಕಲಾವಿದೆ ಪಾಟ್ರಿಸಿಯಾ ಗುಡ್ರಿಚ್ ಅವರ ಚಿತ್ರಗಳಲ್ಲಿ ವರ್ಣ ವೈಭವ ಕಾಣಬಹುದು. ರೊಮೇನಿಯದ ಮಾರಿಯಾ ಬಾಲಿಯಾ, ಕಾರ್ಮೆನ್ ಪೋನಾರು, ಕ್ರಿಸ್ಟಿನಾ ಸಿಯೋಬಾನು ಅವರ ಕಲಾಕೃತಿಗಳು ಮನಸೆಳೆಯುತ್ತಿವೆ. ಉಳಿದಂತೆ ಇಸ್ರೇಲ್ನ ಪಿರ್ಜೋ ಹೈನೋ ಅವರ ಕಸೂತಿಯನ್ನೇ ಹೋಲುವ ಚಿತ್ರಗಳು ತುಸು ಭಿನ್ನವಾಗಿವೆ.

ಪ್ರದರ್ಶನ ಶುಕ್ರವಾರ ಕೊನೆಗೊಳ್ಳಲಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.