ನವದೆಹಲಿ (ಐಎಎನ್ಎಸ್): ‘ಚಿಕ್ಕಂದಿನಲ್ಲಿ ನಾನೂ ತುಂಟನಾಗಿದ್ದೆ. ಮದುವೆ ಮನೆಗಳಲ್ಲಿ ಇಬ್ಬರ ದುಪಟ್ಟ ಸೇರಿಸಿ ಪಿನ್ ಮಾಡುತ್ತಿದ್ದೆ’

ಹೀಗೆ ಹೇಳಿದ್ದು ಪ್ರಧಾನಮಂತ್ರಿ ನರೇಂದ್ರ ಮೋದಿ. ಶಿಕ್ಷಕರ ದಿನಾಚರಣೆ ಅಂಗವಾಗಿ ನವದೆಹಲಿಯ ವಿಜ್ಞಾನ ಭವನದಲ್ಲಿ ನಡೆಯುತ್ತಿರುವ ವಿದ್ಯಾರ್ಥಿ ಸಂವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿನಿಯೊಬ್ಬಳ ಪ್ರಶ್ನೆಗೆ ಮೋದಿ ಉತ್ತರಿಸಿದ ಪರಿಯಿದು.

‘ಚಿಕ್ಕಂದಿನಲ್ಲಿ ನೀವು ತುಂಟಾಟ ಮಾಡುತ್ತಿದ್ದಿರಾ?’ ಎಂದು ಲೇಹ್ನಿಂದ ವಿಡಿಯೊ ಕಾನ್ಫರೆನ್ಸ್ ಮೂಲಕ ವಿದ್ಯಾರ್ಥಿನಿ ಕೇಳಿದ ಪ್ರಶ್ನೆಗೆ ಮೋದಿ, ತಮಾಷೆಯ ದಾಟಿಯಲ್ಲಿ ಈ ಉತ್ತರ ನೀಡಿದರು. ‘ನೀವು ಹೀಗೆ ಮಾಡುವುದಿಲ್ಲ ಎಂದು ಮೊದಲು ಪ್ರಮಾಣ ಮಾಡಿ’ ಎಂದ ಅವರು ಬಳಿಕ ತಮ್ಮ ತುಂಟತನದ ಬಗ್ಗೆ ಹೇಳಿದರು.

‘ರಾಜಕೀಯವನ್ನು ಸೇವೆಯಾಗಿ ಸ್ವೀಕರಿಸಬೇಕು. ಸೇವಾ ಮನೋಭಾವ ಇಲ್ಲವಾದರೆ ರಾಜಕೀಯ ಮೌಲ್ಯ ಕಳೆದುಕೊಳ್ಳುತ್ತದೆ’ ಎಂದು ವಿದ್ಯಾರ್ಥಿಯೊಬ್ಬರ ಪ್ರಶ್ನೆಗೆ ಅವರು ಉತ್ತರಿಸಿದರು.

ಇದಕ್ಕೂ ಮುನ್ನ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಅವರು, ‘ದೇಶದಲ್ಲಿ ಮೌಲಿಕ ಶಿಕ್ಷಕರ ಕೊರತೆ ಉಂಟಾಗಿದೆ. ದೊಡ್ಡವರಾದ ಮೇಲೆ ವಿದ್ಯಾರ್ಥಿಗಳು ಶಿಕ್ಷಕ ವೃತ್ತಿ ಆರಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ’ ಎಂದರು.

‘ಶಾಲೆಯಲ್ಲಿ ಕಲಿಯುವ ಶಿಕ್ಷಣಕ್ಕಿಂತ ಅನುಭವದ ಮೂಲಕ ದೊರೆಯುವ ಅರಿವು ದೊಡ್ಡದು’ ಎಂದು ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.