ಕೊಪ್ಪಳ: ನಡುಬೀದಿಯಲ್ಲೇ ಪುಸ್ತಕ ವ್ಯಾಪಾರ. ₹5ರಿಂದ ಸಾವಿರಾರು ರೂಪಾಯಿ ಬೆಲೆ ಬಾಳುವ ಪುಸ್ತಕಗಳನ್ನು ಹೊತ್ತು ಮಾರುವ ನಗರದ ಏಕೈಕ ಕಾಯಕ ಜೀವಿ. ಸೂರ್ಯೋದಯದಿಂದ ಅರ್ಧರಾತ್ರಿಯವರೆಗೂ ಕಾಯಕದ ಬದುಕು...

– ಇವರು ಹನುಮಂತಪ್ಪ ರಾಮಪ್ಪ ತುಬಾಕಿ. ನಗರದಲ್ಲಿ ಪುಸ್ತಕ ಓದು, ವ್ಯಾಪಾರವನ್ನೇ ಗೀಳು ಆಗಿಸಿಕೊಂಡು ಬದುಕು ಸಾಗಿಸುವವರು. ಓದುಗರ ಕೊರತೆ, ಅಸಡ್ಡೆಯನ್ನು ಸಹಿಸಿಕೊಂಡು ಕಾಯಕಕ್ಕೆ ಅಂಟಿಕೊಂಡವರು.

ನಗರದ ಸಾಹಿತ್ಯ ಭವನ, ಕೋರ್ಟ್ ಆವರಣ, ಜಿಲ್ಲಾಡಳಿತ ಭವನ, ಗಂಗಾವತಿ ಕೋರ್ಟ್ ಆವರಣದಲ್ಲಿ ಅವರ ಪುಸ್ತಕ ಪ್ರದರ್ಶನ, ಮಾರಾಟ ನಡೆದೇ ಇರುತ್ತದೆ.

ತುಬಾಕಿ ಕುಟುಂಬ ಚಿತ್ರದುರ್ಗ ಮೂಲದವರು. ತಮ್ಮ ಅಜ್ಜನ ಕಾಲದಲ್ಲಿ ಕುಷ್ಟಗಿ ತಾಲ್ಲೂಕಿನ ನೀಲೂಗಲ್ನಲ್ಲಿ ನೆಲೆಯಾದರು. ಆಗ ಊರು ಕಾಯುವ ವಾಲೀಕಾರರ ಕೆಲಸ ಅವರ ಹಿರಿಯರಿಗಿತ್ತು. ಬ್ರಿಟಿಷರ ಕಾಲದಲ್ಲಿ ಬೆನ್ನಿಗೆ ತುಬಾಕಿ (ತುಪಾಕಿ) ಕಟ್ಟಿಕೊಂಡು ಊರು ಕಾವಲಿಗಾಗಿ ಸಂಚರಿಸುತ್ತಿದ್ದರು. ಹಾಗೇ ಆ ಹೆಸರು ಉಳಿಯಿತು ಎಂದರು ಅವರು.

ತುಬಾಕಿ ಅವರು ಓದಿದ್ದು ಬಿಎ, ಬಿ.ಇಡಿ. ಶಿಕ್ಷಕರಾಗಬೇಕಾದವರನ್ನು ಬದುಕು ಎತ್ತೆತ್ತಲೋ ಎಳೆದಾಡಿತು. ಆಗಲೇ ಅವರ ಅಣ್ಣ ಬಿ.ಆರ್. ತುಬಾಕಿ ನಗರದಲ್ಲಿ ಕನ್ನಡ ಪುಸ್ತಕಾಲಯ ತೆರೆದರು. ಅಂದಿನಿಂದ ಇಂದಿನವರೆಗೆ ಹನುಮಂತಪ್ಪ ತುಬಾಕಿ ಪುಸ್ತಕಗಳ ಜತೆಗೇ 30 ವರ್ಷ ಬದುಕು ಸವೆಸಿದ್ದಾರೆ. ಪುಸ್ತಕಾಲಯದಿಂದ ಪುಸ್ತಕ ತಂದು ಇಲ್ಲಿ ಮಾರುತ್ತಾರೆ.

ನೂರಾರು ಪುಸ್ತಕಗಳ ಪೈಕಿ 3, 4 ಮಾರಾಟವಾದರೆ ಅದೇ ದೊಡ್ಡ ವ್ಯಾಪಾರ. ಪತ್ನಿ, ಕುಟುಂಬದವರು ಆಕ್ಷೇಪಿಸುತ್ತಾರೆ. ಆದರೂ ಗೀಳು ಬಿಡುವುದಿಲ್ಲ. ಪುಸ್ತಕ ಓದದಿದ್ದರೆ ನಿದ್ದೆ ಬರುವುದಿಲ್ಲ. ಹಾಗೆಂದು ಕುಟುಂಬ ಆರ್ಥಿಕವಾಗಿ ಬಲವಾಗಿಲ್ಲ. ಪತ್ನಿ ಮನೆ ಕೆಲಸಕ್ಕೆ ಹೋಗುತ್ತಾರೆ. ಇಬ್ಬರು ಮಕ್ಕಳು ಸಮೀಪದ ಸರ್ಕಾರಿ ಶಾಲೆಗೆ ಹೋಗುತ್ತಿದ್ದಾರೆ. ದೇವರಾಜ ಅರಸು ಕಾಲೊನಿಯ ತಡಿಕೆಯ ಪುಟ್ಟ ಗೂಡು ಇವರ ಅರಮನೆ.

