ಸ್ಟಾಕ್‌ಹೋಂ (ಐಎಎನ್‌ಎಸ್): ಭೌತಶಾಸ್ತ್ರಕ್ಕೆ ನೀಡಲಾಗುವ ನೊಬೆಲ್ ಪುರಸ್ಕಾರವನ್ನು ಈ ಬಾರಿ ಇಬ್ಬರಿಗೆ ನೀಡಲಾಗಿದೆ.

ಜಪಾನ್ ದೇಶದ ಭೌತ ವಿಜ್ಞಾನಿ ಟಕಾಕಿ ಕಜಿಟಾ ಹಾಗೂ ಕೆನಡ ದೇಶದ ಅರ್ಥರ್ ಮೆಕ್‌ಡೊನಾಲ್ಡ್ ಅವರು 2015ನೇ ಸಾಲಿನ ಭೌತಶಾಸ್ತ್ರದ ನೊಬೆಲ್ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ.

ನ್ಯೂಟ್ರೀನೊ ಕಣಗಳ ಬಗ್ಗೆ ( ಬೆಳಕಿನ ವೇಗದಲ್ಲಿ ಚಲಿಸುವ ಕಣ) ಅಥವಾ ಪರಮಾಣುವಿನ ಉಪಕಣಗಳ ಬಗ್ಗೆ ನಡೆಸಿದ ಅಧ್ಯಯನಕ್ಕಾಗಿ ಈ ಗೌರವ ಲಭಿಸಿದೆ.

ಟಕಾಕಿ ಕಜಿಟಾ (56) ಅವರು ಟೊಕಿಯೊ ವಿಶ್ವವಿದ್ಯಾಲಯದ ಉಪನ್ಯಾಸಕರು ಮತ್ತು ಕಾಸ್ಮಿಕ್ ರೇ ರೀಸರ್ಚ್ ಇನ್‌ಸ್ಟಿಟ್ಯೂಟ್‌ನ ನಿರ್ದೇಶಕರು.

ಮ್ಯಾಕ್‌ಡೊನಾಲ್ಡ್ (72) ಅವರು ಕಿಂಗ್‌ಸ್ಟನ್‌ನ ಕ್ವೀನ್ಸ್ ವಿಶ್ವವಿದ್ಯಾಲಯದ ವಿಶ್ರಾಂತ ಉಪನ್ಯಾಸಕರು.

ಇವರಿಬ್ಬರು ಅಂದಾಜು 9.60 ಲಕ್ಷ ಡಾಲರ್ ಮೊತ್ತದ ಪ್ರಶಸ್ತಿಯನ್ನು ಸಮಾನವಾಗಿ ಹಂಚಿಕೊಳ್ಳಲಿದ್ದಾರೆ. ಡಿಸೆಂಬರ್ ತಿಂಗಳ 10ರಂದು ನೊಬೆಲ್ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.