ಬೆಂಗಳೂರು: ‘ಸರ್ಕಾರಿ ನೌಕರರಿಗೆ ವಸ್ತ್ರಸಂಹಿತೆ ಕಡ್ಡಾಯ ಮಾಡುವುದಾ ದರೆ ಖಾದಿ ವಸ್ತ್ರವನ್ನೇ ಆಯ್ಕೆಮಾಡಿ ಕೊಳ್ಳಬೇಕು. ಈ ನೆಪದಲ್ಲಾದರೂ ಒಂದಷ್ಟು ಜನರಿಗೆ ಉದ್ಯೋಗ ದೊರೆ ಯುತ್ತದೆ’ ಎಂದು ಸಾಹಿತಿ ದೇವನೂರ ಮಹಾದೇವ ಅಭಿಪ್ರಾಯಪಟ್ಟರು.

ದೇಸಿ ಧರ್ಮದರ್ಶಿ ಸಂಸ್ಥೆಯು ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಬುಧವಾರ ಆಯೋಜಿಸಿದ್ದ 2011–12 ಸಾಲಿನ ‘ದಾಸಿಮಯ್ಯ ರಾಷ್ಟ್ರೀಯ ಪ್ರಶಸ್ತಿ’ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಚರಕಕ್ಕೆ ನೇಣು ಹಾಕಿರುವ ಪರಿಣಾಮ ದೇಶ ಆರ್ಥಿಕ ಸಂಕಷ್ಟ ಎದುರಿಸುತ್ತಿದೆ. ಗುಲಾಮಗಿರಿಯನ್ನೇ ಅಭಿವೃದ್ಧಿ ಎಂದು ಭಾವಿಸಲಾಗುತ್ತಿದ್ದು, ದೇಶ ತ್ರಿಶಂಕು ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದೆ’ ಎಂದು ಹೇಳಿದರು.

‘ಅಭಿವೃದ್ಧಿಯೆಂಬುದು ಅಂಟು ಜಾಡ್ಯವಾಗಿದೆ. ಅದು ಗಾಳಿಯಂತೆ ವೇಗವಾಗಿ ಹರಡುತ್ತಿದೆ. ಕ್ರಾಂತಿ ಯೆಂಬುದು ಕೂಡ ಬಡವಾಗಿದೆ. ನೂರು ಜನರನ್ನು ಒಂದು ಕೊಠಡಿಯಲ್ಲಿ ಕೂಡಿ ಹಾಕಿ ಕ್ರಾಂತಿ ಬಗ್ಗೆ ಕೇಳಿದರೆ ನೂರು ಉತ್ತರ ಬರುತ್ತದೆ. ಈ ಅಭಿವೃದ್ಧಿ, ಸಂಸ್ಕೃತಿ, ಕ್ರಾಂತಿ ಹಾಗೂ ವಿರಹ ಸದಾ ನೂರು ತರಹ’ ಎಂದು ಹಾಸ್ಯ ಚಟಾಕಿ ಹಾರಿಸಿದರು.

‘ಗ್ರೀಕ್ ದೇಶ ಅಭಿವೃದ್ಧಿಗೆ ತೆರೆದುಕೊಂಡ ಮೊದಲ ದೇಶ. ಆದರೆ, ಇಂದು ಸರ್ಕಾರವನ್ನು ನಡೆಸಲು ಸಾಧ್ಯವಾಗದೇ ತನ್ನ ಆಸ್ತಿಯನ್ನು ಮಾರಿಕೊಳ್ಳುವ ಪರಿಸ್ಥಿತಿ ತಂದು ಕೊಂಡಿದೆ. ಆಸ್ತಿ ಖರೀದಿಸುವಂತೆ ಐರೋಪ್ಯ ದೇಶಗಳಿಗೆ ದುಂಬಾಲು ಬಿದ್ದಿದೆ. ಅವರು ಕೂಡ ಸಾಲಬಾಧೆ ಯಿಂದ ನರಳುತ್ತಿದ್ದಾರೆ. ಈಗ ಅವರ ಚಿತ್ತವೆಲ್ಲ ಚೀನಾದತ್ತ’ ಎಂದು ತಿಳಿಸಿದರು.

‘ಅಮೆರಿಕ ಅನುಸರಿಸಿದ ಆರ್ಥಿಕ ನೀತಿ ಹಾಗೂ ಖಾಸಗೀಕರಣದ ಪರಿ ಣಾಮದಿಂದಲೇ ಆರ್ಥಿಕ ಕುಸಿತ ಉಂಟಾಗಿದೆ. ಭಾರತದಲ್ಲಿ ಕಮ್ಯುನಿ ಸ್ಟರು ಖಾಸಗೀಕರಣದ ಜುಟ್ಟು ಹಿಡಿದು ಕೊಂಡಿದ್ದರಿಂದ ಈ ಪರಿಸ್ಥಿತಿ ಬರಲಿಲ್ಲ. ಆರ್ಥಿಕ ಕುಸಿತ ಉಂಟಾದರೆ ಅಮೆರಿಕ ಮತ್ತೊಂದು ದೇಶದ ಮೇಲೆ ದಾಳಿ ಮಾಡಿ ನಷ್ಟ ತುಂಬಿಕೊಳ್ಳುತ್ತದೆ. ಆದರೆ ಈ ಶಕ್ತಿ ಭಾರತಕ್ಕೆ ಇದೆಯೇ? ಎಂದು ಅವರು ಪ್ರಶ್ನಿಸಿದರು.

‘ಗುಲಾಮಿ ಅಭಿವೃದ್ಧಿಯ ಜನಕ ಪಿ.ವಿ.ನರಸಿಂಹರಾವ್. ಇದನ್ನು ಪ್ರಧಾನಿ ಮನಮೋಹನ ಸಿಂಗ್ ಹಾಗೂ ಕೇಂದ್ರ ವಿತ್ತ ಸಚಿವ ಚಿದಂಬರಂ ಮುಂದುವರಿಸಿಕೊಂಡು ಬಂದಿದ್ದಾರೆ. ಇವರ ಮುಂದುವರಿದ ಸಂತಾನವೇ ನರೇಂದ್ರ ಮೋದಿ’ ಎಂದು ಅವರು ಟೀಕಿಸಿದರು.

‘ಮೊದಲ ಮೂರು ಮಂದಿ ಅಭಿವೃದ್ಧಿಗೆ ಪ್ರತಿಭಟನೆ ಎದುರಾದರೆ ತಂತ್ರ–ಕುತಂತ್ರ ಬಳಸಿ, ತಣ್ಣಗೆ ಮಾಡುತ್ತಾರೆ. ಆದರೆ, ಮೋದಿ ಈ ವಿಚಾರದಲ್ಲಿ ಇನ್ನೂ ಶಿಶು. ಒಂದೇ ಏಟಿಗೆ ಎರಡು ಹೋಳು ಎಂಬ ನೀತಿ ಅನುಸರಿಸುತ್ತಾರೆ. ಅಭಿವೃದ್ಧಿಗೆ ತೊಡಕಾದವರನ್ನು ಬುಲ್ಡೋಜರ್ ಹಾಯಿಸಲು ಅವರು ಸಿದ್ಧರಾಗಿದ್ದಾರೆ’ ಎಂದು ವ್ಯಂಗ್ಯವಾಡಿದರು.

‘ವಿಶ್ವ ವ್ಯಾಪಾರ ಸಂಸ್ಥೆ ಹೇಳಿದ ಕಡೆ ಹೆಬ್ಬೆಟ್ಟು ಒತ್ತುವ ಸಂತಾನ ಬೇಡವೇ ಬೇಡ. ಉದ್ಯೋಗ ಮತ್ತು ಸ್ವಾವಲಂ ಬನೆ, ಸಮತೆ ಮತ್ತು ಸಂಪತ್ತು ಅಭಿ ವೃದ್ಧಿಯ ಜತೆಯಾಗಬೇಕು. ಸಾಲು ಸಾಲು ಗುಡಿಸಲುಗಳ ನಡುವೆ ಮಾಲ್ ಗಳು ತಲೆಯೆತ್ತುತ್ತಿವೆ. ಮಧ್ಯಮ ವರ್ಗದವರು ಕೊಳ್ಳುಬಾಕರಾಗುತ್ತಿ ದ್ದಾರೆ. ಸಾವು ಕೂಡ ಕಂತು ರೂಪದಲ್ಲಿ ದೊರೆಯುತ್ತಿದೆ’ ಎಂದ ಅವರು, ‘ಸುಭಾಷ್ ಪಾಳೇಕರ್ ಅವರ ಸಾವ ಯವ ಕೃಷಿ, ರಾಳೇಗಾವ್ ಸಿದ್ದಿಯಲ್ಲಿ ಅನುಸರಿಸಿದ ಜಲ ಮಾದರಿ ಹಾಗೂ ಪ್ರಸನ್ನ ಅವರ ಖಾದಿ ಉದ್ಯಮ ಅಭಿ ವೃದ್ಧಿಯನ್ನು ನಿಜ ಅರ್ಥದಲ್ಲಿ ಕಟ್ಟಿಕೊಡಬಲ್ಲವು’ ಎಂದರು.

ದಾಸಿಮಯ್ಯ ರಾಷ್ಟ್ರೀಯ ಪ್ರಶಸ್ತಿ ಯನ್ನು ಮೇಲುಕೋಟೆಯ ಸುರೇಂದ್ರ ಕೌಲಗಿ, ಆಂಧ್ರದ ಮಾಚರ್ಲ ಮೋಹನರಾವ್ (ವೈಯಕ್ತಿಕ ವಿಭಾಗ), ರಾಣೆಬೆನ್ನೂರಿನ ಕುರುಬರ ಉಣ್ಣೆಯ ಔದ್ಯೋಗಿಕ ಬೆಳವಣಿಗೆಯ ಸಹಕಾರಿ ಸಂಘ, ಕುಂದರಗಿಯ ಕುರುಬರ ಉಣ್ಣೆಯ ಉತ್ಪಾದಕರ ಸಹಕಾರ ಸಂಘಕ್ಕೆ (ಸಾಂಸ್ಥಿಕ ವಿಭಾಗ) ಪ್ರದಾನ ಮಾಡಲಾಯಿತು. ಪ್ರಶಸ್ತಿಯು ತಲಾ ₨ 50 ಸಾವಿರ ನಗದು, ಗಾಂಧೀಜಿಯವರ ಕಂಚಿನ ಪುತ್ಥಳಿ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.