ಕಾರ್ಕಳ: ಕಾರ್ಕಳದ ಭೈರವ ಅರಸರ ಆಸ್ಥಾನ ಕವಿಯಾಗಿ ಮೆರೆದ ಮಹಾಕವಿ, ಸಾಂಗತ್ಯ ಚಕ್ರವರ್ತಿ ಮೂಡುಬಿದಿರೆಯ ರತ್ನಾಕರ ವರ್ಣಿ ರಚಿಸಿದ ‘ಭರತೇಶ ವೈಭವ’ ಕೃತಿಯಲ್ಲಿ ಯೋಗ ಭೋಗ ಸಮನ್ವಯವನ್ನು ಸಾಧಿಸಿ ತೋರಿಸಿರುವುದು ನಮಗೆಲ್ಲ ಸದಾ ಜೀವನಸ್ಫೂರ್ತಿಯನ್ನು ನೀಡುತ್ತದೆ. ಶೃಂಗಾರದಿಂದ ಆಧ್ಯಾತ್ಮಿಕ ಸುಖದ ವೈಭವದ ಸೊಗಡನ್ನು ಈ ಅಪೂರ್ವ ಕೃತಿ ಪ್ರತಿಬಿಂಬಿಸುತ್ತದೆ ಎಂದು ಮೂಡುಬಿದಿರೆಯ ಜೈನ ಪ್ರೌಢಶಾಲೆಯ ಶಿಕ್ಷಕ ಮುನಿರಾಜ ರೆಂಜಾಳ ಹೇಳಿದರು.

ಕಾರ್ಕಳದಲ್ಲಿ ಭಗವಾನ್ ಬಾಹುಬಲಿ ಸ್ವಾಮಿ ಮಸ್ತಕಾಭಿಷೇಕ ಸಂದರ್ಭದಲ್ಲಿ ಗುರುವಾರ ಏರ್ಪಡಿಸಿದ ಮಹಾಕವಿ ರತ್ನಾಕರವರ್ಣಿ ಸಂಸ್ಮರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

84 ಸಂಧಿಗಳಲ್ಲಿ 10,000 ಪದ್ಯಗಳನ್ನು ಹೊಂದಿರುವ ಭರತೇಶ ವೈಭವ ಕೃತಿಯನ್ನು ಓದುವುದಕ್ಕಿಂತಲೂ ಹಾಡಿ ಅದರ ರಸಗ್ರಹಣ ಮಾಡಬೇಕು. ಯೋಗ ಭೋಗ ಸಮನ್ವಯದ ಸಾಧನೆ ಮಾಡಿದ ರತ್ನಾಕರವರ್ಣಿ ಲೌಕಿಕ ಹಾಗೂ ಧಾರ್ಮಿಕ ಕೃತಿಗಳನ್ನು ರಚಿಸಿ ಖ್ಯಾತಿ ಪಡೆದಿರುವ ಮಹಾಕವಿ ಎಂದು ಅವರು ಬಣ್ಣಿಸಿದರು. ಸಂಸಾರದಲ್ಲಿದ್ದುಕೊಂಡೂ ಆಧ್ಯಾತ್ಮಿಕ ಸಾಧನೆ ಮಾಡಬಹುದು ಎಂದು ತೋರಿಸುವ ಕೃತಿ ಭರತೇಶ ವೈಭವ ಎಂದು ಮುನಿರಾಜ ರೆಂಜಾಳ ಹೇಳಿದರು.

ಈ ಮಹಾಕವಿಯ ಕೃತಿಗಳನ್ನು ನಾವು ಓದುವುದೇ ಅವರಿಗೆ ವ್ಯಕ್ತ ಪಡಿಸುವ ನಿಜವಾದ ಅಭಿಮಾನ, ಗೌರವ ಆಗಿದೆ ಎಂದು ಅವರು ತಿಳಿಸಿದರು.

ಕವಿ ಗೋಷ್ಠಿ: ಬಳಿಕ ನಡೆದ ಕವಿ ಗೋಷ್ಠಿಯಲ್ಲಿ ಬೆಂಗಳೂರಿನ ಪಿ. ಜಯಲಕ್ಷ್ಮಿ ಅಧಿಕಾರಿ, ಮಂಗಳೂರಿನ ಎಂ.ವಿ ಶೆಟ್ಟಿ, ಗಣೇಶ್ ಪ್ರಸಾದ್ ಜಿ, ಜಿನೇಶ್ ನಲ್ಲೂರು, ನಿರ್ಮಲಾ ಕೃಷ್ಣರಾಜ ಮೂಡಬಿದ್ರೆ, ಶ್ವೇತಾ ಜೈನ್ ದರೆಗುಡ್ಡೆ, ನಲ್ಲೂರು ಸುಭಾಶ್ಚಂದ್ರ ಜೈನ್, ಉಜಿರೆ ಸುಗುಣಾ ಎಸ್.ಡಿ ಶೆಟ್ಟಿ, ಜಯಕೀರ್ತಿ ಜೈನ್ ಹಿರಿಯಂಗಡಿ, ಜಿನೇಶ್ ಇರ್ವತ್ತೂರು ಕವನ ವಾಚನ ಮಾಡಿದರು.

ಅಧ್ಯಕ್ಷತೆ ವಹಿಸಿದ ಪ್ರೊ. ನಾ’ಉಜಿರೆ ಸ್ವರಚಿತ ಕವನ ವಾಚಿಸಿ ತನ್ನ ಆಶಯ ವ್ಯಕ್ತ ಪಡಿಸಿದರು. ಕಾರ್ಕಳದ ಬಾಹುಬಲಿ ಬೆಟ್ಟದಲ್ಲಿ ಪ್ರತಿ ವರ್ಷ ನಡೆಯುವ ರಥೋತ್ಸವ ಸಂದರ್ಭದಲ್ಲಿ ಕವಿಗೋಷ್ಠಿ ಏರ್ಪಡಿಸಿ ಬಾಹುಬಲಿಗೆ ಕಾವ್ಯದ ರಸಾಭಿಷೇಕ ಮಾಡಬೇಕು ಎಂದು ಅವರು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.