ಗುರುವಾರ, 27 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ರೈಲಿಗೆ ಬಯೋಡೀಸೆಲ್‌ ಬಳಕೆ ಶುರು

Last Updated 3 ಡಿಸೆಂಬರ್ 2015, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: ನೈರುತ್ಯ ರೈಲ್ವೆ ವಲಯದಲ್ಲಿ ಬಯೋಡೀಸೆಲ್‌ ಮಿಶ್ರಿತ ಇಂಧನ ಬಳಕೆ ಗುರುವಾರದಿಂದ ಆರಂಭವಾಯಿತು. ಇಂತಹ ಎಂಜಿನ್‌ ಅಳವಡಿಸಲಾಗಿದ್ದ ಹುಬ್ಬಳ್ಳಿ–ಬೆಂಗಳೂರು ನಡುವೆ ಸಂಚರಿಸುವ ಜನಶತಾಬ್ದಿ ರೈಲಿಗೆ ಹಸಿರು ನಿಶಾನೆ ತೋರಿಸಿದ ನೈರುತ್ಯ ರೈಲ್ವೆ ಪ್ರಧಾನ ವ್ಯವಸ್ಥಾಪಕ ಪ್ರದೀಪ್‌ ಕುಮಾರ್‌ ಸಕ್ಸೇನಾ, ‘ಇಂಗಾಲದ ಪ್ರಮಾಣ ಕಡಿಮೆ ಮಾಡುವ ನಿಟ್ಟಿನಲ್ಲಿ ವಲಯದಲ್ಲಿ ಮೊದಲ ಹೆಜ್ಜೆ ಇದು’ ಎಂದರು.

‘ಸದ್ಯ ಹೈ ಸ್ಪೀಡ್‌ ಡೀಸೆಲ್‌ (ಎಚ್‌ಎಸ್‌ಡಿ) ಬಳಸಲಾಗುತ್ತಿದ್ದು, ಇದಕ್ಕೆ ಶೇ 5ರಷ್ಟು ಬಯೋಡೀಸೆಲ್‌ ಮಿಶ್ರಣ ಮಾಡಲಾಗುವುದು. ಇದರಿಂದ ಎಂಜಿನ್‌ ಬಾಳಿಕೆ ಕೂಡ ಹೆಚ್ಚಾಗುತ್ತದೆ’ ಎಂದರು.

‘ಹುಬ್ಬಳ್ಳಿ, ಬೆಂಗಳೂರು ಮತ್ತು ಹೊಸಪೇಟೆಯಲ್ಲಿರುವ ರೈಲ್ವೆ ಡಿಪೋಗಳಲ್ಲಿ ಬಯೋಡೀಸೆಲ್‌ ಮಿಶ್ರಿತ ಇಂಧನ ಲಭ್ಯವಿದ್ದು, ಎರಡನೇ ಹಂತದಲ್ಲಿ ಅರಸೀಕೆರೆ ಮತ್ತು ಕೃಷ್ಣರಾಜಪುರಂ ಡಿಪೋಗಳಲ್ಲೂ ಪೂರೈಕೆ ಆಗಲಿದೆ’ ಎಂದು ನೈರುತ್ಯ ರೈಲ್ವೆಯ ಚೀಫ್‌ ಮೋಟಿವ್‌ ಪವರ್‌ ಎಂಜಿನಿಯರ್‌ ಶ್ಯಾಮ್‌ಧರ ರಾಮ್‌ ಹೇಳಿದರು.

‘ಒಂದು ವರ್ಷದೊಳಗೆ ನೈರುತ್ಯ ವಲಯದ ಎಲ್ಲ 13 ಡಿಪೋಗಳಲ್ಲೂ ಬಯೋಡೀಸೆಲ್‌ ಮಿಶ್ರಿತ ಇಂಧನ ಲಭ್ಯವಾಗಲಿದೆ. ಮುಂದಿನ ಹಂತದಲ್ಲಿ ಮಿಶ್ರಣ ಪ್ರಮಾಣವನ್ನು ಶೇ 10ಕ್ಕೆ ಹೆಚ್ಚಿಸಲಾಗುವುದು. ಈ ವ್ಯವಸ್ಥೆಗೆ ಹೆಚ್ಚುವರಿಯಾಗಿ ಹಣ ವ್ಯಯ ಮಾಡುತ್ತಿಲ್ಲ’ ಎಂದರು. 

‘ಬಯೋಡೀಸೆಲ್‌ ಬಂಕ್‌ ಒಂದಕ್ಕೆ ₹ 15 ಲಕ್ಷ ವೆಚ್ಚ ತಗಲುತ್ತದೆ. ಈ ವೆಚ್ಚವನ್ನು ಕಂಪೆನಿಯೇ ಭರಿಸಲಿದೆ. ಮುಂದಿನ ದಿನಗಳಲ್ಲಿ ಬಯೋಡೀಸೆಲ್‌ ಮಿಶ್ರಿತ ಇಂಧನವನ್ನು ನೇರವಾಗಿ ಪೂರೈಸಲಾಗುವುದು’ ಎಂದು ರೈಲ್ವೆಗೆ ಡೀಸೆಲ್‌ ಪೂರೈಸುವ ಐಓಸಿಯ ಪ್ರಧಾನ ವ್ಯವಸ್ಥಾಪಕ ರಮಣ್‌ರಾವ್‌ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT