೨೦೦೩ರಲ್ಲಿ ಕುವೆಂಪು ವಿರಚಿತ ‘ಜೈ ಭಾರತ ಜನನಿಯ ತನುಜಾತೆ’ ಕವನವನ್ನು ನಾಡಗೀತೆಯಾಗಿ ಘೋಷಿಸಿ ಸರ್ಕಾರ ಆದೇಶ ಹೊರಡಿಸಿತು. ನಂತರ ನಾಡಗೀತೆಯ ಧಾಟಿಗೆ ಸಂಬಂಧಿಸಿದಂತೆ, ಸಾಹಿತಿಗಳು ಹಾಗೂ ಸುಗಮ ಸಂಗೀತ ಕಲಾವಿದರ ಮನವಿ ಮೇರೆಗೆ ಡಾ.ಜಿ.ಎಸ್.ಶಿವರುದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ಸಂಗೀತ ನಿರ್ದೇಶಕರಾದ ಎಚ್.ಕೆ. ನಾರಾಯಣ, ವಸಂತ ಕನಕಾಪುರ, ಕವಿ ಸಿದ್ಧಲಿಂಗಯ್ಯ ಮುಂತಾದವರನ್ನು ಒಳಗೊಂಡ ಸಮಿತಿ ರಚಿಸಿತು.

ಈ ಸಮಿತಿ ಈ ಬಗ್ಗೆ ಕೆಲವು ಶಿಫಾರಸು ಮಾಡಿದೆ. ಆದರೆ ಸರ್ಕಾರವು ಈ ಶಿಫಾರಸು ಅಂಗೀಕರಿಸದೆ ಹಿರಿಯ ಸಂಗೀತ ವಿದ್ವಾಂಸ ವಸಂತ ಕನಕಾಪುರ ಅವರ ಅಧ್ಯಕ್ಷತೆಯಲ್ಲಿ ಮತ್ತೊಂದು ಸಮಿತಿಯನ್ನು ೨೦೧೩ರಲ್ಲಿ ರಚಿಸಿತ್ತು. ಈ ಸಮಿತಿ ಅಂತಿಮ ವರದಿ ಕೊಡುವ ಮುನ್ನವೇ ಕನಕಾಪುರ ಅವರು ತೀರಿಕೊಂಡರು.

ನಂತರ ಚೆನ್ನವೀರ ಕಣವಿಯವರ ಅಧ್ಯಕ್ಷತೆಯಲ್ಲಿ ಸಮಿತಿ ಮುಂದುವರಿಸಿ ಆದೇಶ ಹೊರಡಿಸಿತ್ತು. ಈ ಸಮಿತಿ ನಾಡಗೀತೆಯನ್ನು ಹಾಡುವ ಧಾಟಿ ಬಗ್ಗೆ ೨೦೧೪ರ ಮೇ ತಿಂಗಳಿನಲ್ಲಿಯೇ ಸರ್ಕಾರಕ್ಕೆ ಅಂತಿಮ ವರದಿ ಸಲ್ಲಿಸಿದೆ. ಆದರೆ ಸರ್ಕಾರದಿಂದ ಈ ಬಗ್ಗೆ ಇದುವರೆಗೂ ಯಾವುದೇ ನಿರ್ಧಾರ ಹೊರಬಂದಿಲ್ಲ.
–ವೈ.ಕೆ.ಮುದ್ದುಕೃಷ್ಣ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.