ಉಡುಪಿ: ಗೋ ಮಾಂಸ ಸೇವನೆಯ ಪರ ವಾಗಿರುವ ಸಾಹಿತಿ ಗಿರೀಶ್ ಕಾರ್ನಾಡ್ ಅವರ ‘ನಾಗಮಂಡಲ’ ನಾಟಕ ಪ್ರದರ್ಶ ನಕ್ಕೆ ಅವಕಾಶ ನೀಡದ ಮಣಿಪಾಲದ ನರಸಿಂಹ ದೇವಸ್ಥಾನದ ಆಡಳಿತ ಮಂಡ ಳಿಯ ಕ್ರಮ ಸ್ವಾಗತಾರ್ಹ ಎಂದು ವಿಶ್ವ ಹಿಂದೂ ಪರಿಷತ್‌ನ ಅಧ್ಯಕ್ಷ ಬಿ. ಸುಪ್ರಸಾದ ಶೆಟ್ಟಿ ಹೇಳಿದ್ದಾರೆ.

ಧರ್ಮ ವಿರೋಧಿ ಕೆಲಸ ಮಾಡುವ ಬುದ್ಧಿಜೀವಿಗಳಿಗೆ ದೇವಸ್ಥಾನದ ಆಡಳಿತ ಮಂಡಳಿ ಸೂಕ್ತ ಉತ್ತರ ನೀಡುವ ಮೂಲಕ ಇತರ ಧಾರ್ಮಿಕ ಕೇಂದ್ರಗಳಿಗೆ ಪ್ರೇರಣೆಯಾಗಿದೆ. ಮುಗ್ಧ ಕಲಾವಿದರನ್ನು ಬಳಸಿಕೊಂಡು ಹಿಂದೂ ವಿರೋಧಿ ಕೆಲಸ ಮಾಡುತ್ತಿರುವ ಬುದ್ಧಿಜೀವಿಗಳು ಅದ ರಿಂದ ಅಪಾರ ಹಣ ಗಳಿಸಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಕಲೆಯ ಬಗ್ಗೆ ನೈಜ ಕಾಳಜಿ ಇರುವ ಕಲಾವಿದರು ಬಡ ತನದ ಬೇಗೆಯಲ್ಲಿ ಜೀವನ ನಡೆಸುತ್ತಿರು ವುದು ಬೇಸರದ ಸಂಗತಿ. ಕಲಾವಿದರು ಜಾಗೃತರಾಗಿ ಇಂತಹ ಬುದ್ಧಿಜೀವಿಗಳನ್ನು ವಿರೋಧಿಸಬೇಕು ಎಂದು ಸಲಹೆ ನೀಡಿದ್ದಾರೆ. ಗೋ ಮಾಂಸ ಭಕ್ಷಣೆ ಬೆಂಬಲಿಸಿರುವ ಗಿರೀಶ್ ಕಾರ್ನಾಡ್ ಅವರ ಯಾವುದೇ ನಾಟಕ ಪ್ರದರ್ಶನಕ್ಕೆ ಉಡುಪಿ ಜಿಲ್ಲೆಯ ಹಿಂದೂಗಳು ಅವ ಕಾಶ ನೀಡಬಾರದು ಎಂದು ಅವರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

ದಿಟ್ಟ ಕ್ರಮ: ಹಿಂದೂ ವಿರೋಧಿ ಗಿರೀಶ್ ಕಾರ್ನಾಡ್ ಅವರ ನಾಗಮಂಡಲ ನಾಟಕ ಪ್ರದರ್ಶನವನ್ನು ರದ್ದು ಮಾಡುವ ಮೂಲಕ ಮಣಿಪಾಲದ ನರಸಿಂಹ ದೇವ ಸ್ಥಾನದ ಆಡಳಿತ ಮಂಡಳಿ ದಿಟ್ಟ ಕ್ರಮ ಕೈಗೊಂಡಿದೆ ಎಂದು ಸಂಸ್ಕಾರ ಭಾರತಿ ಭಾರತಿ ಸಂಘಟನೆಯ ಸಂಚಾಲಕ ವಾಸು ದೇವ ಭಟ್ ತಿಳಿಸಿದ್ದಾರೆ.

ಗಿರೀಶ್ ಕಾರ್ನಾಡ್ ಮಾತ್ರವಲ್ಲ, ಹಿಂದೂಗಳ ಭಾವನೆಗಳನ್ನು ಗೌರವಿಸದ ಯಾವುದೇ ಸಾಹಿತಿ, ನಾಟಕಕಾರ, ಕಲಾ ವಿದ ಎಲ್ಲರಿಗೂ ಉಡುಪಿ ಜಿಲ್ಲೆಯ ಯಾವುದೇ ದೇವಸ್ಥಾನದ ಚಾವಡಿ ಗಳಲ್ಲಿ, ಧಾರ್ಮಿಕ ವೇದಿಕೆಗಳಲ್ಲಿ ಗೌರವ, ಮಾನ್ಯತೆ ನೀಡದೆ ಧಾರ್ಮಿಕ ಸಾಂಸ್ಕೃತಿಕ ಬಹಿಷ್ಕಾರ ಹಾಕಲಾಗುವುದು ಎಂದು ಪ್ರಕಟಣೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.

ಆಸ್ತಿಕರ ಧರ್ಮ ಶ್ರದ್ಧೆ ಭಾವನೆಗಳಿಗೆ ಧಕ್ಕೆ ಉಂಟು ಮಾಡುತ್ತಿರುವ ಗಿರೀಶ್ ಕಾರ್ನಾಡ್ ಸಾಹಿತಿ ಮತ್ತು ಕಲಾವಿದರಿಗೆ ದೇವಸ್ಥಾನದ ಧರ್ಮ ಚಾವಡಿಗಳಲ್ಲಿ ಮಾನ್ಯತೆ ನೀಡಬಾರದು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಬಾ ರದು ಎಂಬ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ರುವ ಇವರು ಮಹಾನ್ ನಾಯಕರು ಹೇಗಾದರು ಎಂದು ಪ್ರಶ್ನಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.