ನವದೆಹಲಿ:  ಹಿರಿಯ ಸಾಹಿತಿ ಎಸ್. ಎಲ್. ಭೈರಪ್ಪ ಅವರನ್ನು ‘ರಾಷ್ಟ್ರೀಯ ಸಂಶೋಧನಾ ಪ್ರೊಫೆಸರ್’ ಎಂದು ನೇಮಕ ಮಾಡಲಾಗುವುದೆಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ತಿಳಿಸಿದ್ದಾರೆ.

ಲೋಕಸಭೆಯಲ್ಲಿ ಬುಧವಾರ ಅಳಿವಿನ ಅಂಚಿನಲ್ಲಿರುವ ಉಪಭಾಷೆಗಳ ರಕ್ಷಣೆ ಹಾಗೂ ಸಾಹಿತ್ಯದಲ್ಲಿ ಅನುವಾದ ಕಾರ್ಯದ ಕುರಿತು ಹೇಳಿಕೆ ನೀಡಿದ ಸಚಿವೆ ಇರಾನಿ, ಭೈರಪ್ಪ ಅವರು ಸಾಹಿತ್ಯಕ್ಕೆ ನೀಡಿದ ಕೊಡುಗೆ ಗಮನದಲ್ಲಿಟ್ಟುಕೊಂಡು ಗೌರವ ಸಲ್ಲಿಸಲಾಗುತ್ತಿದೆ ಎಂದರು. ಮುಂಬೈ ಉತ್ತರ ಕ್ಷೇತ್ರದ ಸಂಸದೆ ಪೂನಂ ಮಹಾಜನ್ ಅವರು ಎತ್ತಿದ ಪ್ರಶ್ನೆಗೆ ಇರಾನಿ ಉತ್ತರಿಸುತ್ತಿದ್ದರು.

ಸಾಹಿತ್ಯದಲ್ಲಿನ ಅನುವಾದದ ಉತ್ತೇಜನಕ್ಕೆ ಸರ್ಕಾರ ಯಾವ ಕ್ರಮ ಕೈಗೊಂಡಿದೆ ಎಂದು ಕೇಳಿದ ಪೂನಂ ಮಹಾಜನ್, ಭೈರಪ್ಪ ಅವರ ಕೃತಿಗಳು ಹಲವು ಭಾಷೆಗಳಿಗೆ ಅನುವಾದವಾಗಿ ಮೆಚ್ಚುಗೆ ಗಳಿಸಿದ್ದನ್ನು ಉಲ್ಲೇಖಿಸಿದರು.

ಮೇಧಾವಿಗಳು, ವಿದ್ವಾಂಸರನ್ನು ಗುರುತಿಸಲು ಕೇಂದ್ರ ಸರ್ಕಾರ 1949ರಲ್ಲಿಯೇ ‘ರಾಷ್ಟ್ರೀಯ ಸಂಶೋಧನಾ ಪ್ರೊಫೆಸರ್’ ಎಂಬ ಗೌರವ ಪದವಿ ನೀಡಿ ಮನ್ನಣೆ ನೀಡುತ್ತಿದೆ. ಆಯಾ ಕ್ಷೇತ್ರಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿರುವ, 65 ವರ್ಷ ತುಂಬಿರುವ ಹಾಗೂ ಇನ್ನೂ ಸಂಶೋಧನೆ ಮಾಡಬಲ್ಲ ಸಾಮರ್ಥ್ಯ ಹೊಂದಿರುವ ವ್ಯಕ್ತಿಗಳಿಗೆ ಈ ಗೌರವ ನೀಡಲಾಗುತ್ತದೆ.

ಈ ಗೌರವ ಪಡೆಯುವ ವ್ಯಕ್ತಿಗಳಿಗೆ ತಿಂಗಳಿಗೆ ₨ 75,000 ಗೌರವಧನ ನೀಡಲಾಗುತ್ತದೆ. ಈ ಮನ್ನಣೆಗೆ ಪಾತ್ರರಾದ ವ್ಯಕ್ತಿಗಳು ಸಂಶೋಧನೆಗಾಗಿ ವರ್ಷಕ್ಕೆ ಒಂದು ಲಕ್ಷ ರೂಪಾಯಿ ಅನುದಾನವನ್ನೂ ಪಡೆಯಬಹುದಾಗಿದೆ.

ಐದು ವರ್ಷಗಳ ಅವಧಿಗೆ ಈ ನೇಮಕ ಮಾಡಲಾಗುತ್ತಿದ್ದು, ಸರ್ಕಾರ ಬಯಸಿದಲ್ಲಿ ಮತ್ತೂ ಐದು ವರ್ಷಗಳಿಗೆ ಅದನ್ನು ವಿಸ್ತರಿಸಬಹುದಾಗಿದೆ.

‘ಅಧಿಕೃತ ಮಾಹಿತಿ ಬಂದ ಬಳಿಕ ಪ್ರತಿಕ್ರಿಯೆ’
ಮೈಸೂರು: ‘ಕೇಂದ್ರ ಸರ್ಕಾರ ರಾಷ್ಟ್ರೀಯ ಪ್ರೊಫೆಸರ್ ಎಂದು ಘೋಷಿಸಿರುವ ಕುರಿತು ಅಧಿಕೃತ ಮಾಹಿತಿ ನನಗೆ ಬಂದಿಲ್ಲ. ಬಂದ ಮೇಲೆ ಪ್ರತಿಕ್ರಿಯಿಸುವೆ’ ಎಂದು ಹಿರಿಯ ಕಾದಂಬರಿಕಾರಿ ಎಸ್.ಎಲ್. ಭೈರಪ್ಪ ಬುಧವಾರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.