ನವದೆಹಲಿ (ಪಿಟಿಐ): ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದ ಪರಿಣಾಮ ಆಭರಣ ಚಿನ್ನದ ಬೆಲೆ ಸೋಮವಾರ 10 ಗ್ರಾಂಗಳಿಗೆ ರೂ 410 ಇಳಿಕೆಯಾಗಿದ್ದು ರೂ 26,690ಕ್ಕೆ ತಗ್ಗಿದೆ. ಬೆಳ್ಳಿ ಧಾರಣೆಯೂ ಕೆ.ಜಿಗೆ ರೂ 550 ಕುಸಿದಿದ್ದು ರೂ 38,000ಕ್ಕೆ ಇಳಿದಿದೆ.

ಅಮೆರಿಕದ ಫೆಡರಲ್ ಬ್ಯಾಂಕ್ ಈ ವರ್ಷಾಂತ್ಯಕ್ಕೆ ಬಡ್ಡಿ ದರ ಏರಿಕೆ ಮಾಡುವ ಸೂಚನೆ ನೀಡಿದೆ. ಇದರಿಂದ ಅಂತರರಾಷ್ಟ್ರೀಯ ಹಣಕಾಸು ಮಾರುಕಟ್ಟೆಯಲ್ಲಿ ಅಸ್ಥಿರತೆ ಮೂಡಿದೆ. ಇದರ ಜತೆಗೆ ಚಿನ್ನಾಭರಣ ವರ್ತಕರಿಂದ ಚಿನ್ನದ ಬೇಡಿಕೆ ತಗ್ಗಿದೆ. ಈ ಎಲ್ಲ ಕಾರಣಗಳಿಂದ ಬೆಲೆಯಲ್ಲಿ ದಿಢೀರ್ ಇಳಿಕೆ ಕಂಡುಬಂದಿದೆ ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿಸಿದ್ದಾರೆ.

ಸಿಂಗಪುರ ಮಾರುಕಟ್ಟೆಯಲ್ಲೂ ಚಿನ್ನದ ಬೆಲೆ ಶೇ 0.5ರಷ್ಟು ಇಳಿದಿದ್ದು, ಪ್ರತಿ ಔನ್ಸ್‌ಗೆ 1,192.50 ಡಾಲರ್‌ಗಳಿಗೆ ತಗ್ಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.