ತಿರುವನಂತಪುರಂ(ಐಎಎನ್ಎಸ್): ಯೆಮನ್ ಹಿಂಸಾಚಾರ ಪೀಡಿತ ಪ್ರದೇಶದಿಂದ ಭಾರತಕ್ಕೆ ಹಿಂದಿರುಗಲು ನಿರ್ಧರಿಸಿರುವ ಕೇರಳದ 50ಕ್ಕೂ ಹೆಚ್ಚು ಶುಶ್ರೂಷಕಿಯರು ಸೌದಿ ಅರೇಬಿಯ ಮತ್ತು ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳು ಸೇವಾನುಭವ ಮತ್ತು ವೃತ್ತಿ ಪ್ರಮಾಣಪತ್ರ ಸಮಸ್ಯೆಯನ್ನು ನಿವಾರಿಸುವಂತೆ ಒತ್ತಾಯಿಸಿದ್ದಾರೆ.

ಸೌದಿ ಅರೇಬಿಯಾದ ಹಿಂಸಾಚಾರ ಪೀಡಿತ ಸ್ಮಾತಾ ಪ್ರಾಂತ್ಯದ ಗಡಿ ಪ್ರದೇಶದಿಂದ ಭಾನುವಾರ ರಾತ್ರಿ ಶುಶ್ರೂಷಕಿಯರನ್ನು ಸ್ಥಳಾಂತರಿಸಲಾಗಿದೆ.

‘ಇಲ್ಲಿ ನಿರಂತರ ಶೇಲ್ ದಾಳಿ ನಡೆಯುತ್ತಿದ್ದು, ಸೌದಿ ಅರೇಬಿಯಾದ ಆರೋಗ್ಯ ಸಚಿವಾಲಯದ 150 ಹಾಸಿಗೆಯ ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಮೂರು ದಿನಗಳಿಂದ ಭಯದಲ್ಲಿ ಕಾಲ ನೂಕಿದ್ದೇವೆ. 50 ಶುಶ್ರೂಷಕಿಯರು ಭಾರತಕ್ಕೆ ಹಿಂದಿರುಗಲು ನಿರ್ಧರಿಸಿದ್ದೇವೆ. ಇದು ನಮ್ಮ ಕೆಲಸದ ಕೊನೆಯ ದಿನ’ ಎಂದು ಶುಶ್ರೂಷಕಿಯೊಬ್ಬರು ದೂರವಾಣಿಯಲ್ಲಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.