ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯದಲ್ಲಿ ಜೂನ್ 12ರಂದು ಪದವಿ ತರಗತಿಗಳ ಫಲಿತಾಂಶವನ್ನು ಇಂಟ್ರಾನೆಟ್‌ನಲ್ಲಿ ಪ್ರಕಟಿಸಲಾಗುವುದು. ಅಂದು ಕಾಲೇಜಿನಲ್ಲಿ ವೈಫೈ ವ್ಯವಸ್ಥೆ ಎಲ್ಲರಿಗೂ ಲಭ್ಯವಾಗಲಿರುವುದರಿಂದ ಕ್ಯಾಂಪಸ್ನಲ್ಲಿಯೇ ವಿದ್ಯಾರ್ಥಿಗಳು ಫಲಿತಾಂಶವನ್ನು ನೋಡಬಹುದು. ಅಲ್ಲದೆ ‘ಮಂಗಳೂರು ವಿವಿ ಕ್ಯಾಂಪಸ್ ನೋಡಬನ್ನಿ’ (‘ಓಪನ್ ಹೌಸ್’) ಕಾರ್ಯಕ್ರಮದಲ್ಲಿ ಭಾಗವಹಿಸಿ, ವಿದ್ಯಾರ್ಥಿಗಳು ತಾವು ಬಯಸಿದ ಕೋರ್ಸ್‌ಗಳ ವಿವರವನ್ನೂ ಪಡೆಯಬಹುದು.

ಮಂಗಳೂರು ವಿಶ್ವವಿದ್ಯಾಲಯ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕುಲಪತಿ ಪ್ರೊ. ಭೈರಪ್ಪ ಅವರು ಈ ವಿಷಯ ತಿಳಿಸಿದರು. ಸ್ನಾತಕೋತ್ತರ ತರಗತಿಗಳಿಗೆ ಪ್ರವೇಶ ಪಡೆಯುವ ಮುನ್ನ ವಿಶ್ವವಿದ್ಯಾಲಯದಲ್ಲಿ ಲಭ್ಯವಿರುವ ಅವಕಾಶಗಳ ಕುರಿತು ವಿದ್ಯಾರ್ಥಿಗಳಿಗೆ ತಿಳಿಹೇಳುವ ‘ಮಂಗಳೂರು ವಿವಿ ಕ್ಯಾಂಪಸ್ ನೋಡಬನ್ನಿ’ ಕಾರ್ಯಕ್ರಮ ಜೂನ್ 12ರಿಂದ ಎರಡು ದಿನ ಕೊಣಾಜೆಯಲ್ಲಿರುವ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯಲಿದೆ. 12ರಂದೇ ಫಲಿತಾಂಶವನ್ನು ಪ್ರಕಟಿಸುವುದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು. ಎರಡು ದಿನಗಳ ಈ ಕಾರ್ಯಕ್ರಮವನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ಉದ್ಘಾಟಿಸುವರು.

ಮಂಗಳ ಗಂಗೋತ್ರಿ, ಮಂಗಳೂರು ಮತ್ತು ಮಡಿಕೇರಿ ವಿಶ್ವವಿದ್ಯಾನಿಲಯ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರವಾದ ಚಿಕ್ಕಅಳುವಾರು ಸಂಸ್ಥೆಯ ಶೈಕ್ಷಣಿಕ ವರ್ಷದ ಆರಂಭದಲ್ಲಿ ವಿಭಿನ್ನ ಕೋರ್ಸ್‌ಗಳ ಸಮಗ್ರ ಮಾಹಿತಿಯನ್ನು ಈ ಸಂದರ್ಭದಲ್ಲಿ ಪಡೆಯಬಹುದು. ಪ್ರಾಧ್ಯಾಪಕರು ಇದಕ್ಕಾಗಿ ಸಿದ್ಧರಿರುತ್ತಾರೆ. ಮಂಗಳ ಗಂಗೋತ್ರಿ ಕ್ಯಾಂಪಸ್ಸಿನಲ್ಲಿ 24 ವಿಭಾಗಗಳು ನಡೆಸುವ 37 ಕಲಾ, ವಿಜ್ಞಾನ, ವಾಣಿಜ್ಯ ಮುಂತಾದ ಕೋರ್ಸ್‌ಗಳ ಬಗ್ಗೆ ಪರಿಚಯ ಮಾಡಿಕೊಡಲಾಗುವುದು.

ಎಲ್ಲ ಪ್ರಾಧ್ಯಾಪಕರ ಜೊತೆಗೆ ಆಯಾ ಕೋರ್ಸುಗಳ ಆಯ್ಕೆ, ಉದ್ಯೋಗಾವಕಾಶ, ಪ್ರಯೋಗಾಲಯ, ಸಂಶೋಧನಾ ಅವಕಾಶಗಳ ಬಗ್ಗೆ ವಿದ್ಯಾರ್ಥಿಗಳು ಚರ್ಚಿಸಬಹುದು. ಮಂಗಳೂರು ವಿವಿಗೆ ರಾಷ್ಟ್ರಮಟ್ಟದಲ್ಲಿ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ದೊರೆತ ಮನ್ನಣೆಯ ಬಗ್ಗೆಯೂ ವಿವರಿಸಲಾಗುವುದು ಎಂದರು.

ಆಯಾ ವಿಭಾಗಗಳಿಂದಲೇ ಅರ್ಜಿಗಳನ್ನು ಪಡೆಯಬಹುದು. ಬ್ಯಾಂಕ್ ಸಾಲಗಳ ಬಗ್ಗೆ ಮಾಹಿತಿಯನ್ನೂ ನೀಡಲಾಗುವುದು. ಜಿಲ್ಲೆಯ ವಿವಿಧೆಡೆಗಳಿಂದ ಬರುವ ವಿದ್ಯಾರ್ಥಿಗಳು ಮತ್ತು ಹೆತ್ತವರಿಗೆ ಮಂಗಳೂರು, ಪಂಪ್‌ವೆಲ್, ತೊಕ್ಕೊಟ್ಟು ಪ್ರದೇಶಗಳಿಂದ ಮಂಗಳ ಗಂಗೋತ್ರಿಗೆ ಪ್ರತಿ ಗಂಟೆಗೊಮ್ಮೆ ಕೆಎಸ್‌ಆರ್‌ಟಿಸಿ ಬಸ್ ವ್ಯವಸ್ಥೆಯನ್ನು ವಿವಿ ವತಿಯಿಂದ ಏರ್ಪಡಿಸಲಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.