ಪುಸ್ತಕ ಕಾಯಕಕ್ಕೆ ಮುನ್ನ ತುಬಾಕಿ ಬೆಳಿಗ್ಗೆ 6ರಿಂದ 8ರವರೆಗೆ ಮನೆ ಮನೆಗೆ ಹಾಲು ಹಾಕುತ್ತಾರೆ. ಬೆಳಿಗ್ಗೆ 11ರಿಂದ ಮಧ್ಯಾಹ್ನ 3ರವರೆಗೆ ಪುಸ್ತಕ ವ್ಯಾಪಾರ. ಸಂಜೆ 6ರಿಂದ ರಾತ್ರಿ11ರವರೆಗೆ ಹಣಕಾಸು ಸಂಸ್ಥೆಯೊಂದರ ಪಿಗ್ಮಿ ಸಂಗ್ರಹಿಸುತ್ತಾರೆ. ಇಷ್ಟು ದುಡಿಮೆಯಿದ್ದರೂ ಗಳಿಕೆ ಮಾತ್ರ ಅಷ್ಟಕ್ಕಷ್ಟೆ. ಅವರಿವರ ನೆರವು ಬದುಕು ಸಾಗಿಸಿದೆ. ಮುಂದೆ ಹೇಗೆ ಎಂಬ ಆತಂಕವೂ ಕಾಡುತ್ತಿದೆ ಎನ್ನುತ್ತಾರೆ ತುಬಾಕಿ.

‘ಬನ್ನಿ ಸಾರ್ ನೋಡಿ ಪುಸ್ತಕ ಒಯ್ಯಿರಿ ಚೆನ್ನಾಗಿದ್ದರೆ ಮಾತ್ರ ದುಡ್ಡು ಕೊಡಿ’ ಎಂದೇ ವಿನಯದಿಂದ ಓದುಗರನ್ನು ಸೆಳೆಯಲು ಪ್ರಯತ್ನಿಸುತ್ತಾರೆ. ‘ಕೆಲವರು ಷೋಕಿಗಾಗಿಯಾದರೂ ಖರೀದಿಸುವವರಿದ್ದಾರೆ. ಹಲವರು ಅಲಕ್ಷ್ಯದಿಂದ ಜೋಡಿಸಿಟ್ಟ ಪುಸ್ತಕಗಳನ್ನು ಕೆಡವುವವರೂ ಇದ್ದಾರೆ’ ಎಂದು ನೊಂದು ನುಡಿದರು ಅವರು.

ಪುಸ್ತಕ ಪ್ರೀತಿ ಅಂದರೆ: ಕೊಪ್ಪಳದ ಓದುಗರದ್ದು ವೈವಿಧ್ಯಮಯ ಅಭಿರುಚಿ. ಕೆಲವರು ವಿವಾದಾತ್ಮಕ ಲೇಖಕರ ಪುಸ್ತಕಗಳನ್ನು ಬಯಸುತ್ತಾರೆ. ಇನ್ನು ಕೆಲವರು ವಿವಾದ ರಹಿತ ಹಿರಿಯ ಲೇಖಕರ ಕೃತಿಗಳನ್ನು, ವ್ಯಕ್ತಿತ್ವ ವಿಕಸನದ ಪುಸ್ತಕಗಳನ್ನು ಬಯಸುತ್ತಾರೆ. ಹಾಗೆ ನೋಡಿದರೆ ಕೊಪ್ಪಳದಲ್ಲಿ ಓದುವ ಅಭಿರುಚಿ ಹೆಚ್ಚು ಇದೆ. ಕೊಳ್ಳುವ ಮನೋಭಾವ ಬೇಕು ಎಂದು ಅವರು ಆಶಿಸಿದರು. ತುಬಾಕಿ ಮೊಬೈಲ್ ಸಂಖ್ಯೆ: 9448973363

ಯಾವುದಾದರೂ ಆರ್ಥಿಕ ಸಂಸ್ಥೆ ಕಡಿಮೆ ಬಡ್ಡಿಯಲ್ಲಿ ಸಾಲ ಕೊಟ್ಟರೆ ಇನ್ನಷ್ಟು ಪುಸ್ತಕ ತಂದು ಮಾರಾಟ ಮಾಡಬೇಕು ಎಂಬ ಆಸೆ ಇದೆ.
-ಹನುಮಂತಪ್ಪ ರಾಮಪ್ಪ ತುಬಾಕಿ,
ಪುಸ್ತಕ ಮಾರಾಟಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.