ರಾಜ್ಯ ಸರ್ಕಾರ ಕೊಡಮಾಡಿದ ಬಸವ ಪುರಸ್ಕಾರ ರಾಷ್ಟ್ರೀಯ ಪ್ರಶಸ್ತಿಗೆ (೨೦೧೨) ಸಂಬಂಧಪಟ್ಟಂತೆ (ವಾ.ವಾ, ಮೇ 27) ಪ್ರಕಟವಾದ ಪ್ರೊ. ಎಂ.ಎಂ. ಕಲಬುರ್ಗಿಯವರ ಮಾತುಗಳು ದಿಕ್ಕುತಪ್ಪಿಸುವಂಥವು. ಬರೆಯುವ ಮುನ್ನ ಬಸವ ಪುರಸ್ಕಾರದ ನೀತಿ, ನಿಯಮಗಳನ್ನು ಕಲಬುರ್ಗಿಯವರು ಒಂದು ಬಾರಿ ಗಮನಿಸುವ ಜವಾಬ್ದಾರಿ ತೋರಬೇಕಾಗಿತ್ತು.

ಬಸವ ಪುರಸ್ಕಾರಕ್ಕೆ ಸಂಬಂಧಿಸಿದ ನಿಯಮಗಳು ಹೀಗಿವೆ: ಈ ಪ್ರಶಸ್ತಿ ರಾಷ್ಟ್ರಮಟ್ಟದ್ದಾಗಿದ್ದು ಸರ್ವಧರ್ಮ ಸಮಾನತೆಗಾಗಿ ತನು ಮನಗಳನ್ನು ಅರ್ಪಿಸಿಕೊಂಡ ವಿಶಿಷ್ಟ ವ್ಯಕ್ತಿಗಳಿಗೆ, ಅವರ ಕೊಡುಗೆಯನ್ನು ಪರಿಗಣಿಸಿ ಪ್ರತಿವರ್ಷ ನೀಡಲಾಗುತ್ತದೆ. ಈ ಪ್ರಶಸ್ತಿಗೆ ಯಾವುದೇ ರಾಜ್ಯದ ಸರ್ವಧರ್ಮ ಸಮಾನತೆಗಾಗಿ ಸೇವೆ ಸಲ್ಲಿಸಿದ ವಿಶಿಷ್ಟ ವ್ಯಕ್ತಿಗಳು ಅರ್ಹರಾಗಿರುತ್ತಾರೆ. ಸಲಹಾ ಸಮಿತಿ ತನ್ನ ಶಿಫಾರಸನ್ನು ಸರ್ಕಾರಕ್ಕೆ ಸಲ್ಲಿಸುತ್ತದೆ. ಈ ಶಿಫಾರಸುಗಳು ಸರ್ಕಾರದ ಪರಿಶೀಲನೆ, ಮಾರ್ಪಾಡು, ಅಂತಿಮ ನಿರ್ಣಯಕ್ಕೆಒಳಪಟ್ಟಿರುತ್ತವೆ.

ಯು.ಆರ್. ಅನಂತಮೂರ್ತಿಯವರು ಜಾತಿವಾದ, ಕೋಮುವಾದ ಹಾಗೂ ಪುರೋಹಿತಶಾಹಿ ವಿರುದ್ಧ ನಿರಂತರ ಹೋರಾಟ ಮಾಡುತ್ತ ಬಂದಿರುವವರು. ಶೋಷಿತ, ಅಸ್ಪೃಶ್ಯ ಹಾಗೂ ತಳಸಮುದಾಯಗಳ ಪರ ಹೋರಾಟಗಳಲ್ಲಿ ಎಂದಿಗೂ ಮುಂಚೂಣಿಯಲ್ಲಿ ಇರುವ ಇವರು ಬಸವಣ್ಣನವರು ಎತ್ತಿಹಿಡಿದ ಸಮಸಮಾಜದ ತತ್ತ್ವವನ್ನು ನಮ್ಮ ಕಾಲದಲ್ಲಿ ಕ್ರಿಯಾತ್ಮಕವಾಗಿ ಪ್ರತಿಪಾದಿಸುತ್ತಿರುವವರು. ಸಮಾಜವಾದಿ ಧೋರಣೆಗಳನ್ನು ಕನ್ನಡ ಸಮುದಾಯದಲ್ಲಿ ಬೆಳೆಸುತ್ತಿರುವ ಕನ್ನಡದ ಹಿರಿಯರಲ್ಲಿ ಇವರು ಪ್ರಮುಖರು. ತಮ್ಮ ಚಿಂತನೆ ಮತ್ತು ಸೃಜನಶೀಲ ಕೃತಿಗಳಲ್ಲಿ ಇಂಥ ತಾತ್ತ್ವಿಕ ಆಯಾಮಗಳನ್ನು ಪ್ರಖರವಾಗಿ ಮೂಡಿಸಿದವರು. ಅವರ ‘ಸಂಸ್ಕಾರ’, ‘ಭಾರತೀಪುರ’ ಕೃತಿಗಳನ್ನು ಓದಿದವರಿಗೆ ಹೆಚ್ಚು ವಿವರಿಸಬೇಕಾದ ಅಗತ್ಯವಿಲ್ಲ.

