ವಾಷಿಂಗ್ಟನ್(ಪಿಟಿಐ): ಪ್ಲೂಟೊ ಕಕ್ಷೆ ತಲುಪಿರುವ ನಾಸಾ ಗಗನನೌಕೆ ಆ ಗ್ರಹದಲ್ಲಿ 11 ಸಾವಿರ ಅಡಿ ಎತ್ತರದ ಹಿಮ ಪರ್ವತವನ್ನು ಪತ್ತೆ ಹಚ್ಚಿದೆ.

ಈ ಹಿಮ ಪರ್ವತ ಸುಮಾರು ಹತ್ತು ಕೋಟಿ ವರ್ಷಗಳ ಹಿಂದೆಯೇ ಉದ್ಭವಿಸಿರಬಹುದು ಎಂದು ನಾಸಾ ಹೇಳಿದೆ. ನ್ಯೂ ಹೊರೈಜನ್ ಗಗನನೌಕೆ ಅತ್ಯಂತ ಹತ್ತಿರದಿಂದ ಈ ಪರ್ವತದ ಚಿತ್ರಗಳನ್ನು ಸೆರೆ ಹಿಡಿದಿದೆ.

ತನ್ನ ಸುತ್ತಮುತ್ತ ಅತ್ಯಂತ ಕಡಿಮೆ ಗುರುತ್ವಾಕರ್ಷಣೆ ಹೊಂದಿರುವ ಗ್ರಹಗಳನ್ನು ಹೊಂದಿರುವ ಪ್ಲೂಟೊದಲ್ಲಿ ಈ ಪರ್ವತಗಳ ಉಗಮಕ್ಕೆ ಕಾರಣವಾದ ಅಂಶಗಳು ಏನಿರಬಹುದು ಎಂಬ ಪ್ರಶ್ನೆ ವಿಜ್ಞಾನಿಗಳನ್ನು ಕಾಡತೊಡಗಿದೆ.

ಪ್ಲೂಟೊದ ಕೇವಲ ಶೇ 1ರಷ್ಟು ಸ್ಥಳದಲ್ಲಿ ಈ ಹಿಮ ಪರ್ವತ ವ್ಯಾಪಿಸಿದೆ. ಗ್ರಹದ ಬೇರೆ ಎಲ್ಲಿಯೂ ಇದುವರೆಗೂ ಮಂಗಳ ಗ್ರಹದಂತೆ ಗುಳಿಗಳು ಗೋಚರಿಸಿಲ್ಲ. ಪ್ಲೂಟೊ ಮೇಲ್ಮೈ ವಾತಾವರಣದಲ್ಲಿ ಮೀಥೇನ್ ಹಾಗೂ ನೈಟ್ರೋಜನ್ ಹೇರಳವಾಗಿದ್ದು ಇವುಗಳಿಂದ ಗಟ್ಟಿ ಹಿಮ ರಚನೆ ಸಾಧ್ಯವಿಲ್ಲ. ನೀರಿನ ಕಣಗಳಿಂದಾದ ಹಿಮ ಇದಾಗಿರಬಹುದು ಎಂದು ವಿಜ್ಞಾನಿಗಳು ಊಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.