ನವದೆಹಲಿ (ಪಿಟಿಐ): ಮುಂಬೈ ಷೇರು ವಿನಿಮಯ ಕೇಂದ್ರದಲ್ಲಿ (ಬಿಎಸ್‌ಇ) ಸಂವೇದಿ ಸೂಚ್ಯಂಕ ದಾಖಲೆ ಮಟ್ಟದಲ್ಲಿ ವಹಿವಾಟು ನಡೆಸುತ್ತಿವೆ. ಇದರಿಂದ ಕಂಪೆನಿಗಳ ಒಟ್ಟಾರೆ ಮಾರುಕಟ್ಟೆ ಮೌಲ್ಯ ಶೀಘ್ರವೇ ₨100 ಲಕ್ಷ ಕೋಟಿ ತಲುಪಲಿದೆ.

ಸದ್ಯ ಬಿಎಸ್‌ಇಯಲ್ಲಿನ ಕಂಪೆನಿಗಳ ಒಟ್ಟಾರೆ ಮಾರುಕಟ್ಟೆ ಮೌಲ್ಯ ₨96,25,517 ಕೋಟಿಗೆ ಮುಟ್ಟಿದೆ. ₨100 ಲಕ್ಷ ಕೋಟಿ ತಲುಪಲು ಕೇವಲ ₨3.74 ಲಕ್ಷ ಬೇಕಿದೆ.

ಸದ್ಯ ಡಾಲರ್ ಎದುರು ರೂಪಾಯಿ ಮೌಲ್ಯ 60.65ರಂತೆ 1.58 ಲಕ್ಷ ಕೋಟಿ ಡಾಲರ್ ತಲುಪಿದೆ. ಜೂನ್‌ನಲ್ಲಿ 1.5 ಲಕ್ಷ ಕೋಟಿ ಡಾಲರ್ ಗರಿಷ್ಠ ಮಟ್ಟ ತಲುಪಿತ್ತು.

ದೇಶದ ಷೇರುಪೇಟೆಯಲ್ಲಿ ಬಿಎಸ್‌ಇ ಸಂವೇದಿ ಸೂಚ್ಯಂಕ ಈ ವರ್ಷ 5,890.36 ಅಂಶಗಳಷ್ಟು (ಶೇ27.82) ಏರಿಕೆ ಕಂಡಿದ್ದು, ಹೂಡಿಕೆದಾರರು ಉತ್ತಮ ಲಾಭ ಗಳಿಸಿದ್ದಾರೆ.

₨1ಲಕ್ಷ ಕೋಟಿ ಕಂಪೆನಿಗಳು
ಟಿಸಿಎಸ್, ಒಎನ್‌ಜಿಸಿ, ಆರ್‌ಐಎಲ್, ಐಟಿಸಿ, ಕೋಲ್ ಇಂಡಿಯಾ, ಇನ್ಫೋಸಿಸ್, ಎಚ್‌ಡಿಎಫ್‌ಸಿ ಬ್ಯಾಂಕ್, ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಐಸಿಐಸಿಐ ಬ್ಯಾಂಕ್, ಸನ್ ಫಾರ್ಮಾ, ಭಾರ್ತಿ ಏರ್‌ಟೆಲ್, ಎಚ್‌ಡಿಎಫ್‌ಸಿ, ಎಲ್ ಅಂಡ್ ಟಿ, ವಿಪ್ರೊ, ಟಾಟಾ ಮೊಟಾರ್ಸ್ ಮತ್ತು ಎನ್‌ಟಿಪಿಸಿ.

ದೇಶದ ಪ್ರಮುಖ ಹೊರಗುತ್ತಿಗೆ ಕಂಪೆನಿ ಟಿಸಿಎಸ್ ರೂ 5,10,415.13 ಕೋಟಿ ಮೌಲ್ಯ ಹೊಂದಿದೆ. ವಿದೇಶಿ ಹೂಡಿಕೆ ಒಳಹರಿವು ಹೆಚ್ಚುತ್ತಿರುವುದರಿಂದ ಷೇರುಪೇಟೆಯಲ್ಲಿ ಉತ್ತಮ ವಹಿವಾಟಿಗೆ ಕಾರಣವಾಗಿದೆ ಎಂದು ವಿಶ್ಲೇಷಣೆ ಮಾಡಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.