ವಚನ ಚಳವಳಿಯು ಎತ್ತಿಹಿಡಿದ ಕನ್ನಡ ಭಾಷೆಯ ಬಳಕೆಯ ಪ್ರಾಮುಖ್ಯವನ್ನು ನಮ್ಮ ಕಾಲದಲ್ಲಿ ಮೊದಲಿನಿಂದಲೂ ಅನಂತಮೂರ್ತಿ ಒತ್ತಿ ಹೇಳಿದವರು. ಶಿಕ್ಷಣದಲ್ಲಿ ಸಮಾನತೆ, ಕನ್ನಡ ಪರವಾದ ಧ್ವನಿ, ತಾತ್ವಿಕ ಚಿಂತನೆಯನ್ನೂ ಎತ್ತುತ್ತಿರುವ ಅನಂತಮೂರ್ತಿ, ಪ್ರಜಾಸತ್ತಾತ್ಮಕ ಆಯಾಮಗಳನ್ನು ದೃಢಗೊಳಿಸಲು ಕ್ರಿಯಾಶೀಲವಾಗಿರುವವರಲ್ಲಿ ಪ್ರಮುಖರು.

ಬಸವ ಪುರಸ್ಕಾರವನ್ನು ಪಡೆದವರ ಸಾಲಿನಲ್ಲಿ ಪ್ರಮುಖರಾದ ಎ.ಪಿ.ಜೆ. ಅಬ್ದುಲ್ ಕಲಾಂ, ಸರಸ್ವತಿ ಗೋರಾ, ಡಾ. ಎಚ್. ನರಸಿಂಹಯ್ಯ ಮುಂತಾದವರು ವಚನಗಳ ಬಗ್ಗೆ ಸಂಶೋಧನೆ, ಸಂಪಾದನೆ ಮಾಡಿದವರೇನಲ್ಲ. ವಚನ ಚಳವಳಿಯ ಕೆಲವು ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಹೊಂದಿದವರಾಗಿದ್ದರು ಎನ್ನುವ ಕಾರಣಕ್ಕಾಗಿಯೇ ಇವರಿಗೆ ಪ್ರಶಸ್ತಿ ಬಂದಿದೆ ಎಂದು ನಾವು ನಂಬಿದ್ದೇವೆ. ಬೂಕರ್ ಪ್ರಶಸ್ತಿಗೆ ನಾಮಾಂಕಿತರಾಗಿದ್ದ ಅನಂತಮೂರ್ತಿಯವರು ತಮ್ಮ ಮೇಲೆ ಪ್ರಭಾವ ಬೀರಿದ್ದ ವ್ಯಕ್ತಿತ್ವಗಳಲ್ಲಿ ಬಸವಣ್ಣನವರ ಹೆಸರನ್ನು ಒಂದು ಸಂದರ್ಶನದಲ್ಲಿ ಪ್ರಧಾನವಾಗಿ ಹೆಸರಿಸಿದ್ದುದನ್ನೂ ಗಮನಿಸಬೇಕು.

೨೦೦೩ರಲ್ಲಿ ಪ್ರಕಟವಾದ ಜಗದ್ಗುರು ಶಿವರಾತ್ರೀಶ್ವರ ಗ್ರಂಥಮಾಲೆಯ ವೀರಶೈವಧರ್ಮದರ್ಶನದ ಸಂಪುಟಗಳಿಗೆ ಅನಂತಮೂರ್ತಿಪ್ರಧಾನ ಸಂಪಾದಕರಾಗಿದ್ದರು. ಈಗಲೂ ಪ್ರಮುಖ ಪರಾಮರ್ಶನ ಗ್ರಂಥಗಳಾಗಿರುವ ಇವುಗಳ ಮೌಲ್ಯವನ್ನು ಓದುಗರು ಗಮನಿಸಬೇಕು. ಬಸವ ಪುರಸ್ಕಾರ ನೀಡಿರುವ ಆಯ್ಕೆ ಸಮಿತಿಯ ತೀರ್ಮಾನವು ನಿಯಮಕ್ಕೆ ಎಂದೂ ವಿರೋಧವಾಗಿಲ್ಲ ಮತ್ತು ಪಕ್ಷಪಾತದಿಂದ ನಡೆದುಕೊಂಡಿಲ್ಲ ಎನ್ನುವುದನ್ನು ಸ್ಪಷ್ಟಪಡಿಸುತ್ತೇವೆ.

ಡಾ. ಕಲಬುರ್ಗಿ ತಮ್ಮ ಪತ್ರದಲ್ಲಿ ಸಮಿತಿ ಸದಸ್ಯರು, ಅಧಿಕಾರಿಗಳು, ಸಚಿವರು ಹಾಗೂ ಸಭಿಕರನ್ನು ದೂಷಿಸಿದ್ದಾರೆ. ಅವರ ದೃಷ್ಟಿಯಲ್ಲಿ ಇವರೆಲ್ಲರೂ ಬೇಜವಾಬ್ದಾರಿ ಮತ್ತು ಹಗರಣ ಮಾಡುವ ಜನರೆ?
–ರಂಜಾನ್ ದರ್ಗಾ, ಬಸವರಾಜ ಕಲ್ಗುಡಿ, ಮಲ್ಲೇಪುರಂ ವೆಂಕಟೇಶ್, ಗುರುಲಿಂಗ ಕಾಪಸೆ
(ಬಸವ ಪುರಸ್ಕಾರ ಆಯ್ಕೆ ಸಮಿತಿ ಸದಸ್ಯರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.