ಪ್ಯಾರಿಸ್ (ಎಎಫ್‌ಪಿ): ಜರ್ಮನಿ ಏರ್‌ಲೈನ್ ಲುಫ್ತಾನ್ಸಾ ಸಂಸ್ಥೆಗೆ ಸೇರಿದ ಜರ್ಮನ್‌ವಿಂಗ್ಸ್‌ನ ಎ320 ವಿಮಾನವು ಆಗ್ನೇಯ ಫ್ರಾನ್ಸ್‌ನಲ್ಲಿ ಮಂಗಳವಾರ ಪತನಗೊಂಡಿದ್ದು, ವಿಮಾನದಲ್ಲಿದ್ದ 148 ಜನರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಮಾನದಲ್ಲಿ 142 ಪ್ರಯಾಣಿಕರು ಹಾಗೂ ಇಬ್ಬರು ಪೈಟಲ್‌ಗಳು ಸೇರಿದಂತೆ ಆರು ಸಿಬ್ಬಂದಿ ಇದ್ದರು.

‘ದುರ್ಘಟನೆಯಲ್ಲಿ ಯಾರೊಬ್ಬರೂ ಬದುಕುಳಿದ ಸಾಧ್ಯತೆಗಳಿಲ್ಲ’ ಎಂದು ಫ್ರಾನ್ಸ್ ಅಧ್ಯಕ್ಷ ಫ್ರಾಂಕೊಯಿಸ್ ಹೊಲ್ಲಾಂಡ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ವಿಮಾನವು ಸ್ಪೇನ್‌ನ ಕರಾವಳಿ ನಗರ ಬಾರ್ಸಿಲೋನಾದಿಂದ ಜರ್ಮನಿಯ ದಸೆಲ್ದೊರ್ಫ್‌ಗೆ ಪ್ರಯಾಣಿಸುತ್ತಿತ್ತು.ಈ ವೇಳೆ ಫ್ರಾನ್ಸ್‌ನ ಅಲ್ಪಸ್ ಘಟ್ಟ ಪ್ರದೇಶದಲ್ಲಿ ದುರಂತಕ್ಕೀಡಾಗಿದೆ. ಘಟನೆ ಕಾರಣ ತಿಳಿದು ಬಂದಿಲ್ಲ.

ಮತ್ತೊಂದೆಡೆ, ವಿಮಾನದ ಅವಶೇಷ ಈಗಾಗಲೇ ಪತ್ತೆಯಾಗಿದೆ ಎಂದು ಫ್ರಾನ್ಸ್‌ನ ಒಳಾಡಳಿತ ಸಚಿವ ಬೆರ್ನಾಡ್ ಕಜೆನ್ಯೂವೆ ಹೇಳಿದ್ದಾರೆ.

ಮೋದಿ ಸಂತಾಪ: ವಿಮಾನ ದುರಂತ ಘಟನೆಯನ್ನು ವಿಷಾದಕರ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.