ನವದೆಹಲಿ (ಪಿಟಿಐ): ಇಲ್ಲಿನ ಜವಾಹರ ಲಾಲ್ ನೆಹರೂ ವಿಶ್ವವಿದ್ಯಾಲಯದ ಕುಲಪತಿ ಸ್ಥಾನಕ್ಕೆ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರನ್ನು ನೇಮಿಸಲಾಗುವುದು ಎಂಬ ವದಂತಿಗೆ ವಿ.ವಿ. ವಿದ್ಯಾರ್ಥಿಗಳ ಸಂಘಟನೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

‘ವಿಶ್ವವಿದ್ಯಾಲಯದ ಆವರಣವನ್ನು ಕೇಸರಿಮಯಗೊಳಿಸುವ ಪ್ರಯತ್ನಗಳನ್ನು ನಾವು ಎಲ್ಲಾ ರೀತಿಯಿಂದಲೂ ವಿರೋಧಿಸುತ್ತೇವೆ. ಸುಬ್ರಮಣಿಯನ್ ಸ್ವಾಮಿ ಅಥವಾ ಅವರಂತಹ ಯಾವುದೇ ‘ಪ್ರತಿಗಾಮಿ’ ನಾಯಕನನ್ನು ಕುಲಪತಿ ಸ್ಥಾನಕ್ಕೆ ನೇಮಿಸುವುದನ್ನು ಯಾವುದೇ ಹಂತದವರೆಗೂ ನಾವು ಪ್ರತಿಭಟಿಸುತ್ತೇವೆ’ ಎಂದು ಜವಾಹರಲಾಲ್ ನೆಹರೂ ವಿಶ್ವ ವಿದ್ಯಾಲಯ ವಿದ್ಯಾರ್ಥಿಗಳ ಸಂಘಟನೆ (ಜೆಎನ್‌ಯುಎಸ್‌ಯು) ಹೇಳಿಕೆಯಲ್ಲಿ ಎಚ್ಚರಿಸಿದೆ. ಕುಲಪತಿ ಸ್ಥಾನಕ್ಕೆ ವಯೋಮಿತಿ 65 ವರ್ಷ. ಆದರೆ ಸ್ವಾಮಿ ನೇಮಕ ಈ ನಿಯಮದ ಉಲ್ಲಂಘನೆಯಾಗುತ್ತದೆ ಎಂದೂ ಸಂಘಟನೆ ಹೇಳಿದೆ.

ಸ್ವಾಮಿ ಟ್ವೀಟ್: ಇದೇ ವೇಳೆ ಟ್ವೀಟ್ ಮಾಡಿರುವ ಸುಬ್ರಮಣಿಯನ್ ಸ್ವಾಮಿ, ‘ಜೆಎನ್‌ಯು ಆವರಣದಲ್ಲಿ ನಕ್ಸಲ್, ಜಿಹಾದಿ ಮತ್ತಿತರ ಚಟುವಟಿಕೆಗಳನ್ನು ನಡೆಸುವವರನ್ನು ಬಂಧಿಸುವ ನಿಟ್ಟಿನಲ್ಲಿ ಮಾದಕವಸ್ತು ನಿಗ್ರಹ ಘಟಕ ಸ್ಥಾಪಿಸುವುದು ಅವಶ್ಯ ಎಂದು ನಾನು ಭಾವಿಸುತ್ತೇನೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.