ಮುಂಬೈ (ಐಎಎನ್ಎಸ್): ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೋಮವಾರ ಮಧ್ಯಾಹ್ನದ ವಹಿವಾಟಿನಲ್ಲಿ ಭರ್ಜರಿ 457 ಅಂಶಗಳಷ್ಟು ಏರಿಕೆ ಕಂಡಿದ್ದು 27,773 ಅಂಶಗಳನ್ನು ತಲುಪಿದೆ.

ಕಳೆದ 7 ವಹಿವಾಟುಗಳಲ್ಲೂ ಸೂಚ್ಯಂಕ ಸತತ ಏರಿಕೆ ಕಂಡಿದೆ. ದಿನದ ವಹಿವಾಟಿನಲ್ಲಿ ಬ್ಯಾಂಕಿಂಗ್ ವಲಯದ ಷೇರುಗಳು ಗರಿಷ್ಠ ಲಾಭ ಮಾಡಿಕೊಂಡವು. ರಾಷ್ಟ್ರೀಯ ಷೇರು ಸೂಚ್ಯಂಕ ನಿಫ್ಟಿ ಕೂಡ 120 ಅಂಶಗಳಷ್ಟು ಏರಿಕೆ ಕಂಡು 8,350ರ ಗಡಿ ಸಮೀಪದಲ್ಲಿ ವಹಿವಾಟು ನಡೆಸಿತು.

ಜೂನ್ 19ರ ನಂತರ ಮುಂಬೈ ಷೇರುಪೇಟೆಯಲ್ಲಿ ಸತತ ಏರಿಕೆ ದಾಖಲಾಗಿದೆ. ನಿರೀಕ್ಷೆಗಿಂತ ಉತ್ತಮ ಮುಂಗಾರು ಲಭಿಸಿರುವುದು ಮತ್ತು ಭತ್ತದ ಕನಿಷ್ಠ ಬೆಂಬಲ ಬೆಲೆಯನ್ನು ಕ್ವಿಂಟಲ್ಗೆ 50 ಹೆಚ್ಚಿಸಿರುವುದು ಇದರ ಜತೆಗೆ ಭಾರತೀಯ ಸ್ಟೇಟ್ ಬ್ಯಾಂಕ್ ವರ್ಷದಲ್ಲಿ ನಾಲ್ಕನೆಯ ಬಾರಿ ಬಡ್ಡಿ ದರ ಇಳಿಸಿರುವುದು ಪೇಟೆಗೆ ದೊಡ್ಡ ಮಟ್ಟದಲ್ಲಿ ಉತ್ತೇಜನ ನೀಡಿದೆ ಎಂದು ಷೇರು ದಲ್ಲಾಳಿ ಸಂಸ್ಥೆ ಏಂಜೆಲ್ ಬ್ರೊಕಿಂಗ್ಸ್ ವಿಶ್ಲೇಷಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.